Friday, 13th December 2024

ಲಿಬರಲ್ ಪಕ್ಷಕ್ಕೆ ಭರ್ಜರಿ ಜಯ: ಜಸ್ಟಿನ್ ಟ್ರುಡೋ ಗೆಲುವಿನ ನಗೆ

ಕೆನಡಾ: ಸಂಸದೀಯ ಚುನಾವಣೆಯಲ್ಲಿ ಕೆನಡಿಯನ್ನರು ಟ್ರುಡೋ ಅವರ ಲಿಬರಲ್ ಪಕ್ಷಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

ಮಾಜಿ ಪ್ರಧಾನಿ ಪಿರೆ ಎಲಿಯಟ್ ಟ್ರುಡೋ ಅವರ ಪುತ್ರ ಜಸ್ಟಿನ್ ಟ್ರುಡೋ, ಆರ್ಟ್ಸ್ ಪದವಿ ಪಡೆದ ನಂತರ ಹಲವು ಕಡೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. 2005 ರ ವರೆಗೂ ರಾಜಕೀಯ ಕ್ಷೇತ್ರದತ್ತಲೇ ನೋಡದ ಜಸ್ಟಿನ್ ಟ್ರುಡೋ ಈಗ ಮೂರನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.

49 ವರ್ಷ ವಯಸ್ಸಿನ 2015ರಿಂದ ಲಿಬರಲ್ ಪಕ್ಷದ ಸುಧಾರಣೆಯ ಪಣ ತೊಟ್ಟು, ಪಕ್ಷವನ್ನು ಸತತವಾಗಿ ಅಧಿಕಾರಕ್ಕೆ ತರಲು ಯತ್ನಿಸಿ, ಸಫಲರಾಗಿದ್ದಾರೆ.

2015 ಕ್ಕೂ ಮುನ್ನ ಸಂಸತ್ತಿನಲ್ಲಿ ಕೇವಲ 36 (338) ಪ್ರತಿನಿಧಿಗಳನ್ನಷ್ಟೇ ಹೊಂದಿದ್ದ ಲಿಬರಲ್ ಪಕ್ಷವನ್ನು ಕಳೆದ ಚುನಾವಣೆಗಳಲ್ಲಿ 184 ಕ್ಕೇರಿಸಿದ್ದು ಟ್ರುಡೋ ಅವರ ತಂತ್ರಗಾರಿಕೆಯ ಫಲ. 2015 ರಲ್ಲಿ ಅನಿರೀಕ್ಷಿತ ವಾಗಿ ಗೆಲುವು ಸಾಧಿಸಿದ ಲಿಬರಲ್ ಪಕ್ಷ ಟ್ರುಡೋ ಅವರನ್ನೇ ಪ್ರಧಾನಿ ಹುದ್ದೆಗೆ ಸೂಚಿಸಿತ್ತು.

ಕರೋನಾ ಸಾಂಕ್ರಾಮಿಕದ ನಡುವೆ ನಡೆದ ಚುನಾವಣೆಯಲ್ಲಿ ಕೆನಡಾ ಲಿಬರಲ್‌ ಪಕ್ಷ 146 ಎಲೆಕ್ಟ್ರೋರಲ್ ಜಿಲ್ಲೆಗಳಲ್ಲಿ ಮುನ್ನಡೆ ಸಾಧಿಸಿರುವ ವರದಿ ಬಂದಿದೆ. ಹೌಸ್ ಆಫ್ ಕಾಮನ್ಸ್ 338 ಸ್ಥಾನಗಳನ್ನು ಹೊಂದಿದೆ ಮತ್ತು ಬಹುಮತವನ್ನು ಹೊಂದಲು ಪಕ್ಷವು 170 ಗೆಲ್ಲಬೇಕು.

ಲಿಬರಲ್‌ಗಳು ಒಂಟಾರಿಯೊ ಮತ್ತು ಕ್ವಿಬೆಕ್‌ನಲ್ಲಿ 113 ಸಂಸತ್ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದು, 199 ಸೀಟುಗಳನ್ನು ಹೊಂದಿದೆ. ಅಟ್ಲಾಂಟಿಕ್ ಪ್ರಾಂತ್ಯದಲ್ಲಿ 32ರಲ್ಲಿ ಲಿಬರಲ್ 23 ಮುನ್ನಡೆ ಸಾಧಿಸಿದೆ. ಈ ಮುಂಚೆ ಇಲ್ಲಿ 27 ಸ್ಥಾನ ಗೆದ್ದಿತ್ತು.

ಕೆನಡಾದಲ್ಲಿ ಸೋಮವಾರದಂದು 44 ನೇ ಚುನಾವಣೆಯಲ್ಲಿ ಮತದಾನ ನಡೆಸಲಾಗಿದ್ದು, ಇದು ಲಿಬರಲ್ ಪಕ್ಷದ ನಾಯಕ ಮತ್ತು ಹಾಲಿ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕ ಎರಿನ್ ಒ ಟೂಲ್ ಅವರ ಕೋವಿಡ್ -19 ನಿರ್ವಹಣೆಯ ವಿರುದ್ಧದ ಅಭಿಪ್ರಾಯಗಳ ನಡುವಿನ ಯುದ್ಧವಾಗಿದೆ.