Saturday, 14th December 2024

ಇಸ್ಲಾಮಿಕ್ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡವರ ಪೈಕಿ ವಿದ್ಯಾವಂತರೇ ಹೆಚ್ಚು !

ವೀಕೆಂಡ್ ವಿಥ್ ಮೋಹನ್

ಮೋಹನ್ ವಿಶ್ವ

ಸಮಾಜದಲ್ಲಿ ಸಾಮಾನ್ಯವಾಗಿ ಬಡವರು, ಅವಿದ್ಯಾವಂತರು ಅಡ್ಡದಾರಿ ಹಿಡಿಯುವುದನ್ನು ನಾವೆ ಕಂಡಿದ್ದೇವೆ. ತನ್ನ ಜೀವನ ದಲ್ಲಿ ಅನುಭವಿಸುತ್ತಿರುವ ಕಷ್ಟವನ್ನು ಸಹಿಸಲಾಗದೆ ಹಲವು ಜನರು ಕೊಲೆ, ದರೋಡೆ ಯಂಥ ಕುಕೃತ್ಯಗಳಿಗೆ ಇಳಿಯುತ್ತಾರೆ.

ಸೆರೆ ಸಿಕ್ಕ ಪ್ರತಿಯೊಬ್ಬ ಕಳ್ಳನೂ ಸಹ ತನಗಾದ ಕಷ್ಟವನ್ನು ಸಹಿಸಲಾಗದೇ ತಾನು ಕಳ್ಳತನ ಮಾಡಿದ್ದಾಗಿ ಹೇಳುತ್ತಾನೆ. ಹೆಚ್ಚು
ಅಡ್ಡದಾರಿ ಹಿಡಿಯುವ ಹುಡುಗರು ಅವಿದ್ಯಾವಂತರಾಗಿರುತ್ತಾರೆ. ಅಲ್ಲಿ ಇಲ್ಲಿ ವಿಜಯ್ ಮಲ್ಯನ ರೀತಿಯ ವಿದ್ಯಾವಂತರು ಎಲ್ಲರನ್ನು ಮೀರಿಸುವ ಕೆಲಸ ಮಾಡುತ್ತಾರೆಯೆಂಬುದನ್ನು ಮರೆಯುವ ಹಾಗಿಲ್ಲ, ಆದರೆ ಸಾಮಾನ್ಯವಾಗಿ ಹೆಚ್ಚಿನ ಅವಿದ್ಯಾ ವಂತ ಯುವಕರು ಇಂತಹ ಕುಕೃತ್ಯದಲ್ಲಿ ತೊಡಗುತ್ತಾರೆ. ಆದರೆ ಇಸ್ಲಾಮಿಕ್ ಭಯೋತ್ಪಾದನೆಯ ವಿಷಯದಲ್ಲಿ ಈ ರೀತಿ ನಡೆಯುತ್ತಿಲ್ಲ, ಇಸ್ಲಾಮಿಕ್ ಭಯೋತ್ಪಾದನೆಯು ಹೆಚ್ಚಾಗಿ ವಿದ್ಯಾವಂತ ಯುವಕರನ್ನೇ ಆಕರ್ಷಿಸುತ್ತಿದೆ.

ಕಟ್ಟರ್ ಮೂಲಭೂತ ವಾದಿ ವಿಷಯಗಳ ಆಧಾರದ ಮೇಲೆ ನಡೆಯುತ್ತಿರುವ ಒಂದು ಸಂಘಟಿತ ವಾದ ಕಾರ್ಯವೆಂದರೆ ಭಯೋತ್ಪಾದನೆ. ಮುಸಲ್ಮಾನರೆಲ್ಲರೂ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲರೂ ಮುಸಲ್ಮಾನರೆಂಬ ವಿಷಯ ಎಲ್ಲರಿಗೂ ತಿಳಿದಿದೆ. ಹೆಚ್ಚಿನ ವ್ಯಾಸಂಗ ಮಾಡಿದ ಯುವಕರು ಹೆಚ್ಚಾಗಿ ಇಸ್ಲಾಮಿಕ್ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ.

ಐಸಿಸ್‌ನಂಥ ಘೋರ ಉಗ್ರ ಸಂಘಟನೆಯನ್ನು ಸೇರುತ್ತಿರುವ ಬಹುತೇಕ ಯುವಕರೆಲ್ಲರೂ ಉನ್ನತ ವ್ಯಾಸಂಗ ಮಾಡಿದವರು. ಅಮೆರಿಕಾ, ಲಂಡನ್, ಜರ್ಮನಿ, ಆಫ್ರಿಕಾ, ಭಾರತದ ಕೇರಳ (ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ರಾಜ್ಯ) ದೇಶಗಳಿಂದ ಹೆಚ್ಚಿನ ಯುವಕರು ಐಸಿಸ್ ಸೇರಿದ್ದಾರೆ. ಇರಾಕ್ ಹಾಗೂ ಸಿರಿಯಾ ದೇಶಗಳಲ್ಲಿ ತನ್ನ ನೆಲೆಯನ್ನು ಹೊಂದಿರುವ ಐಸಿಸ್ ಸಂಘಟನೆಯಲ್ಲಿ ಅಲ್ಲಿನ ಸ್ಥಳೀಯರಿರುವುದು ಬಹಳ ವಿರಳ, ಬಹುತೇಕ ವಿದ್ಯಾವಂತ ಯುವಕರು ಇತರ ದೇಶಗಳಿಂದ ಬಂದು ಉಗ್ರ ಸಂಘಟನೆಯಲ್ಲಿ ತೊಡಗಿದ್ದಾರೆ.

ಜಗತ್ತಿಗೆ ಉಗ್ರವಾದವನ್ನು ಹೆಚ್ಚು ಪಸರಿಸಿದ ಒಸಾಮಾ ಬಿನ್ ಲಾಡೆನ್ ಹುಟ್ಟಿದ್ದು ಸೌದಿ ಅರೇಬಿಯಾ ದೇಶದ ರಿಯಾದ್ ನಗರ ದಲ್ಲಿ, ಬಾಲ್ಯದಲ್ಲಿ ಯಾವ ಕಷ್ಟಗಳೂ ಅವನಿಗೆ ಕಾಡಲಿಲ್ಲ. ಹುಟ್ಟುತ್ತಲೇ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ ಬೆಳೆದ ಉಗ್ರ ಲಾಡೆನ್.
ಈತನು ಓದಿನಲ್ಲೂ ಏನು ಕಡಿಮೆಯಿರಲಿಲ್ಲ, ಒಬ್ಬ ಸಿವಿಲ್ ಎಂಜಿನಿಯರ್ ಪದವೀಧರನಾಗಿದ್ದ. ಈತ ಬಿಲಿಯನ್ ಗಟ್ಟಲೆ
ಹಣವನ್ನು ಸೌದಿ ಅರೇಬಿಯಾದಲ್ಲಿ ಕಟ್ಟಡ ಕಾಮಗಾರಿಯ ವ್ಯವಹಾರದಲ್ಲಿ ಗಳಿಸಿದ್ದ. ಕೆಲವು ವರದಿಗಳ ಪ್ರಕಾರ ಈತ ಒಬ್ಬ
ಮ್ಯಾನೇಜ್ಮೆಂಟ್ ಪದವೀಧರನೂ ಆಗಿದ್ದನಂತೆ. ಇಷ್ಟೊಂದು ಒಳ್ಳೆಯ ಕುಟುಂಬದಿಂದ ಬಂದಂಥ ಲಾಡೆನ್ ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರನಾಗಿ ಬೆಳೆದಿದ್ದ. ಈತ ಅಫಘಾನಿಸ್ತಾನಿಗಳು ರಷ್ಯಾ ವಿರುದ್ಧ ಯುದ್ಧ ಮಾಡುವ ಸಂಧರ್ಭದಲ್ಲಿ, ಪಾಕಿಸ್ತಾನದ ಮೂಲಕ ಆಫ್ಘನ್ನರಿಗೆ ಯುದ್ಧ ಸಾಮಗ್ರಿಗಳನ್ನು ತಲುಪಿಸುವ ಕೆಲಸವನ್ನು ಮಾಡಿದ್ದ.

ಈತನ ಕೆಲಸಕ್ಕೆ ಪರೋಕ್ಷವಾಗಿ ಅಮೆರಿಕ ದೇಶವು ಬೆಂಬಲಿಸಿತ್ತು. ಅಮೆರಿಕಾ ದೇಶದ ವಿದೇಶಾಂಗ ಸಚಿವರಿಗೆ ರಷ್ಯಾ ತನ್ನ ದೇಶದ ವಿರುದ್ಧ ವಿಯೆಟ್ನಾಂ ಯುದ್ಧದಲ್ಲಿ ಮಾಡಿದ್ದ ಸಂಚಿಗೆ ಸೇಡು ತೀರಿಸಿಕೊಳ್ಳಲು ಆಫ್ಘಾನ್‌ಗೆ ಸಹಾಯ ಮಾಡಿತ್ತು. ಲಾಡೆನ್
ಅಫ್ಘಾನ್ರಿಗೆ ಸಹಾಯ ಮಾಡುತ್ತಾ, ಮಾಡುತ್ತಾ ನಿಧಾನವಾಗಿ ಒಬ್ಬ ಮುಸ್ಲಿಂ ನಾಯಕನಾಗಿ ಬೆಳೆದ. ಪಾಕಿಸ್ತಾನವು ಲಾಡೆನ್ ಪರವಾಗಿ ಅಂದಿನಿಂದ ಆತ ಸಾಯುವವರೆಗೂ ನಿಂತಿತ್ತು. ಅಮೆರಿಕ ದೇಶವು ತಾನೇ ಬೆಳೆಸಿದ ಮುಸ್ಲಿಂ ನಾಯಕನೊಬ್ಬ, ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರಗಾಮಿಯಾಗಿದ್ದ. ಅಮೆರಿಕ ದೇಶವು ಲಾಡೆನ್ ವಿರುದ್ಧವೇ ತಿರುಗಿ ಬಿzಗ, ಲಾಡೆನ್ ಅಲ್ ಖೈದಾ ಎಂಬ ಉಗ್ರ ಸಂಘಟನೆಯನ್ನು ಕಟ್ಟಿದ. ಈ ಸಂಘಟನೆಯ ಮೂಲಕ ಜಗತ್ತಿನಾದ್ಯಂತ ಹಲವಾರು ವಿದ್ಯಾವಂತ ಮುಸ್ಲಿಂ ಯುವಕರನ್ನು
ತನ್ನೆಡೆಗೆ ಸೆಳೆದುಕೊಂಡ. ಮೂಲತಃ ಎಂಜಿನಿಯರ್ ಪದವೀಧರ ನಾಗಿದ್ದ ಲಾಡೆನ್, ಸ್ವತಃ ತಾನೇ ಬಾಂಬುಗಳನ್ನು ತಯಾರಿ ಸುವ ಕೆಲಸ ಮಾಡಿದ, ಜೊತೆಗೆ ಆತನ ತಂಡದವರಿಗೂ ಕಲಿಸಿದ.

ಜಗತ್ತಿನ ಮೂಲೆ ಮೂಲೆಗಳಲ್ಲಿ ಉಗ್ರ ಕೃತ್ಯಗಳನ್ನು ಮಾಡಿಸಿದ, ಅಮೆರಿಕ ದೇಶವು ತನ್ನ ಇತಿಹಾಸದಲ್ಲಿಯೇ ಕರಾಳವಾದ ಉಗ್ರರ ದಾಳಿಯನ್ನು ನೋಡಬೇಕಾಯಿತು. ನ್ಯೂಯಾರ್ಕ್ ನಗರದ ಅವಳಿ ಕಟ್ಟಡಗಳ ಮೇಲೆ ವಿಮಾನಗಳ ದಾಳಿಯನ್ನು ಮಾಡಿಸುವ ಮೂಲಕ ತನ್ನ ಅಟ್ಟಹಾಸವನ್ನು ಮೆರೆದ. ಸೆಪ್ಟೆಂಬರ್ ೧೧ – ೨೦೦೦ನೇ ಇಸವಿಯಲ್ಲಿ ನಡೆದ ಈ ದಾಳಿಯ ಪ್ರಮುಖ ರೂವಾರಿಯಾಗಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಸದಸ್ಯ ಖಾಲಿದ್ ಶೇಕ್ ಮೊಹಮ್ಮದ್ ಮೂಲತಃ ಅಮೆರಿಕಾ ದೇಶದ ಉತ್ತರ ಕ್ಯಾರಿಲೋನ ರಾಜ್ಯದ ವಿಶ್ವವಿದ್ಯಾಲಯದಲ್ಲಿ ೧೯೮೬ರಲ್ಲಿ ಉನ್ನತ ಮಟ್ಟದ ಪದವಿಯನ್ನು ಪಡೆದಿದ್ದ.

ಇಷ್ಟು ದೊಡ್ಡ ಪದವಿಯನ್ನು ಪಡೆದವ ಪಾಕಿಸ್ತಾನಕ್ಕೆ ಹೋಗಿ ಒಸಾಮಾ ಬಿನ್ ಲಾಡೆನ್ ಜೊತೆಗೆ ಕೈ ಜೋಡಿಸಿದ್ದ. ತನ್ನ
ಪದವಿಯನ್ನು ಒಳ್ಳೆಯ ಕೆಲಸಕ್ಕೆ ಬಳಸದ ಈತ ಸಾವಿರಾರು ಜನರ ಮಾರಣ ಹೋಮಕ್ಕೆ ಕಾರಣನಾಗಿದ್ದು ಮಾತ್ರ ದುರದೃಷ್ಟ ಕರ, ನಾವು ಸಾಮಾನ್ಯವಾಗಿ ಅವಿದ್ಯಾವಂತನೊಬ್ಬ ಮಾತ್ರ ಇಂತಹ ಕೆಲಸವನ್ನು ಮಾಡಬಲ್ಲನೆಂದು ಅಂದುಕೊಂಡಿರುತ್ತೇವೆ, ಆದರೆ ಮುಸಲ್ಮಾನ್ ಭಯೋತ್ಪಾದಕ ಸಂಘಟನೆಯಲ್ಲಿ ಖಾಲಿದ್ ಶೇಕ್ ಮೊಹಮ್ಮದ್ ತರಹದ ನೂರಾರು ಜನರು ಸಿಗುತ್ತಾರೆ. ಆಧುನಿಕ ಜಗತ್ತಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಯುವಕರು ಸಂಶೋಧನೆಯಲ್ಲಿ ತೊಡಗಿ ಒಳ್ಳೆಯ ಕೆಲಸಗಳನ್ನು ತಮ್ಮ ದೇಶಕ್ಕಾಗಿ ಮಾಡುತ್ತಿದ್ದರೆ, ಇವರು ಮಾತ್ರ ಜಗತ್ತನ್ನು ವಿನಾಶದ ಅಂಚಿಗೆ ತೆಗೆದುಕೊಂಡು ಹೋಗುವ ಕೆಲಸಗಳನ್ನು ಮಾಡು ವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕೊಲ್ಲಿ ರಾಷ್ಟ್ರಗಳ ಸುತ್ತಲಿನ ರಾಷ್ಟ್ರಗಳ ಪರಿಸ್ಥಿತಿಯಂತೂ ಹೇಳತೀರದಂತಾಗಿದೆ. ಇರಾಕ್ ಹಾಗೂ ಸಿರಿಯಾ ದೇಶಗಳು ಉಗ್ರರ
ಕೈಗೆ ಸಿಕ್ಕು ನಲುಗಿ ಹೋಗಿವೆ. ಪಕ್ಕದ ಸೌದಿ ಅರೇಬಿಯಾ ನಿನ್ನೆ ಮೊನ್ನೆಯವರೆಗೂ ತನ್ನ ದೇಶದಲ್ಲಿ ಕಟ್ಟರ್ ಮುಸಲ್ಮಾನ್
ಸಂಪ್ರದಾಯಗಳನ್ನು ಪ್ರಜೆಗಳ ಮೇಲೆ ಹೇರಿತ್ತು. ಹೆಂಗಸರು ಬುರ್ಖಾತೆಗೆದು ರಸ್ತೆಯಲ್ಲಿ ಓಡಾಡುವಂತಿರಲಿಲ್ಲ, ಕಾರು
ಓಡಿಸುವಂತಿರಲಿಲ್ಲ. ಆದರೆ ತೀರಾ ಇತ್ತೀಚಿಗೆ ಕೆಲವೊಂದು ಸಂಪ್ರದಾಯಗಳನ್ನು ಮೊಟಕುಗೊಳಿಸುವ ಮೂಲಕ ತನ್ನ ಜನರಿಗೆ
ತುಸು ಸ್ವಾತಂತ್ರ್ಯವನ್ನು ನೀಡಿದೆ. ಎಪ್ಪತ್ತರ ದಶಕದವರೆಗೂ ಸೌದಿ ಅರೇಬಿಯಾ ಒಂದು ಹಳ್ಳಿಯಾಗಿತ್ತು, ಯಾವಾಗ ಅಲ್ಲಿ ತೈಲದ
ನಿಕ್ಷೇಪಗಳು ಕಂಡವೋ ಅಂದಿನಿಂದ ಬಿಲಿಯನ್‌ಗಟ್ಟಲೆ ಹಣವನ್ನು ಸಂಪಾದಿಸಿತು. ಇಷ್ಟೊಂದು ಹಣವನ್ನು ಸಂಪಾದಿಸಿ ಜಗತ್ತಿಗೆ ದೊಡ್ಡವರಾದರೂ ಸಹ, ತನ್ನ ನೆಲದಲ್ಲಿ ಹಲವು ಇಸ್ಲಾಮಿಕ್ ಭಯೋತ್ಪಾದಕರನ್ನು ಬೆಳೆಸಿತು.

ಇದಕ್ಕೆ ಮೂಲ ಕಾರಣ ಸೌದಿಯಲ್ಲಿರುವ ಹಲವು ವಿದ್ಯಾವಂತರು ಹಳೆಯ ಕಟ್ಟರ್ ಮುಸ್ಲಿಂ ಸಂಪ್ರದಾಯವನ್ನು ಬೆಂಬಲಿಸಿದ್ದು. ಇಂದಿಗೂ ಜಗತ್ತಿನ ಎಲ್ಲ ಮುಸ್ಲಿಂ ರಾಷ್ಟ್ರಗಳು ಪುರುಷ ಪ್ರಧಾನವಾಗಿವೆ. ಭಾರತದಲ್ಲಿ ತ್ರಿವಳಿ ತಲಾಕ್ ನಿಷೇಧ ತಿದ್ದುಪಡಿಯನ್ನು ಅತಿ ಹೆಚ್ಚು ವಿರೋಽಸಿದವರು ವಿದ್ಯಾವಂತ ಮುಸಲ್ಮಾನರು, ಅವಿದ್ಯಾವಂತರಿಗೆ ತಮ್ಮ ಗುರುಗಳು ಏನು ಹೇಳುತ್ತಾರೋ ಅದು ಸರಿಯಾಗಿ ಕಾಣುತ್ತದೆ. ಆದರೆ ವಿದ್ಯಾವಂತರಿಗೆ ಯೋಚಿಸುವ ಶಕ್ತಿ ಇದ್ದರೂ ಸಹ ತಮ್ಮ ಬೆಂಬಲ ವ್ಯಕ್ತ ಪಡಿಸುವುದಿಲ್ಲ. ಕೆಲವು ಮುಸ್ಲಿಂ ವಿದ್ಯಾವಂತ ಮನೆತನದವರು ಬಹಿರಂಗವಾಗಿ ವಿರೋಽಸುವ ಕೆಲಸ ಮಾಡುವುದಿಲ್ಲ, ತಾವು ಹಾಗೆ ಮಾಡಿದರೆ ಎಲ್ಲಿ ತಮ್ಮನ್ನು ಸಮಾಜದಿಂದ ಹೊರಗಾಕುತ್ತಾರೆಂಬ ಭಯ ಅವರನ್ನು ಆವರಿಸಿದೆ. ವಿದ್ಯಾವಂತ ಭಯೋತ್ಪಾದನೆಯ ವಿಚಾರದಲ್ಲಿ ಭಾರತದ ಪರಿಸ್ಥಿತಿ ಏನೂ ಕಡಿಮೆಯಿಲ್ಲ.

೧೯೯೩ರ ಮುಂಬೈ ಸರಣಿ ಸೋಟದ ರೂವಾರಿಗಳೆಲ್ಲರೂ ಸಹ ವಿದ್ಯಾವಂತರು. ದೂರದ ದುಬೈನಲ್ಲಿ ಕುಳಿತು ಮುಂಬೈನಲ್ಲಿ ಸರಣಿ ಸೋಟ ನಡೆಸಿದ ದಾವೂದ್ ಭಂಟ ಅಬು ಸಲೇಂ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದವನು, ಮುಸಲ್ಮಾನ್ ಯುವಕರ ತಲೆಯಲ್ಲಿ ಬಾಬ್ರಿ ಮಸೀದಿ ಕೆಡವಿದ ವಿಚಾರಗಳನ್ನು ತುಂಬಿ ಮುಂಬೈ ನಗರದಲ್ಲಿ ಸರಣಿ ಸೋಟ ನಡೆಸಲು ಯೋಜನೆ ರೂಪಿಸಿದವನಿವನು. ಮುಂಬೈ ಸರಣಿ ಸೋಟದ ಮತ್ತೊಬ್ಬ ಪ್ರಮುಖ ಆರೋಪಿ ಯಾಕುಬ್ ಮೆಮೊನ್ ಒಬ್ಬ ಚಾರ್ಟರ್ಡ್ ಅಕೌಂಟೆಂಟ್, ಹಣಕಾಸಿನ ಪದವಿಗಳಲ್ಲಿ ಅತೀ ಉನ್ನತವಾದ ಪದವಿಯೆಂದರೆ ಚಾರ್ಟರ್ಡ್ ಅಕೌಂಟೆನ್ಸಿ, ಈ ಪರೀಕ್ಷೆಯನ್ನು ಬರೆಯಲು ಹಲವರು ಇಂದಿಗೂ ಹೆದರುತ್ತಾರೆ. ಇಷ್ಟೊಂದು ಕಷ್ಟದ ಪರೀಕ್ಷೆಯನ್ನು ಬರೆದು ಪದವಿಯನ್ನು ಪಡೆದ ಯಾಕುಬ ಮುಂಬೈ ನಗರದ ಪ್ರಮುಖ ಸ್ಥಳಗಳಲ್ಲಿ ಸರಣಿ ಬಾಂಬ್ ಸೋಟ ನಡೆಸಿದ್ದನೆಂದರೆ ಈತನ ಮನಸ್ಥಿತಿ ಯಾವ ಮಟ್ಟದ್ದೆಂದು ತಿಳಿಯುತ್ತದೆ.

ತನ್ನ ಅಣ್ಣನಾಗಿದ್ದ ಮತ್ತೊಬ್ಬ ಮಾಸ್ಟರ್ ಮೈಂಡ್ ಟೈಗರ್ ಮೆಮೊನ್‌ನ ಸಹಾಯಕ್ಕೆ ನಿಂತು ಯಾಕುಬ್ ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದ. ಬಾಬ್ರಿ ಮಸೀದಿ ದ್ವಂಸದ ಸಮಯದಲ್ಲಿ ಮುಂಬೈ ನಗರದ ಗಲಭೆಯಲ್ಲಿ ತನ್ನ ಅಂಗಡಿಯನ್ನು ಕಳೆದುಕೊಂಡ ಟೈಗರ್ ಮೆಮೊನ್ ಸೇಡು ತೀರಿಸಿಕೊಳ್ಳುವ ಸಲುವಾಗಿ ಭೂಗತ ದೊರೆ ದಾವೂದ್ ಇಬ್ರಾಹಿಂ ಜೊತೆ ಕೈ ಜೋಡಿ ಸಿದ್ದ. ಹಿಂದೂ ಧರ್ಮದ ದೇವಸ್ಥಾನಗಳ ಮೇಲಾದ ದಾಳಿಯ ಸೇಡನ್ನು ವಿದ್ಯಾವಂತ ಹಿಂದೂವೊಬ್ಬ ಎಂದೂ ಸಹ ಉಗ್ರ ಚಟುವಟಿಗಳ ಮೂಲಕ, ಜನರನ್ನು ಕೊಂದು ಸೇಡು ತೀರಿಸಿಕೊಂಡ ಉದಾಹರಣೆಗಳಿಲ್ಲ.

ಆದರೆ ಮುಸಲ್ಮಾನ್ ಉಗ್ರವಾದಿಗಳು ತಾವು ವಿದ್ಯಾವಂತರಾಗಿದ್ದರೂ ಸಹ ಜನರನ್ನು ಕೊಲ್ಲುವ ಮಟ್ಟಕ್ಕೆ ಸೇಡು ತೀರಿಸಿಕೊಳ್ಳುವ ಯತ್ನ ಮಾಡುತ್ತಿರುತ್ತಾರೆ. ೨೦೧೫ರ ಆಸುಪಾಸಿನಲ್ಲಿ ಒಂದು ಸಂಶೋಧನೆಯನ್ನು ಮಾಡಲಾಗಿತ್ತು, ಈ ಸಂಶೋಧನೆಯ ಪ್ರಕಾರ ಐಸಿಸ್ ಉಗ್ರ ತಂಡಕ್ಕೆ ಸೇರುವ ಉಗ್ರಗಾಮಿಗಳಲ್ಲಿ ಶೇ. ೬೯% ಮಂದಿ, ಕಡಿಮೆಯೆಂದರೂ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ ಬಂದವರು. ಯೂರೋಪಿನ ಹಲವು ರಾಷ್ಟ್ರಗಳಿಂದ ಯುವಕ, ಯುವತಿಯರು ಐಸಿಸ್ ಸೇರಿದ್ದರು. ಇವರ‍್ಯಾರಿಗೂ ಮನೆಯಲ್ಲಿ ತೊಂದರೆಯಿರಲಿಲ್ಲ, ಉತ್ತಮ ಕುಟುಂಬದಿಂದಲೇ ಬಂದಿದ್ದವರಾಗಿದ್ದರು.

ಐಸಿಸ್ ನಿಯಂತ್ರಿತ ಪ್ರದೇಶಗಲ್ಲಿದ್ದ ಹಲವು ಉಗ್ರರನ್ನು ಸಂದರ್ಶನ ನಡೆಸಿದಾಗ ಈ ಸತ್ಯ ಹೊರಬಿದ್ದಿತ್ತು. ಅವರ ಪಾಸ್ಪೋರ್ಟ್, ಹುಟ್ಟಿದ ದೇಶ, ಓದಿದ ದೇಶ, ಕೆಲಸ ಮಾಡುತ್ತಿದ್ದ ಸ್ಥಳಗಳು, ಅವರ ವಿದ್ಯಾಭ್ಯಾಸ, ಮದುವೆಯ ವಿವರಗಳು, ಎಲ್ಲವನ್ನೂ ತುಲನೆ ಮಾಡಿ ಸಂಶೋಧನೆಯನ್ನು ನಡೆಸಲಾಗಿತ್ತು. ಇಷ್ಟೆ ವಿದ್ಯಾವಂತರಾಗಿರು ವವರನ್ನು ತಾವು ಐಸಿಸ್ ನಲ್ಲಿ ಯಾವ ರೀತಿಯಲ್ಲಿ ತೊಡಗಿಸಿ
ಕೊಳ್ಳುತ್ತೀರೆಂದು ಕೇಳಿದರೆ, ಹೆಚ್ಚಿನವರು ಆತ್ಮಾಹುತಿ ಬಾಂಬರ್
ಗಳಾಗಲು ತಯಾರಾಗಿರುವುದಾಗಿ ಹೇಳಿದ್ದರು. ಎಂತಹ
ವಿಪರ್ಯಾಸ ನೋಡಿ, ಒಳ್ಳೆಯದು ಕೆಟ್ಟದನ್ನು ಯೋಚಿಸಬೇಕಾದ
ವಿದ್ಯಾವಂತ ಯುವಕ ಹಾಗೂ ಯುವತಿಯರು, ಉಗ್ರವಾದದ
ಸಲುವಾಗಿ ತಮ್ಮ ಜೀವವನ್ನು ಕೊಡಲು ತಯಾರಾಗಿದ್ದರು. ಕೇವಲ
ಪಾಶ್ಚಿಮಾತ್ಯ ರಾಷ್ಟ್ರಗಳ ಮುಸ್ಲಿಂ ಯುವಕರು ಮಾತ್ರವಲ್ಲದೇ ಉತ್ತರ
ಆಫ್ರಿಕಾ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ಬಂದಿದ್ದಂಥ ಯುವಕರೂ
ಸಹ ಉತ್ತಮ ವಿದ್ಯಾಭ್ಯಾಸ ಹೊಂದ್ದಿದವರಾಗಿದ್ದರು. ಮಧ್ಯ
ಪ್ರಾಚ್ಯದಲ್ಲಿನ ಪ್ಯಾಲಿಸ್ತೇನ್ ನಗರಕ್ಕೊಮ್ಮೆ ಹೊಕ್ಕರೆ ಅದೆಷ್ಟು
ವಿದ್ಯಾವಂತ ಯುವಕರು ಇಸ್ರೇಲಿನಲ್ಲಿ ದಾಳಿಯನ್ನು ನಡೆಸಲು
ಸಿದ್ಧರಿದ್ದರೆಂದು ತಿಳಿಯುತ್ತದೆ. ೧೯೪೮ರಲ್ಲಿ ಇಸ್ರೇಲ್ ಸ್ವತಂತ್ರ್ಯಗೊಂಡ
ನಂತರ ಪ್ಯಾಲಿಸ್ತೇನ್ ಇಸ್ರೇಲಿಗಳ ಕೈ ಸೇರಲಿಲ್ಲ, ಆದರೆ ೧೯೬೭ರಲ್ಲಿ
ನಡೆದ ಯುದ್ಧದಲ್ಲಿ ಇಸ್ರೇಲ್ ಪ್ಯಾಲಿಸ್ತೇನಿನ ಮೇಲೆ ಹಿಡಿತ
ಸಾಽಸಿತ್ತು. ಅಂದಿನಿಂದ ಇಲ್ಲಿಯವರೆಗೂ ಇಸ್ರೇಲಿನಲ್ಲಿ ದಾಳಿಗಳನ್ನು
ನಡೆಸಲು ಪ್ಯಾಲಿಸ್ತೇನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ, ಇತ್ತ
ಇಸ್ರೇಲಿ ಸೈನಿಕರು ಪ್ಯಾಲಿಸ್ತೇನಿ ಉಗ್ರರನ್ನು ಹೊಡೆದುರುಳಿಸಿ
ರುತ್ತಾರೆ. ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಯಹೂದಿ ಧರ್ಮಗಳ
ಪುಣ್ಯಕ್ಷೇತ್ರವಾಗಿರುವ ಜೆರುಸಲೇಮ ಕೂಡ ೧೯೬೭ರ ವರೆಗೂ
ಇಸ್ರೇಲಿಗಳ ಹಿಡಿತದಲ್ಲಿರಲಿಲ್ಲ. ೧೯೬೭ರ ಯುದ್ಧದಲ್ಲಿ ಜೋರ್ಡನ್
ನಿಂದ ಇಸ್ರೇಲ್ ಜೆರುಸಲೇಮ ವಶ ಪಡಿಸಿಕೊಂಡಿತ್ತು, ಅಲ್ಲಿಯೂ
ಕೂಡ ತಮ್ಮ ಹಕ್ಕುಗಳನ್ನು ಸಾಽಸುವ ಸಲುವಾಗಿ ಹಲವು ಹೋರಾಟ
ಗಳು ನಡೆಯುತ್ತಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ ಟ್ರಂಪ್ ತಮ್ಮ
ದೂತಾವಾಸ ಕಚೇರಿಯನ್ನು ಜೆರುಸಲೇಮಗೆ ಸ್ಥಳಾಂತರಿಸು
ತ್ತೇವೆಂದು ಹೇಳುವ ಮೂಲಕ ಇಸ್ರೇಲಿಗಳ ಪರವಾಗಿ ನಿಂತಿದ್ದರು.
ಇಸ್ರೇಲ್ ಹಾಗೂ ಪ್ಯಾಲಿಸ್ತೇನ್ ನಡುವೆ ಇಸ್ರೇಲ್ ದೊಡ್ಡದೊಂದು
ಗೋಡೆಯನ್ನೇ ಕಟ್ಟುವ ಮೂಲಕ ಪ್ಯಾಲಿಸ್ತೇನಿಗಳನ್ನು
ಜೈಲಿನಲ್ಲಿತ್ತಿರುವ ರೀತಿ ಮಾಡಿದೆ. ವಿದ್ಯಾವಂತ ಪ್ಯಾಲಿಸ್ತೇನಿ
ಯುವಕರು ಪ್ರತಿನಿತ್ಯವೂ ಯಹೂದಿಗಳ ಮೇಲೆ ಹಗೆ ಸಾಽಸುತ್ತಲೇ
ಇರುತ್ತಾರೆ. ಸಂಸತ್ ದಾಳಿಯ ರೂವಾರಿಯಾಗಿದ್ದ ಅ-ಲ್
ಗುರುವನ್ನು ನೇಣಿಗೆ ಹಾಕಿದ ನಂತರ ಕಾಶ್ಮೀರದಲ್ಲಿ ಹಲವು
ವಿದ್ಯಾವಂತ ಯುವಕರನ್ನು ಉಗ್ರ ಸಂಘಟನೆಗಳಿಗೆ ಬಳಸಿಕೊಳ್ಳ
ಲಾಗುತ್ತಿತ್ತು. ಕಾಶ್ಮೀರದಲ್ಲಿನ ಹಲವು ವಿದ್ಯಾವಂತ ಯುವಕರ
ತಲೆಯಲ್ಲಿ ಇಲ್ಲಸಲ್ಲದ ಕಟ್ಟುಪಾಡುಗಳನ್ನು ತುಂಬಿ, ಹಳೆಯ
ವಿಚಾರಧಾರೆಗಳನ್ನು ಹೇಳಿ ಹೇಳಿ ಉಗ್ರ ಚಟುವಟಿಕೆಗಳಿಗೆ
ಬಳಸಿಕೊಳ್ಳಲಾಗುತ್ತಿದೆ. ಭಾರತೀಯ ಸೈನಿಕರ ಗುಂಡಿಗೆ ಬಲಿ
ಯಾಗುವ ಹಲವು ಉಗ್ರಗಾಮಿಗಳು ಕಾಶ್ಮೀರದಲ್ಲಿ ಪದವಿ
ಪಡೆದವರಾಗಿದ್ದರು. ಅ-ಲ್ ಗುರು ಒಬ್ಬ ವೈದ್ಯಕೀಯ ವಿಭಾಗದ
ವಿದ್ಯಾರ್ಥಿಯಾಗಿದ್ದು ಮೊದಲನೇ ವರ್ಷದ ತರಗತಿಗಳನ್ನು
ಪೂರ್ಣಗೊಳಿಸಿದ್ದ. ಇತ್ತೀಚಿಗೆ ಬೆಂಗಳೂರಿನ ಬಸವನಗುಡಿಯಲ್ಲಿ
ಸೆರೆ ಸಿಕ್ಕ ಉಗ್ರನೊಬ್ಬ ರಾಮಯ್ಯ ಕಾಲೇಜಿನಲ್ಲಿ ವೈದ್ಯನಾಗಿದ್ದ.
ಈತನು ಐಸಿಸ್ ಉಗ್ರರಿಗೆ ವೈದ್ಯಕೀಯ ವಿಚಾರದಲ್ಲಿ ಸಹಾಯ
ಮಾಡುತ್ತಿದ್ದನೆಂಬ ಆತಂಕಕಾರಿ ಅಂಶವು ಬೆಳಕಿಗೆ ಬಂದಿತ್ತು. ಈತ
ಒಮ್ಮೆ ಐಸಿಸ್ ಕೇಂದ್ರಕ್ಕೆ ಭೇಟಿ ನೀಡಿರುವ ಆತಂಕಕಾರಿ ಅಂಶವೂ
ಸಹ ಬೆಳಕಿಗೆ ಬಂದಿತ್ತು. ವೈದ್ಯೋ ನಾರಾಯಣ ಹರಿ ಎಂದು
ವೈದ್ಯನನ್ನು ಪೂಜಿಸುತ್ತಾರೆ. ಆದರೆ ಇಲ್ಲಿ ವೈದ್ಯನಾದವನು ಜಗತ್ತಿನ
ಅತ್ಯಂತ ಕ್ರೂರ ಉಗ್ರ ಸಂಘಟನೆಯೊಂದಕ್ಕೆ ಕೆಲಸ ಮಾಡುತ್ತಿದ್ದ.
ಇಲ್ಲಿಯೂ ಅಷ್ಟೇ ನೋಡಿ ಮತ್ತದೇ ವಿಚಾರ, ಹೆಚ್ಚಿನ ವಿದ್ಯಾಭ್ಯಾಸ
ಮಾಡಿದಂಥ ಯುವಕರೇ ಉಗ್ರ ಚಟುವಟಿಕೆಯಲ್ಲಿ
ತೊಡಗಿಸಿಕೊಳ್ಳುತ್ತಿzರೆ.
ಐಸಿಸ್ ಸಂಸ್ಥಾಪಕ ಅಲ್ ಬಗ್ದಾದಿ ಇಸ್ಲಾಮಿಕ್ ಧರ್ಮದಲ್ಲಿ
ಅತ್ಯುನ್ನತ ಪದವಿಯನ್ನು ಸಂಪಾದಿಸಿದ್ದ, ಪದವಿಯ ಜೊತೆಗೆ ಈತ
ಬಾಗ್ದಾದ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿಯನ್ನೂ ಸಹ
ಪಡೆದಿದ್ದ. ಇಸ್ಲಾಮಿನಲ್ಲಿ ಒಂದು ಧರ್ಮದ ಬಗ್ಗೆ ಆಳವಾದ
ಅಧ್ಯಯನ ಮಾಡಿದವ ಜಗತ್ತಿನ ಅತ್ಯಂತ ಕ್ರೂರ ಉಗ್ರ ಸಂಘಟನೆ
ಯನ್ನು ಹುಟ್ಟಿ ಹಾಕುತ್ತಾನೆಂದು ಯಾರೂ ಸಹ ಅಂದುಕೊಂಡಿರ
ಲಿಲ್ಲ, ತನ್ನ ಧರ್ಮವನ್ನು ಉಳಿಸುತ್ತೇನೆಂದು ಹೇಳಿಕೊಂಡು
ಜಗತ್ತಿನಾದ್ಯಂತ ಇಸ್ಲಾಂ ಧರ್ಮವನ್ನು ಸ್ಥಾಪಿಸುವ ಏಕೈಕ ಉದ್ದೇಶ
ದಿಂದ ಮನುಷ್ಯತ್ವವನ್ನು ಮರೆತು ಸಾವಿರಾರು ಜನರನ್ನು ಕೊಲ್ಲಲು
ಇಸ್ಲಾಂ ಉಗ್ರರಿಗೆ ಪ್ರೇರಣೆಯನ್ನು ನೀಡಿದ. ಉತ್ತರ ಇರಾಕಿನ
ಹಲವು ನಗರಗಳು ಐಸಿಸ್ ದಾಳಿಗೊಳಗಾಗಿ ಸರ್ವನಾಶವಾಗಿ
ಹೋಗಿವೆ. ಸಿರಿಯಾ ದೇಶದಲ್ಲಿ ಸುಪ್ರಸಿದ್ಧವಾಗಿದ್ದ ಐತಿಹಾಸಿಕ
ಪಲ್ಮೇರಾ ನಗರದ ಹಳೆಯ ಅವಶೇಷಗಳನ್ನು ಸರ್ವನಾಶ ಮಾಡುವ
ಮೂಲಕ ಸಾವಿರಾರು ವರ್ಷಗಳ ಇತಿಹಾಸವನ್ನು ಐಸಿಸ್ ಉಗ್ರರು
ಅಳಿಸಿ ಹಾಕಿದ್ದರು. ಪಲ್ಮೇರಾವನ್ನು ನೋಡಿಕೊಳ್ಳುತ್ತಿದ್ದ ನಿರ್ವಾಹಕನ
ಕುಟುಂಬವು ಅಲ್ಲಿಂದ ಅವೇ ಹೋಗುವುದಿಲ್ಲವೆಂದು ಹಠ
ಹಿಡಿದಾಗ ನಿರ್ವಾಹಕನ ನಾಲಿಗೆಯನ್ನು ಕತ್ತರಿಸಿ, ಊರ ಬಾಗಿಲಿಗೆ
ನೇಣು ಹಾಕಿ ಸಾಯಿಸಿದ್ದರು. ಇಂತಹ ಕ್ರೂರ ಕಾರ್ಯ
ಮಾಡಿದವರು ಮತ್ತದೇ ವಿದ್ಯಾವಂತ ಮುಸಲ್ಮಾನ್
ಭಯೋತ್ಪಾದಕರು. ಅಲ್ ಬಗ್ದಾದಿ ಒಸಾಮಾ ಬಿನ್ ಲಾಡೆನ್‌ನನ್ನು
ತನ್ನ ಗುರುವಿನ ರೀತಿಯಲ್ಲಿ ನೋಡುತ್ತಿದ್ದ, ಅವನಿಗಿಂತಲೂ
ಅಮಾನುಷವಾಗಿ ಜಗತ್ತಿನಾದ್ಯಂತ್ಯ ಉಗ್ರ ಚಟುವಟಿಕೆಗಳನ್ನು
ನಡೆಸುವ ಸಲುವಾಗಿ ಐಸಿಸ್‌ಶುರುಮಾಡಿದ್ದ. ಇವರ ಕಥೆ ಇಲ್ಲಿಗೆ
ಮುಗಿಯುವುದಿಲ್ಲ ಒಸಾಮನ ನಂತರ ಅಲ್ ಖೈದಾ ಉಗ್ರ
ಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಿಕೊಂಡಂಥ ಜವಾಹಿರಿ
ಶಸ ಚಿಕಿತ್ಸೆ ಮಾಡುವ ವೈದ್ಯನಾಗಿದ್ದ. ಒಂದು ಅಂದಾಜಿನ ಪ್ರಕಾರ
ಶೇ ೩೫ರಷ್ಟು ಅಲ್ ಖೈದಾ ಉಗ್ರರು ಕಾಲೇಜು ಶಿಕ್ಷಣವನ್ನು
ಮುಗಿಸಿzರೆ, ನೂತನವಾಗಿ ಸೇರುವವರಿಗೆ ಕೆಲವು ವಿಭಾಗಗಳಲ್ಲಿ
ಉತ್ತಮ ಅನುಭವವಿರಲೇಬೇಕಂತೆ. ಪಾಕಿಸ್ತಾನದ ಕುಖ್ಯಾತ ಉಗ್ರ
ಸಂಘಟನೆ ಲಷ್ಕರ್ ಈ ತೋಯಿಬಾ ಹಲವಾರು ಎಂಜಿನಿಯರ್
ಗಳು, ವೈದ್ಯರು, ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿರುವವರನ್ನು
ಹೊಂದಿದೆ. ಈ ಸಂಘಟನೆಯ ಸಹ ಸಂಸ್ಥಾಪಕ ಉಗ್ರ ಹಫೀಜ್
ಸಈದ್ ಪಂಜಾಬ್ ವಿಶ್ವವಿದ್ಯಾಲಯದಿಂದ ಎರಡು ಸ್ನಾತಕೋತ್ತರ
ಪದವಿಯನ್ನು ಪಡೆದ್ದಿzನೆ. ಸ್ನಾತಕೋತ್ತರ ಪದವಿ ಪಡೆದವ
ಪಾಕಿಸ್ತಾನ ಹಾಗೂ ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಸಂಘಟನೆ
ಗಳಿಗೆ ಸೇರಿಸಿಕೊಂಡು ದಾಳಿಗಳನ್ನು ನಡೆಸುತ್ತಾನೆಂದರೆ ಇವನ
ವಿದ್ಯೆಗೆ ಎಂತಹ ಬೆಲೆಯಿದೆ ನೀವೇ ತಿಳಿದುಕೊಳ್ಳಿ. ದಿನ ಕಳೆದಂತೆ
ಉಗ್ರವಾದಕ್ಕೆ ಕಟ್ಟುಬಿದ್ದು ಉಗ್ರ ಸಂಘಟನೆಯನ್ನು ಸೇರುವ
ವಿದ್ಯಾವಂತ ಯುವಕರ ಸಂಖ್ಯೆ ಹೆಚ್ಚಾಗುತ್ತಿರುವುದು ಆರೋಗ್ಯಕರ
ಬೆಳವಣಿಗೆಯಲ್ಲ. ಬುದ್ಧಿ ಹೇಳಬೇಕಾದ ಹಲವು ಮುಸ್ಲಿಂ
ನಾಯಕರುಗಳೇ ಇವರು ಮಾಡಿದ ಕೃತ್ಯಗಳನ್ನು ಬೆಂಬಲಿಸಿಕೊಂಡು
ಬರುತ್ತಿರುವಾಗ, ವಿದ್ಯಾವಂತ ಭಯೋತ್ಪಾದಕ ರಿಗೆ ತಾವು ಮಾಡಿದ್ದೇ
ಸರಿಯೆಂಬಂತೆ ತೋರುತ್ತಿದೆ. ಜಗತ್ತಿನಲ್ಲಿ ಮುಸ್ಲಿಂ
ಭಯೋತ್ಪಾದನೆಯ ಹೆಚ್ಚಿನ ರೂವಾರಿ ಗಳಾಗಿರುವ ವಿದ್ಯಾವಂತರ
ಸೇರ್ಪಡೆ ನಿಲ್ಲುವವರೆಗೂ ಭಯೋತ್ಪಾದಕತೆಯು ನಿಲ್ಲುವುದಿಲ್ಲ.