Wednesday, 11th December 2024

ಗಿಡ ಮರಗಳನ್ನು ಮಕ್ಕಳಂತೆ ಬೆಳಸಿ: ನ್ಯಾಯಾಧೀಶೆ ಎಂ.ಭಾರತಿ

ಹರಪನಹಳ್ಳಿ: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಮಕ್ಕಳಂತೆ ಬೆಳಸಿ ಆಮ್ಲಜನಕವನ್ನು ಹೆಚ್ಚಿಸುವಂತ ಕೆಲಸವನ್ನು ನಾವುಗಳು ಮಾಡಬೇಕಾಗಿದೆ. ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸಿವಿಲ್ ಹಿರಿಯ ನ್ಯಾಯಾಲ ಯದ ನ್ಯಾಯಾಧೀಶೆ ಎಂ.ಭಾರತಿ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿAದ ಆಯೋಜಿಸ ಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸ್ನೇಹಿ ಗ್ರಾಮಪಂಚಾಯತಿ ಅಭಿಯಾನ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಸಸಿಗೆ ನೀರು ಏರೆಯುವ ಮೂಲಕ ಉಭಯ ನ್ಯಾಯಾಲಯದ ನ್ಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕಿರವ್ವ ಕೆಳಗೇರಿ ರವರು ಉದ್ಘಾಟಿಸಿ ಬಳಿಕ ಮಾತನಾಡಿದರು.

ನಮ್ಮ ಸುತ್ತಮುತ್ತಲು ಗಿಡ ಮರಗಳನ್ನು ಹೆಮ್ಮರವಾಗಿ ಬೆಳೆಸುವುದರಿಂದ ನಮಗೆ ಶುದ್ಧವಾದ ಗಾಳಿ, ಆಮ್ಲಜನಕದೊಂದಿಗೆ ಉಸಿರಾಡುವುದಕ್ಕೆ ಸಾಧ್ಯವಾಗುತ್ತದೆ, ವಾಯು ಮಾಲಿನ್ಯದಿಂದ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಆದ್ದರಿಂದ ಗಿಡಮರ ಗಳನ್ನು ನಾಶ ಪಡಿಸದೇ ಮಕ್ಕಳಂತೆ ಸಾಕಿ ಬೆಳಿಸಿದಾಗ ಪರಿಸರ ಪ್ರೇಮಿ ಆಗುವದಕ್ಕೆ ಸಾಧ್ಯವಾಗು ತ್ತದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು .

ಈ ಸಂದರ್ಭದಲ್ಲಿ ತಾಲೂಕು ಕಾನೂನು ಸೇವಾ ಸಮೀತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೇರಿ, ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ, ನಿರ್ಮಲ, ಅಪರ ಸರ್ಕಾರಿ ವಕೀಲರಾದ ವಿ.ಜಿ.ಪ್ರಕಾಶ್ ಗೌಡ, ಉಪ-ವಲಯ ಅರಣ್ಯಾಧಿಕಾರಿ ಅಮರೇಶ ಬಿ. ವಕೀಲರ ಸಂಘದ ಉಪಾಧ್ಯಕ್ಷ ಬಿ.ಡಿ ವಾಸುದೇವ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಖಾಜಾಂಚಿ ಹುಲಿಯಪ್ಪ, ಮಹಿಳಾ ವಕೀಲರಾದ ರೇಣುಖಾ, ಸೀಮಾ, ದಾಕ್ಷಯಣಿ ಎಂ.ಮೃತಂಜಯ್ಯ, ಸಿ. ರಾಜಪ್ಪ ಮುತ್ತಿಗಿ ರೇವಣಸಿದ್ದಪ್ಪ, ಸಿ. ಜಾತಪ್ಪ, ಬಿ.ಸಿದ್ದೇಶ್, ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ರೇವಣಸಿದ್ದಪ್ಪ, ಕೋಟ್ರೇಶ್, ಬಸವರಾಜ್ ಮತ್ತು ಹಿರಿಯ ಮತ್ತು ಕಿರಿಯ ನ್ಯಾಯಾವಾಧಿಗಳು ಇತರರು, ಇದ್ದರು.