Wednesday, 11th December 2024

ಲಷ್ಕರ್‌ ಕಮಾಂಡರ್‌ ನಿಸಾರ್‌ ಅಹ್ಮದ್‌ ದಾರ್‌ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಸಿರಹ್ಮಾ ಪ್ರದೇಶದಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್‌-ಎ-ತೈಯಬಾದ ಉಗ್ರ ಸಂಘಟನೆಯ ಕಮಾಂಡರ್‌ ನಿಸಾರ್‌ ಅಹ್ಮದ್‌ ದಾರ್‌ನನ್ನು ಹತ್ಯೆ ಮಾಡಲಾ ಗಿದೆ.

ಕುಲ್ಗಾಂ ಜಿಲ್ಲೆಯ ರೆಡ್ವಾನಿ ಬಾಲಾ ಪ್ರದೇಶದ ನಿವಾಸಿಯಾದ ನಿಸಾರ್‌ ದಾರ್‌, ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ ಎಂದು ಕಾಶ್ಮೀರ ವಲಯ ಐಜಿಪಿ ಸ್ಪಷ್ಟಪಡಿಸಿದ್ದಾರೆ. ಖಚಿತ ಮಾಹಿತಿ ಪಡೆದ ಪೊಲೀಸರು ಮತ್ತು ಭಾರತೀಯ ಸೇನೆ ಶೋಧ ಕಾರ್ಯಾ ಚರಣೆ ನಡೆಸಿತ್ತು.

2021ರಲ್ಲಿ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ನಿಸಾರ್ , ಹಲವು ಅಪರಾಧ ಕೃತ್ಯ ಹಾಗೂ ಹತ್ಯೆಗಳಲ್ಲಿ ಭಾಗಿಯಾಗಿದ್ದ ಎಂದು ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಅನಂತನಾಗ್‌ ಜಿಲ್ಲೆಯ ಕೆಲವೆಡೆ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.