Wednesday, 11th December 2024

ಟೂಲ್ ಕಿಟ್ ಪ್ರಕರಣ: 23ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್‌

ನವದೆಹಲಿ: ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.13ರಂದು ದೆಹಲಿ ಪೊಲೀಸರಿಂದ ಬಂಧಿಯಾದ ಪರಿಸರ ಹೋರಾಟ ಗಾರ್ತಿ ದಿಶಾ ರವಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಇದೇ ತಿಂಗಳ 23ಕ್ಕೆ ತನ್ನ ಆದೇಶ ವನ್ನ ಕಾಯ್ದಿರಿಸಿದೆ.

3 ಗಂಟೆಗಳ ಸುದೀರ್ಘ ವಿಚಾರಣೆ ನಂತರ ಪಟಿಯಾಲ ಹೌಸ್ ಕೋರ್ಟ್ʼಗಳ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು, ಜಾಮೀನು ಅರ್ಜಿಯ ತೀರ್ಪನ್ನ ಮಂಗಳವಾರಕ್ಕೆ ಕಾಯ್ದಿರಿಸಿದ್ದಾರೆ.