Friday, 13th December 2024

ಸಿರಾ ತಾಲ್ಲೂಕಿನಲ್ಲಿ ಹೆಚ್‌.ಡಿ.ಕೆ ಹುಟ್ಟುಹಬ್ಬ ಆಚರಣೆ

ಸಿರಾ ತಾಲ್ಲೂಕಿನ ದೊಡ್ಡ ಆಲದಮರದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿರವರ 61ನೇ ಹುಟ್ಟು ಹಬ್ಬವನ್ನು ಡಿ.16 ರಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್, ಜೆ.ಡಿ.ಎಸ್. ಮುಖಂಡರುಗಳಾದ ಮುದಿಮಡು ರಂಗಶ್ಯಾಮಯ್ಯ, ಹುಂಜಿನಾಳು ರಾಜಣ್ಣ, ಬೆಳ್ಳಿ ಲೋಕೇಶ್, ಜಿಲ್ಲಾ ಜೆ.ಡಿ. ಎಸ್. ಅಧ್ಯಕ್ಷ ಆಂಜಿನಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ತಿಮ್ಮಣ್ಣ, ಗಂಗಮ್ಮ ರಾಜಣ್ಣ, ಜೆ.ಡಿ.ಎಸ್. ಮಾಜಿ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷ ಉದಯಶಂಖರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಕವಿತಾ ರಮೇಶ್, ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಕೆ.ಆರ್.ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ್ದರು.