ನವದೆಹಲಿ: ಟರ್ಕಿ ಮತ್ತು ಗ್ರೀಸ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭೂಕಂಪದಿಂದಾಗಿ ಹಲವಾರು ಕಟ್ಟಡಗಳು ನೆಲಸಮವಾಗಿದ್ದು, ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರಬಲ ಭೂಕಂಪದ ಬಳಿಕ 196 ಬಾರಿ ಲಘು ಕಂಪನ ಸಂಭವಿಸಿದ್ದು, 23 ಬಾರಿ ಈ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.0ಕ್ಕಿಂತ ಅಧಿಕ ಇತ್ತು ಎಂದು ವರದಿ ಮಾಡಿದೆ.
ಜಿಯಲಾಜಿಕಲ್ ಸರ್ವೆ ಅಧಿಕಾರಿಗಳ ಪ್ರಕಾರ, ದೊಡ್ಡ ಭೂಕಂಪ ಗ್ರೀಕ್‌ನ ಕರ್ಲೊವಸಿ ಪಟ್ಟಣದ 11 ಕಿಲೋಮೀಟರ್ ದೂರ ದಲ್ಲಿ ಸಂಭವಿಸಿದೆ.
ಟರ್ಕಿಯ ಇಝ್ಮೀರ್‌ನಲ್ಲಿ ವ್ಯಾಪಕ ಹಾನಿಯಾಗಿದೆ. ಟರ್ಕಿಯ ಪಶ್ಚಿಮ ಇಝ್ಮೀರ್ ಪ್ರಾಂತ್ಯ ಮತ್ತು ಗ್ರೀಕ್ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ದಿಂದ ಅಪಾರ ಜೀವ ಹಾನಿ ಮತ್ತು ಆಸ್ತಿಪಾಸ್ತಿಗೆ ನಷ್ಟ ಸಂಭವಿಸಿದೆ. ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗಿ ಸತ್ತಿರುವುದಾಗಿ ಟರ್ಕಿಯ ವಿಕೋಪ ಮತ್ತು ತುರ್ತು ನಿರ್ವ ಹಣೆ ಘಟಕ ಪ್ರಕಟಿಸಿದೆ.
ಗ್ರೀಸ್ ಮತ್ತು ಟರ್ಕಿಯ ಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ತುರ್ತು ವೈದ್ಯಕೀಯ ಸೇವೆಯನ್ನು ಎರಡೂ ದೇಶಗಳಲ್ಲಿ ಖಾತರಿಪಡಿಸುವ ಸಲುವಾಗಿ ಉಭಯ ದೇಶಗಳ ಜತೆ ನಾವು ಕಾರ್ಯ ನಿರ್ವಹಿಸಲಿದ್ದೇವೆ ಎಂದು ಡಬ್ಲ್ಯುಎಚ್‌ಓ ಮಹಾನಿರ್ದೇಶಕ ಟೆಡ್ರೋಸ್ ಅಧೊಮ್ ಘೇಬ್ರಿಯಾಸಿಸ್ ಹೇಳಿದ್ದಾರೆ.