Wednesday, 11th December 2024

ಷೇರುಪೇಟೆ ಸೆನ್ಸೆಕ್ಸ್ 352 ಕುಸಿತ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸತತ ಏರಿಕೆಗೊಂಡ ಬಳಿಕ ಸೋಮವಾರ ಕುಸಿತ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 352, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 126 ಪಾಯಿಂಟ್ಸ್ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 352.16 ಪಾಯಿಂಟ್ಸ್ ಇಳಿಕೆಗೊಂಡು 58,663.73, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 126.40 ಪಾಯಿಂಟ್ಸ್ ಕುಸಿದು 17,458.80 ತಲುಪಿದೆ.  650 ಷೇರುಗಳು ಏರಿಕೆಗೊಂಡರೆ, 1333 ಷೇರುಗಳು ಕುಸಿದವು.

ಐಟಿಸಿಯ ಷೇರು ರೂ. 233.90 ಕ್ಕೆ ಆರಂಭವಾಯಿತು, ಸುಮಾರು 3 ರೂ. ಹೆಚ್ಚಾಗಿದೆ. ಹೆಚ್‌ಸಿಎಲ್ ಟೆಕ್ 1272.60, ಟಿಸಿಎಸ್ ಷೇರುಗಳು ಶೇ. 0.24ರಷ್ಟು ಏರಿಕೆಗೊಂಡು 3839.75 ಪಾಯಿಂಟ್ಸ್ ಮುಟ್ಟಿದೆ.

ಟಾಟಾ ಸ್ಟೀಲ್ ನ ಷೇರುಗಳು ರೂ. 57 ರಷ್ಟು ಇಳಿಕೆಯಾಗಿ 1,329.00 ರೂ. ತಲುಪಿದೆ. ಐಷರ್ ಮೋಟಾರ್ಸ್ ನ ಷೇರುಗಳು 81 ರೂಪಾಯಿ ಇಳಿಕೆಯಾಗಿ ರೂ 2,813.85 ರಲ್ಲಿ ಆರಂಭವಾಯಿತು.

ಹೀರೋ ಮೋಟೋ ಕಾರ್ಪ್ ನ ಷೇರುಗಳು ರೂ .2,886.35 ರಲ್ಲಿ ಆರಂಭವಾಗಿದ್ದು, ಸುಮಾರು ರೂ. 46 ರಷ್ಟು ಇಳಿಕೆ ಯಾಗಿದೆ.