Saturday, 14th December 2024

15 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಅತಿ ಹೆಚ್ಚು ಸ್ಥಾನ

ಮೈಸೂರಿನಿಂದ ಹೊಳೆನರಸೀಪುರ ಮಾರ್ಗವಾಗಿ ಚಿಕ್ಕಮಂಗಳೂರಿನಲ್ಲಿ ನಡೆಯುವ ಕಾರ್ಯಕರ್ತರ ಸಭೆಗೆ ತೆರಳುವ ಮಾರ್ಗ ಮಧ್ಯೆೆ ಮಲ್ಲಪ್ಪನಹಳ್ಳಿಿ ವೃತ್ತದ ಕನಕ ಭವನದ ಹತ್ತಿಿರ ಅವರ ಅಭಿಮಾನಿಗಳು ಅಡ್ಡಗಟ್ಟಿಿನಿಂತು ಪಟಾಕಿ ಸಿಡಿಸಿ, ಜೈಕಾರದ ಮೂಲಕ ಹಾರ ಹಾಕಿ ಸ್ವಾಾಗತಿಸಿದರು.

ವಿಶ್ವವಾಣಿ ಸುದ್ದಿಮನೆ ಹೊಳೆನರಸೀಪುರ
ಹದಿನೈದು ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆೆಸ್ ಅತೀ ಹೆಚ್ಚು ಸ್ಥಾಾನ ಪಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನುಡಿದರು.
ಚಿಕ್ಕಮಂಗಳೂರಿನಲ್ಲಿ ನಡೆಯುವ ಕಾರ್ಯಕರ್ತರ ಸಭೆಗೆ ತೆರಳುವ ಮಾರ್ಗ ಮಧ್ಯೆೆ ಮಲ್ಲಪ್ಪನಹಳ್ಳಿಿ ವೃತ್ತದ ಕನಕ ಭವನದ ಬಳಿ ಮಾತನಾಡಿ, ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ದ್ವಂದ್ವ ನೀತಿಯನ್ನು ಅನುಸರಿಸುತ್ತಿಿದೆ ಎಂದು ಅಪ್ಪ-ಮಕ್ಕಳ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಿದರು. ಕಾಂಗ್ರೆೆಸ್‌ನಲ್ಲಿ ಯುವಕರು ಮತ್ತು ಮುತ್ಸದ್ದಿಗಳನ್ನು ಒಟ್ಟಿಿಗೆ ಕೊಂಡೊಯ್ಯುವ ಉದ್ದೇಶದಿಂದ ಕಾಂಗ್ರೆೆಸ್ ಅನ್ನು ಮತ್ತಷ್ಟು ಬಲಾಢ್ಯಗೊಳಿಸಲಾಗುವುದು ಎಂದು ಅಭಿಪ್ರಾಾಯ ವ್ಯಕ್ತಪಡಿಸಿದರು.
ಕಾಂಗ್ರೆೆಸ್‌ನಲ್ಲಿ ಮೂಲ ಹಾಗೂ ವಲಸಿಗರ ಮಧ್ಯೆೆ ಯಾವುದೇ ಭಿನ್ನಾಾಭಿಪ್ರಾಾಯವಿಲ್ಲ ಇದು ಕೇವಲ ಮಾಧ್ಯಮದವರು ಹುಟ್ಟಿಿಹಾಕುತ್ತಿಿದ್ದಾಾರೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿಿ ಕುಮಾರಸ್ವಾಾಮಿ ಒಂದೊಂದು ವೇದಿಕೆಯಲ್ಲಿ ವಿಭಿನ್ನ ಹೇಳಿಕೆಯನ್ನು ನೀಡುತ್ತಿಿದ್ದಾಾರೆ ಸಮ್ಮಿಿಶ್ರ ಸರಕಾರ ಪತನವಾಗಲು ಸಿದ್ದರಾಮಯ್ಯರವರೇ ನೇರ ಕಾರಣ ಎಂದು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿಿದ್ದಾಾರೆ ಎಂದು ಆರೋಪಿಸಿದರು.

ಶ್ರೀರಾಮುಲು ಒಬ್ಬ ಸ್ವಾಾರ್ಥಿ
ಮೈಸೂರು: ಆರೋಗ್ಯ ಸಚಿವ ಶ್ರೀರಾಮುಲು ಒಬ್ಬ ಸ್ವಾಾರ್ಥಿ. ಸ್ವಾಾರ್ಥಕ್ಕೆೆ ಮಾತನಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮುಲು ನನ್ನ ವಿರುದ್ಧ ಸೋತಿದ್ದಾರೆ. ಅದಕ್ಕಾಾಗಿ ಮೈತ್ರಿಿ ಸರಕಾರದ ಪತನಕ್ಕೆೆ ತಮ್ಮನ್ನು ಕಾರಣ ಎಂಬಂಥ ಹತಾಶೆಯ ಮಾತುಗಳನ್ನಾಾಡುತ್ತಿಿದ್ದಾಾರೆ. ಅವರಿಗೆ ಮಾನ ಮಾರ್ಯಾದೆ ಇದ್ದಿದ್ದೇ ಆದಲ್ಲಿ ಬಿಜೆಪಿ ಅವರನ್ನು ಉಪಮುಖ್ಯಮಂತ್ರಿಿ ಮಾಡದೇ ಶಾಸಕರಲ್ಲದ ಲಕ್ಷ್ಮಣ್ ಸವದಿಗೆ ಹುದ್ದೆ ನೀಡಿದಾಗಲೇ ರಾಮುಲು ರಾಜೀನಾಮೆ ಕೊಡಬೇಕಿತ್ತು. ಪರಿಶಿಷ್ಟ ಜಾತಿಗೆ ಶೇ.7ರಷ್ಟು ಮೀಸಲು ನೀಡದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಆದರೆ ಅವರು ರಾಜೀನಾಮೆ ಕೊಡಲೇ ಇಲ್ಲ ಎಂದು ಕಾಲೆಳೆಯುವ ಪ್ರಯತ್ನ ಮಾಡಿದರು. ಸ್ವಾಾರ್ಥಿಗಳೆಲ್ಲ ಬಿಜೆಪಿಯಲ್ಲಿ ಒಂದು ಕಡೆ ಸೇರಿಕೊಂಡಿದ್ದಾರೆ. ಅವರಿಗೆ ಮೌಲ್ಯ ಸಿದ್ಧಾಾಂತ ಏನೂ ಇಲ್ಲ ಎಂದರು.