Saturday, 12th October 2024

Ford To Return To India : 2 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಫೋರ್ಡ್‌

Ford To Return to India

ಚೆನ್ನೈ: ಆಟೋಮೊಬೈಲ್ ದೈತ್ಯ ಕಂಪನಿ ಫೋರ್ಡ್ ಮೋಟಾರ್ ಕಂಪನಿಯು ತಮಿಳುನಾಡಿನಲ್ಲಿ ಕಾರ್ಯಾಚರಣೆ ಪುನರಾರಂಭಿಸುವುದಾಗಿ ಘೋಷಿಸಿದೆ. ಅಮೆರಿಕದ ವಾಹನ ತಯಾರಕ ಕಂಪನಿಯು ತಮಿಳುನಾಡು ಸರ್ಕಾರಕ್ಕೆ ‘ಲೆಟರ್ ಆಫ್ ಇಂಟೆಂಟ್’ ಸಲ್ಲಿಸಿದೆ ಎಂದು ಹೇಳಿದೆ. ಈ ಬೆಳವಣಿಗೆಯು ಎರಡು ವರ್ಷದ ಬಳಿಕ ಸಕಾರಾತ್ಮಕ ತಿರುವು ತೆಗೆದುಕೊಳ್ಳಲಿದೆ. ಫೋರ್ಡ್ 2021 ರಲ್ಲಿ ಭಾರತದಲ್ಲಿ ಮಾರಾಟ ನಿಲ್ಲಿಸಿತ್ತು 2022 ರಲ್ಲಿ ದೇಶದಿಂದ ಕಾರುಗಳ ರಫ್ತುಗಳನ್ನು ನಿಲ್ಲಿಸಿತ್ತು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಅಮೆರಿಕದಲ್ಲಿ ಫೋರ್ಡ್ ನಾಯಕತ್ವದ ನಡುವಿನ ಫಲಪ್ರದ ಸಭೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ವಾಹನ ತಯಾರಕ ಕಂಪನಿಯು ತನ್ನ ಚೆನ್ನೈ ಘಟಕವನ್ನು ಮುಖ್ಯವಾಗಿ ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡುವತ್ತ ಗಮನ ಹರಿಸಲು ಮರುಬಳಕೆ ಮಾಡಲಿದೆ ಎಂದು ಎನ್‌ಡಿಟಿವಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಉತ್ಪಾದನಾ ಚಟುವಟಿಕೆಗಳ ಪ್ರಕಾರದ ಬಗ್ಗೆ ನಿರ್ದಿಷ್ಟ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ ಫೋರ್ಡ್ ನಿರ್ಧಾರವು ಅದರ ಭಾರತ ಕಾರ್ಯಾಚರಣೆಗಳಲ್ಲಿ ಕಾರ್ಯತಂತ್ರದ ಬದಲಾವಣೆ ಸೂಚಿಸುತ್ತದೆ.

ತಮಿಳುನಾಡಿನಲ್ಲಿ ಫೋರ್ಡ್‌ ದೊಡ್ಡ ಉಪಸ್ಥಿತಿ ಹೊಂದಿದೆ. 12,000 ಕ್ಕೂ ಹೆಚ್ಚು ಉದ್ಯೋಗಿಗಳು ಅಲ್ಲಿದ್ದಾರೆ. ಕಾರ್ಯಾಚರಣೆಯನ್ನು ಪುನರಾರಂಭಿಸುವ ಕಂಪನಿಯ ಯೋಜನೆಯು ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚುವರಿ 3,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಈ ಸುದ್ದಿಯನ್ನೂ ಓದಿ: Arvind Kejriwal : 6 ತಿಂಗಳ ಬಳಿಕ ಜೈಲಿನಿಂದ ಹೊರಬಂದ ಕೇಜ್ರಿವಾಲ್‌; ಅವರು ಹೇಳಿದ ಮೊದಲ ಮಾತೇನು?

ಕೈಗಾರಿಕಾ ಸಚಿವ ಟಿ.ಆರ್.ಬಿ.ರಾಜಾ ಅವರು 2023 ರಿಂದ ಯುನೈಟೆಡ್ ಸ್ಟೇಟ್ಸ್‌ಗೆ ಎರಡು ಭೇಟಿಗಳು ಸೇರಿದಂತೆ ಫೋರ್ಡ್ ಕಂಪನಿಯ ಮುಖ್ಯಸ್ಥರೊಂದಿಗೆ ತಮಿಳುನಾಡು ಸರ್ಕಾರದ ನಿರಂತರ ಪ್ರಯತ್ನಗಳು ವಾಹನ ತಯಾರಕರು ಮರಳುವಂತೆ ಮಾಡಿದೆ. ಫೋರ್ಡ್ ಭಾರತಕ್ಕೆ ಮರಳುವ ಬಗ್ಗೆ ನಿರ್ಧರಿಸಲು 6 ತಿಂಗಳ ಕಾಲಾವಕಾಶವನ್ನು ಕೇಳಿತ್ತು. ಎಂ.ಕೆ. ಸ್ಟಾಲಿನ್ ಅವರ ಭೇಟಿ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಸುಗಮ ಮರುಸಂಘಟನೆಯ ಭರವಸೆಯು ಒಪ್ಪಂದಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.