Saturday, 14th December 2024

ಹೋಳಿ ಹಬ್ಬದ ಬಳಿಕ ಹಿಜಾಬ್​ ಮೇಲ್ಮನವಿ ವಿಚಾರಣೆ: ಸುಪ್ರೀಂ

ನವದೆಹಲಿ: ಶಾಲಾ – ಕಾಲೇಜುಗಳಲ್ಲಿ ಹಿಜಾಬ್​ ಧರಿಸುವಂತಿಲ್ಲ ಎಂಬ ರಾಜ್ಯ ಹೈಕೋರ್ಟ್ ಆದೇಶದ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹೋಳಿ ಹಬ್ಬದ ರಜೆ ಬಳಿಕ ಮೇಲ್ಮನವಿ ವಿಚಾರಣೆ ಕೈಗೆತ್ತಿಕೊಳ್ಳ ಲಾಗುವುದು ಎಂದು ಸುಪ್ರೀಂ ಹೇಳಿದೆ.

ಹಿಜಾಬ್​ ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಬಳಿಕ ಸುಪ್ರಿಂ ಮೆಟ್ಟಿಲೇರಿದ್ದ ಅರ್ಜಿದಾರರು ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದರು.

ನಾಳೆಯಿಂದ ಹೋಳಿ ರಜೆ ಆರಂಭವಾಗಲಿದೆ ಎಂದು ಸಿಜೆಐ ಎನ್​.ವಿ. ರಮಣ ಹೇಳಿದ್ದಾರೆ ಎನ್ನಲಾಗಿದೆ. ಹೋಳಿ ಹಬ್ಬದ ಬಳಿಕ ಸುಪ್ರಿಂ ಕೋರ್ಟ್ ಹಿಜಾಬ್​ ವಿವಾದದ ಮೇಲ್ಮನವಿಯನ್ನು ಕೈಗೆತ್ತಿಕೊಳ್ಳಲಿದೆ.