Friday, 13th December 2024

ಕಿರುತೆರೆ ನಟಿ ದಿವ್ಯಾ ಭಟ್ನಾಗರ್​’ಗೆ ಕರೊನಾ ಪಾಸಿಟಿವ್

ಮುಂಬೈ: ಹಿಂದಿ ಕಿರುತೆರೆ ನಟಿ ದಿವ್ಯಾ ಭಟ್ನಾಗರ್​ ಅವರಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದ್ದು, ಸ್ಥಿತಿ ಗಂಭೀರವಾಗಿದೆ.

ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಟಾರ್ ಪ್ಲಸ್​ನ ‘ಯೆ ರಿಷ್ತಾ ಕ್ಯಾ ಕೆಹಲಾತಾ ಹೈ’ ಸೇರಿದಂತೆ ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ದಿವ್ಯಾ ಮನೆಮಾತಾಗಿರುವ ನಟಿ.

ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದುದರಿಂದ ಆಕ್ಸಿಮೀಟರ್​ ಖರೀದಿಸದ್ದು. ನಂತರ ಆಮ್ಲಜನಕ 71ಕ್ಕೆ ಇಳಿದಿರುವುದು ತಿಳಿದು ಬಂದಿತ್ತು. ಇದರಿಂದ ಮಗಳು ತುಂಬಾ ಚಿಂತಿತಳಾಗಿದ್ದಳು. ಇದೀಗ ಕರೊನಾವೂ ಸೇರಿಕೊಂಡಿರುವ ಕಾರಣ, ಅವಳ ಪಾಡು ಹೇಳತೀರದು ಎಂದು ನಟಿಯ ತಾಯಿ ದುಃಖ ತೋಡಿಕೊಂಡಿದ್ದಾರೆ.

ನಟಿ ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಅನೇಕ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಜತೆಗೆ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿಕೊಳ್ಳಿ ಎಂದು ನಟಿ ದಿವ್ಯಾ ಕೂಡ ಇನ್​ಸ್ಟಾಗ್ರಾಂನಲ್ಲಿ ಕೇಳಿಕೊಂಡಿದ್ದಾರೆ.