30 ನವೆಂಬರ್ 2022 ರಂದು ಮಧ್ಯಾಹ್ನ ಬೆಂಗಳೂರಿನ ಹೆಬ್ಬಾಳ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವಿಕ್ರಮ್ ಕಿರ್ಲೋಸ್ಕರ್ ಅವರು ಪತ್ನಿ ಗೀತಾಂಜಲಿ ಕಿರ್ಲೋಸ್ಕರ್ ಮತ್ತು ಮಗಳು ಮಾನಸಿ ಕಿರ್ಲೋಸ್ಕರ್ ಅವರನ್ನು ಅಗಲಿ ದ್ದಾರೆ. ವಿಕ್ರಮ್ ಕಿರ್ಲೋಸ್ಕರ್ ಅವರು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(MIT) ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿದ್ದರು.
ವಿಕ್ರಮ್ ಕಿರ್ಲೋಸ್ಕರ್ ಕಿರ್ಲೋಸ್ಕರ್ ಗ್ರೂಪ್‌ನ ನಾಲ್ಕನೇ ತಲೆಮಾರಿನ ಮುಖ್ಯಸ್ಥ ರಾಗಿದ್ದರು. ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿ. ಉಪಾಧ್ಯಕ್ಷರೂ ಆಗಿದ್ದರು.