ಮುದ್ದೇಬಿಹಾಳ: ಮುದ್ದೇಭಿಹಾಳ ಹಾಗೂ ತಾಳಿಕೋಟಿ ಬಾಗದ ಜನತೆ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಅತಿ ಉತ್ಸಾಹದಿಂದ ತಯಾರಿ ನಡೆಸುತ್ತಿರುವದು ಹರ್ಷದಾಯಕ ವಿಷಯವಾಗಿದೆ. ಜನರು ತಮ್ಮ ಸ್ವಂತ ಖರ್ಚಿನಲ್ಲಿ ಕಾರ್ಯ ಕ್ರಮಕ್ಕೆ ತೆರಳಲು ತಯಾರಿ ನಡೆಸುತಿದ್ದಾರೆ. ಎಲ್ಲರು ಸೇರಿಕೋಂಡು ಕಾರ್ಯಕ್ರಮ ಯಶ್ವಿಗೋಳಿಸಬೇಕು ಎಂದು ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಬಿ.ಕೆ.ಬಿರಾದಾರ ಹೇಳಿದರು.
ತಾಳಿಕೋಟಿ ಪಟ್ಟಣದಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆಳಲು ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಪ್ರತಿ ಹೋಬಳಿ ಮಟ್ಟ ದಲ್ಲಿ ಸಭೆಗಳನ್ನು ನಡೆಸಿ ಕಾರ್ಯಕ್ರಮಕ್ಕೆ ತೆರಳಲು ಪೂರ್ವ ತಯಾರಿಗಳನ್ನು ಮಾಡಲಾ ಗುತ್ತಿದೆ. ಮುದ್ದೇಬಿಹಾಳ ಮತ್ತು ತಾಳಿಕೋಟಿ ಬಾಗದಿಂದ ಕನೀಷ್ಠ ೨೫ ಸಾವಿರ ಜನ ಪಾಲ್ಗೋಳ್ಳುವ ನೀರಿಕ್ಷೆ ಇದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ ಮಾತನಾಡಿ, ಉದ್ಯಮಿ ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿಯವರು ಕಾರ್ಯಕ್ರಮಕ್ಕೆ ತೆರಳುವ ಅಭಿಮಾನಿಗಳಿಗೆ ನೂರಕ್ಕೂ ಅಧಿಕ ವಾಹನಗಳ ಸೌಲಭ್ಯ ಕಲ್ಪಿಸಿರು ವದು ಅಭಿಮಾನದ ಸಂಗತಿಯಾಗಿದೆ.
ಮುದ್ದೇಬಿಹಾಳ ಮತ್ತು ತಾಳಿಕೋಟಿ ಬಾಗದಿಂದ ಅಭಿಮಾನಿಗಳು ತಮ್ಮ ಸ್ವಂತ ಖರ್ಚಿನಿಂದ ತೆರಳುತ್ತಿದ್ದಾರೆ ಎಂದು ಅವರು ತಿಳಿಸಿದರು. ಈ ಸಮಯದಲ್ಲಿ ತಾಳಿಕೋಟಿ ಬಾಗದ ಗಣ್ಯರು, ಎಲ್ಲ ಸಮುದಾಯದ ಸಿದ್ದರಾಮಯ್ಯನವರ ಅಭಿಮಾನಿಗಳು ಉಪಸ್ಥಿತರಿದ್ದರು.