Thursday, 30th November 2023

ರಾಜ್ಯದ ಜನರ ಸೇವೆಗೆ ಸದಾ ಸಿದ್ಧ: ಮುರುಗೇಶ್‌ ನಿರಾಣಿ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಸಂಭಾವ್ಯ ಸಚಿವ ಮುರುಗೇಶ್‌ ನಿರಾಣಿ ಬುಧವಾರ ಹೇಳಿದರು.

ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಈ ಹಿಂದೆ ಸಚಿವನಾಗಿ ಕೆಲಸ ಮಾಡಿರುವ ಅನುಭವವಿದೆ. ಹಾಗಾಗಿ, ರಾಜ್ಯದ ಜನರ ಸೇವೆಗೆ ಸದಾ ಸಿದ್ಧ. ಕಳೆದ ಮೂರು ದಶಕಗಳಿಂದ ಬಿಜೆಪಿಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.

ಪಂಚಮಸಾಲಿ ಸಮುದಾಯದ ಸಮಸ್ಯೆ ಸಿಎಂ ಆಲಿಸಿದ್ದಾರೆ. ಪಾದಯಾತ್ರೆ ಕೈ ಬಿಡಲು ಶ್ರೀಗಳಿಗೆ ಮನವಿ ಮಾಡುವೆ..ಸಂಭಾವ್ಯ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ ಮುರುಗೇಶ್‌ ನಿರಾಣಿ ಅವರ ಜತೆ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ್‌, ಎಸ್‌.ಅಂಗಾರ, ಎಂ.ಟಿ.ಬಿ.ನಾಗರಾಜ್‌, ಶಂಕರ್‌ ಮುಂತಾದವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ. ಆದರೆ, ಇತ್ತೀಚೆಗಷ್ಟೇ, ರಾಜರಾಜೇಶ್ವರ ನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಮುನಿರತ್ನ ಅವರು ಈ ಬಾರಿ ಸಚಿವ ಸ್ಥಾನ ವಂಚಿತರಾಗಿದ್ದಾರೆನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!