Tuesday, 5th November 2024

ಜ್ಞಾನವಾಪಿ ಮಸೀದಿ: ಅ.14 ಕ್ಕೆ ತೀರ್ಪು ಮುಂದೂಡಿ ಆದೇಶ

ವಾರಣಾಸಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಹೇಳಿಕೆ ವಿಚಾರ ಸಂಬಂಧ ಅ.14 ಕ್ಕೆ ತೀರ್ಪು ಮುಂದೂಡಿ ವಾರಣಾಸಿ ಕೋರ್ಟ್ ಆದೇಶಿಸಿದೆ.

ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿದೆ ಎಂದು ಹೇಳಲಾದ ಶಿವಲಿಂಗದ ವೈಜ್ಞಾನಿಕ ತನಿಖೆ ನಡೆಸುವಂತೆ ಕೋರಿ ಹಿಂದೂ ಭಕ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಾರಣಾಸಿ ನ್ಯಾಯಾಲಯ ಆದೇಶ ಮುಂದೂಡಿದೆ.

ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಪತ್ತೆಯಾ ಗಿದೆ ಎಂಬ ಹೇಳಿಕೆಯ ನಂತರ ನ್ಯಾಯಾ ಲಯವು ಆ ಸ್ಥಳವನ್ನ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಸೀಲ್ ಮಾಡುವಂತೆ ಆದೇಶಿಸಿತ್ತು.

ಮಸೀದಿಯ ಹಿಂದಿರುವ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರವೇಶ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ ನಂತರ ಮಸೀದಿ ಸಂಕೀರ್ಣದ ಚಿತ್ರೀಕರಣಕ್ಕೆ ನ್ಯಾಯಾಲಯ ಆದೇಶಿಸಿದ್ದು, ಚಿತ್ರೀಕರಣದ ಕೊನೆಯ ದಿನದಂದು ಶಿವಲಿಂಗ ಅಥವಾ ಶಿವನ ಅವಶೇಷವು ಕಂಡುಬಂದಿದೆ ಎಂದು ಹೇಳಲಾಗಿತ್ತು.