Wednesday, 11th December 2024

Kim Jong Un: ಪ್ರವಾಹ ನಿರ್ವಹಣೆಯಲ್ಲಿ ವಿಫಲ; 30 ಸರ್ಕಾರಿ ಅಧಿಕಾರಿಗಳಿಗೆ ಗಲ್ಲು

Kim jong Un

ಉತ್ತರ ಕೊರಿಯಾ:ಉತ್ತರ ಕೊರಿಯಾ(North Korea)ದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಸಾವಿರಾರು ಜನ ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ  ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌(Kim Jong Un) ಸುಮಾರು 30 ಸರ್ಕಾರಿ ಅಧಿಕಾರಿಗಳ ಗಲ್ಲುಶಿಕ್ಷೆ(Death sentence)ಗೆ ಆದೇಶ ಹೊರಡಿಸಿದ್ದಾರೆ. ಕೊರಿಯಾದ ಚಂಗಾಂಗ್‌ ಪ್ರಾಂತ್ಯದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ ಅಪಾರ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸಿದೆ. ಹೀಗಾಗಿ ಪ್ರವಾಹ ನಿರ್ವಹಣೆಯಲ್ಲಿ ವಿಫಲರಾಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಅತಿ ಕಠಿಣ ಕ್ರಮಕ್ಕೆ ಕಿಮ್‌ ಜಾಂಗ್‌ ಮುಂದಾಗಿದ್ದು, ಗಲ್ಲುಶಿಕ್ಷೆಗೆ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

ಅಲ್ಲಿನ ಸ್ಥಳೀಯ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು, ಪ್ರವಾಹದ ನಿರ್ವಹಣೆಯಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ 20ರಿಂದ 30 ಅಧಿಕಾರಿಗಳನ್ನು ಕಳೆದ ತಿಂಗಳು ಏಕಕಾಲದಲ್ಲಿ ಗಲ್ಲಿಗೇರಿಸಲಾಗಿತ್ತು ಎಂದು ಮಾಧ್ಯಮ ವರದಿ ಮಾಡಿದೆ. ಆದರೆ ಈ ಸುದ್ದಿ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಉತ್ತರ ಕೊರಿಯಾದ ಅತ್ಯಂತ ಗೌಪ್ಯತೆಯ ಕಾರಣದಿಂದಾಗಿ, ಈ ಸುದ್ದಿಯನ್ನು ಖಚಿತಪಡಿಸಲು ಕಷ್ಟ, ಆದರೆ ಉತ್ತರ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್‌ಎ) ವರದಿ ಮಾಡಿದೆ, ಚೀನಾದ ಗಡಿಯ ಸಮೀಪವಿರುವ ಚಗಾಂಗ್ ಪ್ರಾಂತ್ಯವನ್ನು ಅಪ್ಪಳಿಸಿದ ವಿನಾಶಕಾರಿ ಪ್ರವಾಹದ ನಂತರ ಅಧಿಕಾರಿಗಳನ್ನು ಕಟ್ಟುನಿಟ್ಟಾಗಿ ಶಿಕ್ಷಿಸಲು” ಕಿಮ್ ಜೊಂಗ್ ಉನ್ ಅಧಿಕಾರಿಗಳಿಗೆ ಆದೇಶಿಸಿದರು. ಸಿನುಯಿಜುನಲ್ಲಿ ನಡೆದ ತುರ್ತು ಪೊಲಿಟಿಬ್ಯೂರೋ ಸಭೆಯಲ್ಲಿ, ನಾಯಕ ಕಿಮ್ ಜಾಂಗ್ ಉನ್ ಅವರು ವಿಪತ್ತು ತಡೆಗಟ್ಟುವಿಕೆಗಾಗಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.

ವಾಯುವ್ಯ ಪ್ರಾಂತ್ಯವು ಜುಲೈನಲ್ಲಿ ತೀವ್ರ ಪ್ರವಾಹಕ್ಕೆ ತುತ್ತಾಗಿದ್ದು, ಸಾವಿರಾರು ಜನ ನಿರಾಶ್ರಿತರಾಗಿದಾರೆ. ಅಲ್ಲದೇ ಲೆಕ್ಕವಿಲ್ಲದಷ್ಟು ಜನ ಪ್ರಾಣ ಕಳೆದುಕೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಪ್ರವಾಹದಿಂದ ಸತ್ತವರ ಸಂಖ್ಯೆ 1,000 ಮೀರಬಹುದು ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ಉತ್ತರ ಕೊರಿಯಾದ ರಾಜ್ಯ ಮಾಧ್ಯಮವು ಭಾರೀ ಮಳೆಯಿಂದ 4,100 ಮನೆಗಳು, 7,410 ಎಕರೆ ಕೃಷಿ ಭೂಮಿ ಮತ್ತು ವಾಯುವ್ಯ ನಗರವಾದ ಸಿನುಯಿಜು ಮತ್ತು ನೆರೆಯ ಪಟ್ಟಣವಾದ ಉಯಿಜುನಲ್ಲಿ ಅನೇಕ ಸಾರ್ವಜನಿಕ ಕಟ್ಟಡಗಳು, ರಚನೆಗಳು, ರಸ್ತೆಗಳು ಮತ್ತು ರೈಲ್ವೆಗಳು ಜಲಾವೃತಗೊಂಡಿವೆ ಎಂದು ವರದಿ ಮಾಡಿದೆ.

ಈ ಬಗ್ಗೆ ವರದಿಯಾಗುತ್ತಿದ್ದಂತೆ ಗರಂ ಆಗಿರುವ ಕಿಮ್‌, ಸರ್ಕಾರಿ ಅಧಿಕಾರಿಗಳು ನೆರೆ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾವು ನೋವಿಗೆ ಕಾರಣರಾಗಿರುವ ಅಧಿಕಾರಿಗಳು ತಲೆದಂಡಕ್ಕೆ ಮುಂದಾಗಿದ್ದಾರೆ. ಇದೀಗ ಅವರ ಈ ಕ್ರಮ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ.

ಈ ಸುದ್ದಿಯನ್ನೂ ಓದಿ: ಉತ್ತರ ಕೊರಿಯಾ ಸಮಸ್ಯೆಗಳಿಗೆ ಉತ್ತರವೇನು ?