ನ್ಯೂ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ
ತುಮಕೂರು: ಮಕ್ಕಳಲ್ಲಿ ಸಂಬಂಧಗಳ ತಿಳಿವಳಿಕೆ ಮೂಡಿಸಬೇಕು.ಆಗ ಮಾತ್ರ ಮಕ್ಕಳಲ್ಲಿ ಪ್ರೀತಿಯ ಮನೋಭಾವನೆ ಮೂಡಿಸಲೂ ಸಾಧ್ಯ ಎಂದು ವೈಶ್ಯ ಕೋ ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷ ಕೆ.ಎಸ್.ರಾಮಮೂರ್ತಿ ತಿಳಿಸಿದರು.
ನಗರದ ನ್ಯೂ ಪಬ್ಲಿಕ್ ಶಾಲೆಯವ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ನಗರೀಕರಣದ ಒತ್ತಡದ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಮತ್ತು ಸಂಬಂಧಗಳು ದೂರವಾಗುತ್ತಿವೆ. ಈ ಅಂತರವನ್ನು ಕಡಿಮೆ ಮಾಡಲು ಪೋಷಕರು ಗಮನ ಹರಿಸಬೇಕಾಗಿದೆ ಎಂದರು.
ರೋಟರಿ ಕ್ಲಬ್ ತುಮಕೂರು ಅಧ್ಯಕ್ಷ ಜೆ.ಪಿ.ಶಿವಣ್ಣ ಮಾತನಾಡಿ, ಮಕ್ಕಳಿಗೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿಟ್ಟು ಅವರಿಗೆ ಅಕ್ಷರ ಜ್ಞಾನ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು ಇದರಿಂದ ಅವರ ಜ್ಞಾನ ವಿಕಾಸ ಗೊಳ್ಳುತ್ತದೆ ಎಂದರು.
ಆಶಿರ್ವಾದ್ ಟ್ರಸ್ಟ್ ನ ಉಪಾಧ್ಯಕ್ಷೆ ಮಧುರ ಅಶೋಕ್ ಕುಮಾರ್ ಮಾತನಾಡಿ, ಶಾಲೆಯ ಉದ್ದೇಶ ಬೆಳವಣಿಗೆಯ ಕುರಿತು ಮಾಹಿತಿ ನೀಡಿದರು.
ಶಾಲೆಯ ಕಾರ್ಯದರ್ಶಿ ಹಾಗೂ ಮುಖ್ಯೋಪಾಧ್ಯಾಯಿನಿ ಕಲ್ಪನಾ ವಿರೇಶ್ ಶಾಲಾ ವಾರ್ಷಿಕ ವರದಿಯನ್ನು ಓದಿದರು . ಈ ಸಂದರ್ಭದಲ್ಲಿ ಇತ್ತೀಚೆಗೆ ಭ್ರಷ್ಟಾಚಾರ ನಿರ್ಮೂಲನೆ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ರಾಷ್ಟ ಮಟ್ಟದಲ್ಲಿ ವಿಜೇತಳಾದ ಸಿರಿ ಕೊಂಡ ಅವರನ್ನು ಗೌರವಿಸಲಾಯಿತು.
ಚಿಂತನಾ ಬಳಗದ ಕೆ.ಪಿ.ಲಕ್ಷ್ಮೀ ಕಾಂತ ರಾಜೇ ಅರಸು . ಶಾಲೆಯ ಸಲಹೆಗಾರ ಎಚ್.ಆರ್.ವೀರೇಶ್, ಶಾಲಾ ಸಿಬ್ಬಂದಿಗಳಾದ ಶೃತಿ, ನಿರ್ಮಲಾ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂದವು.