Tuesday, 10th September 2024

೬೦ಕ್ಕೂ ಹೆಚ್ಚು ಜನರು ದಮ್ಮಾ ಧೀಕ್ಷೆ ಪಡೆದು ಐತಿಹಾಸಿಕ ಹೆಜ್ಜೆ

ಚಿಕ್ಕಮಗಳೂರು: ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್‌ರವರು ತೋರಿದ ಬುದ್ಧ ಧರ್ಮ ಸೇರುವ ದಾರಿ ಯಲ್ಲಿ ಸಾಗುವ ಸಂಕಲ್ಪ ಮಾಡಿದ ಸುಮಾರು ೬೦ಕ್ಕೂ ಹೆಚ್ಚು ಜನರು ದಮ್ಮಾ ಧೀಕ್ಷೆ ಪಡೆದು ಜಿಲ್ಲೆಯಲ್ಲಿ ಐತಿಹಾಸಿಕ ಹೆಜ್ಜೆ ಇಟ್ಟ ಪ್ರಸಂಗ ಇಂದು ನಡೆಯಿತು.

ಭಾರತೀಯ ಭೌದ್ದ ಮಹಾಸಭಾ ಜಿಲ್ಲಾ ಶಾಖೆ ಏರ್ಪಡಿಸಿದ್ದ ದಮ್ಮೋಪದೇಶ ಹಾಗೂ ದÀಮ್ಮಾ ದೀಕ್ಷೆ ಕಾರ್ಯಕ್ರಮದಲ್ಲಿ ದಲಿತ ಚಳುವಳಿಗಳಲ್ಲಿ ತೊಡಗಿಸಿಕೊಂಡಿರುವ ಕೆಲವು ಕುಟುಂಬ ಸಮೇತರಾಗಿ ಮತ್ತು ಒಟ್ಟು ೬೦ಕ್ಕೂ ಹೆಚ್ಚು ಜನರು ಬೌದ್ಧ ಧರ್ಮ ಸ್ವೀಕರಿಸುವ ದÀಮ್ಮಾ ದೀಕ್ಷೆ ಪಡೆದು ಐತಿಹಾಸಿಕ ದಾಖಲೆ ಸೃಷ್ಟಿಸಿದರು.

ಬಿ.ಆರ್ ಅಂಬೇಡ್ಕರ್ ರವರು ೧೯೫೬ರ ಅಕ್ಟೋಬರ್ ೧೪ರಂದು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮರಳಿದ ಸಂಸ್ಥಾಪನ ದಿನದ ಅಂಗವಾಗಿ ಬೌದ್ಧ ಮಹಾಸಭಾ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .

ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಬಿ.ಬಿ ನಿಂಗಯ್ಯ ಅವರು ಅಕ್ಟೋಬರ್ ೧೪ ಭಾರತದ ಚರಿತ್ರೆಯಲ್ಲಿ ಮಹತ್ವದ ದಿನವಾಗಿದೆ ಇಂದು ಸಮಾಜದಲ್ಲಿ ಜಾತಿ ತಾರತಮ್ಯದಿಂದ ನುಜ್ಜು ಗುಜ್ಜಾಗಿದ್ದ ಶೋಷಿತ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ ನಮ್ಮಿಂದಲೇ ಬದಲಾವಣೆ ಆಗಬೇಕೆಂಬ ದೂರ ಸಂಕಲ್ಪದೊAದಿಗೆ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಸೇರ್ಪಡೆಯಾದ ಪವಿತ್ರವಾದ ದಿನದಂದು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು.

ಬೌದ್ಧ ಧರ್ಮವನ್ನು ಸ್ವೀಕರಿಸುವ ಉಪಾಸಕರಿಗೆ ಧಮ್ಮಾ ಬೋಧನೆ ಮಾಡಿ ದಮ್ಮೋಪದೇಶ ನೀಡಿದ ನ್ಯಾನ ಲೋಕ್ ಬಂತೇಜಿ ಅವರು ಬುದ್ಧ ಎಂದರೆ ಜ್ಞಾನ, ದೀಕ್ಷೆ ಎಂದರೆ ಸತ್ಯ, ಸತ್ಯದ ಮರ್ಗದಲ್ಲಿ ನಡೆಯುವುದೇ ಬೌದ್ಧ ಧರ್ಮದ ಗುರಿ ಎಂದು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ ಧರ್ಮ ದೀಕ್ಷೆ ಕಾರ್ಯಕ್ರಮ ಜಿಲ್ಲೆಯಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಿದೆ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವವರು ದೀಕ್ಷೆ ಪಡೆದವರು ಬುದ್ಧನ ತತ್ವ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನದ ಕಾರಣ ತಾವು ಶಾಸಕರಾಗುವ ಜೊತೆಗೆ ಎಲ್ಲರೂ ಒಟ್ಟಿಗೆ ಸೇರುವಂತೆ ಆಗಿದೆ ಎಲ್ಲರೂ ಅಂಬೇಡ್ಕರ್ ಅವರು ತೋರಿಸಿದ ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು. ದಮ್ಮಾ ದೀಕ್ಷೆ ಪಡೆದವರಿಗೆ ಬೌದ್ಧ ಧರ್ಮದ ವಿಧಿ ವಿಧಾನಗಳಂತೆ ಪಂಚಶೀಲಗಳು ಅಷ್ಟಾಂಗ ಮಾರ್ಗ ಹಾಗೂ ಬುದ್ಧ ಸಂದೇಶವನ್ನು ಬಂತೇಜಿಯವರು ಪ್ರಧಾನ ಮಾಡಿದರು.

ಅಖಿಲ ಭಾರತ ಬೌದ್ಧ ಮಹಾಸಭಾ ಜಿಲ್ಲಾ ಮುಖಂಡ ಅನಂತ ರವರು ಪ್ರಾರಂಭದಲ್ಲಿ ಸ್ವಾಗತಿಸಿದರು. ಬಕ್ಕಿ ಮಂಜುನಾಥ್ ಹಾಗೂ ಬಕ್ಕಿ ಸುರೇಶ್ ಇವರುಗಳ ಕಲಾತಂಡದಿAದ ನಡೆಸಿದ ಬುದ್ದ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದಂತೆ ಇತ್ತು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ ಹಾಗೂ ವಕೀಲ ಅನಿಲ್ ಕುಮಾರ್ ರವರು ಅಂಬೇಡ್ಕರ್ ಅಧ್ಯಯನ ಸಂಸ್ಥೆ ಹಾಗೂ ಬುದ್ಧ ಧರ್ಮ ಕೇಂದ್ರ ಆರಂಭಿಸಲು ಜಮೀನು ಮಂಜೂರು ಮಾಡಿ ಕೊಡುವಂತೆ ಶಾಸಕರಿಗೆ ಮನವಿ ಮಾಡಿದರು.

ಇನ್ನೋರ್ವ ಬಂತೇಜಿ ನಾಗರತ್ನ ದÀಮ್ಮಾದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ, ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ, ದಲಿತ ಮುಖಂಡರಾದ ಕೆ.ಟಿ ರಾಧಾಕೃಷ್ಣ, ಮರ್ಲೆ ಅಣ್ಣಯ್ಯ, ಉಮಾಶಂಕರ್, ಹುಣಸೆಮಕ್ಕಿ ಲಕ್ಷ್ಮಣ ಸೇರಿದಂತೆ ಹಲವು ಮುಖಂಡರುಗಳು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ತಾಲೂಕು ಕಚೇರಿ ಆವರಣದಿಂದ ಅಲಂಕೃತ ವಾಹನದಲ್ಲಿ ಬುದ್ಧ ಮೂರ್ತಿಯೊಂದಿಗೆ ಎಂ.ಜೆ ರಸ್ತೆ ಮೂಲಕ ಕಲಾಮಂದಿರದವರೆಗೆ ಶಾಂತಿ ಮೆರವಣಿಗೆ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *