Saturday, 14th December 2024

ಕೇವಲ ಒಂದು ಯೂರೋಗೆ ಖರೀದಿಸಿದಿ ಮನೆ ಕೋಟಿ ರೂಪಾಯಿಗೆ ಬಾಳುತ್ತಿದೆ…!

ಟಲಿ: ಕೇವಲ ಒಂದು ಯೂರೋಗೆ ಮಹಿಳೆ ಖರೀದಿಸಿ ಮನೆ ಈಗ ಕೋಟಿ ಕೋಟಿ ರೂಪಾಯಿಗೆ ಬಾಳುತ್ತಿದೆ.

ಇಟಲಿಯ ಸಾಂಬುಕಾ ಡಿ ಸಿಸಿಲಿಯಾದಲ್ಲಿರುವ ಖಾಲಿ ಮನೆಗಳನ್ನು ಪುರಸಭೆ ಕೇವಲ 1ಯೂರೋಗೆ ನೀಡುತ್ತದೆ. ಇಲ್ಲಿನ ನಿವಾಸಿಗಳು ಹಲವಾರು ಕಾರಣ ಗಳಿಂದ ವಲಸೆ ಹೋಗಿದ್ದು ಹಲವು ಪಟ್ಟಣಗಳಲ್ಲಿ ಮನೆಗಳು ಖಾಲಿ ಬಿದ್ದಿರುವುದರಿಂದ ಅವುಗಳನ್ನು ನಿಬಂಧನೆಗಳ ಮೇಲೆ ಕೇವಲ 1 ಯುರೋಗೆ ನೀಡಿ ಅವುಗಳನ್ನು ಅಭಿವೃದ್ಧಿ ಮಾಡುವ ಯೋಜನೆಯನ್ನ ಪುರಸಭೆಗಳು ಮಾಡಿವೆ.

ಈ ಬಗ್ಗೆ ಮಾಹಿತಿ ಪಡೆದ ಅಮೆರಿಕದ 45 ವರ್ಷದ ಮೆರೆಡಿತ್ ಟಬ್ಬೋನ್ ಎಂಬಾಕೆ ಕೇವಲ ಒಂದು ಯೂರೋಗೆ ಪಾಳು ಬಿದ್ದ ಮನೆ ಖರೀದಿಸಿ ಇದೀಗ ಅದನ್ನು ತಮ್ಮ ಸುಂದರ ಕನಸಿನ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಮನೆಯಲ್ಲಿ ಸ್ಪಾ, ಹೊರಾಂಗಣ ಅಡುಗೆಮನೆ, ಪಾರ್ಟಿ ಹಾಲ್ ಮತ್ತು ವೈನ್ ಸೆಲ್ಲಾರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದ್ದು ಇದೀಗ ಅದರ ಮೌಲ್ಯ 4 ಕೋಟಿಗೂ ಹೆಚ್ಚು ರೂ. ಆಗಿದೆ.

ಮೆರೆಡಿತ್ 2016 ರಲ್ಲಿ ಇಟಾಲಿಯನ್ ಪೌರತ್ವ ಹೇಗೆ ಪಡೆಯುವುದು ಎಂದು ಸಂಶೋಧಿಸಲು ಪ್ರಾರಂಭಿಸಿದಾಗ ಆಕೆಯ ತಂದೆ ಮೈಕೆಲ್ ಅವರ ಮುತ್ತಜ್ಜ ಫಿಲಿಪ್ಪೊ ಟಬ್ಬೋನ್ ಅವರು ಸಿಸಿಲಿಯ ಸಣ್ಣ ಹಳ್ಳಿ ಸಾಂಬುಕಾ ಡಿ ಸಿಸಿಲಿಯಾದಿಂದ ಬಂದಿದ್ದಾರೆ ಎಂಬುದು ಗೊತ್ತಾಯಿತು.

ಇಟಲಿಯಲ್ಲಿ ಒಂದು ಯೂರೋಗೆ ಮನೆಗಳನ್ನು ಬಿಡ್ ಮಾಡುವ ಕುರಿತು ಲೇಖನವನ್ನು ಓದಿದ ನಂತರ, ಮೆರೆಡಿತ್ ಜನವರಿ 2019 ರಲ್ಲಿ ಮನೆ ಖರೀದಿಗೆ ಬಿಡ್ ಮಾಡಿ ಅದನ್ನು ಖರೀದಿಸುವಲ್ಲಿ ಯಶಸ್ವಿಯಾದರು. ಒಂದು ತಿಂಗಳ ನಂತರ ರಿಪೇರಿ ಮತ್ತು ಮನೆಗೆ ಹೊಸ ರೂಪ ಕೊಡುವ ಕೆಲಸವನ್ನು ಪ್ರಾರಂಭಿಸಿದರು. ಪರಿಸರ ಸುರಕ್ಷಿತ ರೀತಿಯಲ್ಲಿ ಛಾವಣಿಯನ್ನು ತೆಗೆದುಹಾಕಲು 69 ಸಾವಿರ ರೂ. ಖರ್ಚು ಮಾಡಿದರು.

ಬಳಿಕ ಅದೇ ಗ್ರಾಮದಲ್ಲಿ ಎರಡು ಅತಿಥಿ ಗೃಹಗಳನ್ನು ಒಟ್ಟು 29 ಲಕ್ಷ ರೂ.ಗೆ ಖರೀದಿಸಿದ್ದಾರೆ.

ಐದು ವರ್ಷಗಳ ಕಠಿಣ ಪರಿಶ್ರಮದ ನಂತರ, ಮೆರೆಡಿತ್ ಅವರ ರಜಾದಿನದ ಮನೆಯನ್ನು ಅಂತಿಮವಾಗಿ ಏಪ್ರಿಲ್ 2024 ರಲ್ಲಿ ಪೂರ್ಣಗೊಳಿಸಿದ್ದು, ಈಗ ಇಟಲಿಯಲ್ಲಿ ಅವರು ವರ್ಷಕ್ಕೆ ನಾಲ್ಕು ತಿಂಗಳುಗಳನ್ನು ಕಳೆಯುತ್ತಾರೆ.