Wednesday, 6th November 2024

ಡೆಲ್ ಕಂಪನಿಯಿಂದ ಉದ್ಯೋಗಿಗಳ ಸಾಮೂಹಿಕ ವಜಾ

ಬೆಂಗಳೂರು: ಇತ್ತೀಚೆಗೆ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುವ ಪ್ರಕ್ರಿಯೆಗೆ ಡೆಲ್ ಟೆಕ್ನಾಲಜಿಸ್ ಕಂಪೆನಿ ಸೇರಿದೆ.
ಕಂಪನಿಯು ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದೆ. ಟೆಕ್ ಕಂಪನಿಗಳು ಅನಿಶ್ಚಿತ ಜಾಗತಿಕ ಆರ್ಥಿಕ ವಾತಾವರಣ ಎದುರಿಸುತ್ತಿರುವ ಕಾರಣ ಜಾಗತಿಕ ವಾಗಿ 6,650 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಟೆಕ್ ಕಂಪನಿ ಡೆಲ್ ಟೆಕ್ನಾಲಜಿಸ್ ಹೇಳಿದೆ.

ಆರ್ಥಿಕ ಅನಿಶ್ಚಿತತೆಯು ಮುಂದುವರಿದಿರುವುದರಿಂದ ಈ ಕ್ರಮ ಸದ್ಯಕ್ಕೆ ನಮಗೆ ಮುಖ್ಯ ವಾಗಿದೆ. ಜೂನ್ನಿಂದ, ನಾವು ಸವಾಲಿನ ಜಾಗತಿಕ ಪರಿಸರವನ್ನು ಎದುರಿಸಲು ಬಾಹ್ಯ ನೇಮಕಾತಿ ಮತ್ತು ವೆಚ್ಚವನ್ನು ಕಡಿಮೆಗೊಳಿಸಿದ್ದೇವೆ ಎಂದಿದೆ.

ಉದ್ಯೋಗಿಗಳಿಗೆ ನೀಡಿದ ಸಂದೇಶದಲ್ಲಿ, ಕಂಪನಿಯ ಉಪಾಧ್ಯಕ್ಷ ಮತ್ತು ಸಹ-ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಕ್ಲಾರ್ಕ್, ಮಾರುಕಟ್ಟೆ ಪರಿಸ್ಥಿತಿಗಳು ಅನಿಶ್ಚಿತ ಭವಿಷ್ಯ ದೊಂದಿಗೆ ಮುಂದುವರಿಯುತ್ತಿವೆ. ಕಂಪನಿಯು ಈಗಾಗಲೇ ಬಾಹ್ಯ ನೇಮಕಾತಿಗೆ ವಿರಾಮ ಹಾಕಿದ್ದು ಸವಾಲುಗಳನ್ನು ಎದುರಿಸಲು ಹೊರಗಿನ ಸೇವೆಗಳನ್ನು ಕಡಿಮೆ ಮಾಡುವುದು ಸೇರಿದಂತೆ ಹಲವಾರು ನಿರ್ಧಾರ ಗಳನ್ನು ಕೈಗೊಂಡಿದ್ದೇವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆ ನೀಡಿದೆ.

ಮುಂಬರುವ ವಾರಗಳಲ್ಲಿ, ಕಂಪನಿಯು ಅನೇಕ ಬದಲಾವಣೆಗಳನ್ನು ಮತ್ತು ಕೆಲವು ಮರುಹೊಂದಿಕೆಗಳನ್ನು ಮಾಡುತ್ತದೆ.

ನವೆಂಬರ್ 2022 ರಲ್ಲಿ, ಡೆಲ್ ತನ್ನ ಮೂರನೇ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿತ್ತು. ಆಗ ಆದಾಯವು ಶೇಕಡಾ 6ರಷ್ಟು ಕಡಿಮೆಯಾಗಿ 24.7 ಶತಕೋಟಿ ಡಾಲರ್ ಮತ್ತು ಕಾರ್ಯಾಚರಣೆಯ ಆದಾಯವು 1.8 ಶತಕೋಟಿ ಡಾಲರ್ ಕಂಡು ಶೇಕಡಾ 68ರಷ್ಟು ಹೆಚ್ಚಾಗಿದೆ.