Wednesday, 11th December 2024

ಕಾಂಗ್ರೆಸ್ ಎಂದರೆ ಅಸ್ಥಿರತೆ, ಭ್ರಷ್ಟಾಚಾರ: ಪ್ರಧಾನಿ ನರೇಂದ್ರ ಮೋದಿ

ಬೊಕಾಖಾಟ್‌ : ಕಾಂಗ್ರೆಸ್ ಎಂದರೆ ಅಸ್ಥಿರತೆ, ಭ್ರಷ್ಟಾಚಾರ ಎನ್ನುವುದನ್ನು ನೆನಪಿಡಿ ಎಂದ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ನಲ್ಲಿ ‘ಡಬಲ್​ ಇಂಜಿನ್ ಎನ್‌ಡಿಎ ಸರ್ಕಾರ’ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಅಸ್ಸಾಂನ ಬೊಕಾಖಾಟ್​ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕೇಂದ್ರದಲ್ಲಿ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್​ನ ​ಡಬಲ್​ ಇಂಜಿನ್ ಸರ್ಕಾರವಿದ್ದಾಗ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರ ದುಪ್ಪಟ್ಟಾಗಿತ್ತು ಎಂದು ಹೇಳಿದರು.

ಎನ್‌ಡಿಎನ ಡಬಲ್ ಎಂಜಿನ್ ಸರ್ಕಾರವು ಶೌಚಾಲಯ ವ್ಯವಸ್ಥೆ, ಉಚಿತ ವಿದ್ಯುತ್ – ಎಲ್‌ಪಿಜಿ ಗ್ಯಾಸ್ – ವೈದ್ಯಕೀಯ ಚಿಕಿತ್ಸೆ ಯಂತಹ ಹಲವಾರು ಸೌಲಭ್ಯಗಳನ್ನು ಬಡ ಜನರಿಗೆ ನೀಡಿದೆ ಎಂದರು.

ಬ್ರಹ್ಮಪುತ್ರ ನದಿಯ ಎರಡೂ ತೀರಗಳಲ್ಲಿ ಆಧುನಿಕ ಸೇತುವೆಗಳನ್ನು ಬಿಜೆಪಿ ಸರ್ಕಾರ ನಿರ್ಮಿಸುತ್ತಿದೆ. ರಾಜ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಿದ್ದು ಎನ್ ಡಿಎ ಸರ್ಕಾರ ಎಂದು ಪ್ರಧಾನಿ ಹೇಳಿದರು.