Friday, 13th December 2024

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಯೆಚೂರಿ ಪುತ್ರ ಕರೋನಾಕ್ಕೆ ಬಲಿ

ನವದೆಹಲಿ: ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಪುತ್ರ ಆಶೀಷ್ ಯೆಚೂರಿ(35) ಗುರುವಾರ ಮೃತಪಟ್ಟಿದ್ದಾರೆ.

ಕರೋನಾ ಸೋಂಕು ಶ್ವಾಸಕೋಶಕ್ಕೆ ಹರಡಿದ ಬಳಿಕ ಏ.22ರಿಂದ ಐಸಿಯುನಲ್ಲಿದ್ದರು. ಬೆಳಗ್ಗೆ ಕೋವಿಡ್-19ನಿಂದಾಗಿ ನನ್ನ ಹಿರಿಯ ಮಗನನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಲು ತುಂಬಾ ಬೇಸರವಾಗುತ್ತದೆ. ನನಗೆ ಭರವಸೆ ನೀಡಿದ್ದ, ಪುತ್ರನಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್‍ಗಳು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು ಹಾಗೂ ನಮ್ಮೊಂದಿಗೆ ನಿಂತ ಅಸಂಖ್ಯಾತ ಜನರಿಗೂ ಧನ್ಯವಾದ ಹೇಳುತ್ತೇನೆ ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ.