Wednesday, 11th December 2024

ನ.30 ರಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆ

ಬೆಂಗಳೂರು: ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆಯನ್ನು ನ.30 ರಂದು ಬೆಳಿಗ್ಗೆ ದೇವನಹಳ್ಳಿಯ ಸದಹಳ್ಳಿ ಗೇಟ್ ನಲ್ಲಿರುವ ಕ್ಲಾರ್ಕ್ಸ್ ಎಕ್ಸೋಟಿಕಾದಲ್ಲಿ ಕರೆಯಲಾಗಿದೆ.

ಸಭೆಯಲ್ಲಿ ಶ್ರೀ ಡಿ.ಕೆ.ಶಿವಕುಮಾರ್, ಅಧ್ಯಕ್ಷ ಕೆಪಿಸಿಸಿ, ಶ್ರೀ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ, ಕರ್ನಾಟಕದ ‌ವಿಧಾನ ಸಭಾ, ಶ್ರೀ ಎಸ್‌.ಆರ್ ಪಾಟೀಲ್, ವಿರೋಧ ಪಕ್ಷದ ನಾಯಕ, ಕರ್ನಾಟಕ ವಿಧಾನ ಪರಿಷತ್, ರಾಜ್ಯಸಭಾ ‌ಸದಸ್ಯ ಮತ್ತು ಸಿಡಬ್ಲ್ಯುಸಿ ಸದಸ್ಯ ರಾದ ಶ್ರೀ ಮಲ್ಲಿಕರ್ಜುನ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು ಮತ್ತು ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ.

ಛಾಯಗಾರರು ಮತ್ತು ವೀಡಿಯೊಗ್ರಾಫರ್‌ಗಳನ್ನು ಮಧ್ಯಾಹ್ನ 12 ಗಂಟೆಗೆ ಸಭೆಯ ವಿಡಿಯೋ ಮತ್ತು ಪೋಟೋ ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು. ಸಂಜೆ 5 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಶ್ರೀ ಡಿ.ಕೆ.ಶಿವಕುಮಾರ್ ಅವರು ಅದೇ ಸ್ಥಳದಲ್ಲಿ ಮಾಧ್ಯಮ ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.