ಮುಂಬೈ: ಏಷ್ಯನ್ ಷೇರುಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಮುಂಬೈ ಷೇರುಪೇಟೆಯ ಮೇಲೆ ಬೀರಿದೆ. ಬುಧವಾರ ಸಂವೇದಿ ಸೂಚ್ಯಂಕ 380 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ.
ಷೇರುಪೇಟೆಯ ಸಂವೇದಿ ಸೂಚ್ಯಂಕ 379.99 ಅಂಕಗಳ ಏರಿಕೆಯಾಗಿದ್ದು, 51,017,51ರ ಗಡಿ ತಲುಪುವ ಮೂಲಕ ದಿನಾಂತ್ಯದ ವಹಿವಾಟು ಅಂತ್ಯಗೊಳಿಸಿದೆ. ಎನ್ ಎಸ್ ಇ ನಿಫ್ಟಿ 93 ಅಂಕ ಏರಿಕೆಯಾಗಿದ್ದು, 15,301.45ರ ಗಡಿ ದಾಟಿದೆ.
ಕೋವಿಡ್ ಎರಡನೇ ಅಲೆಯ ನಡುವೆಯೂ ಆರ್ಥಿಕ ಚೇತರಿಕೆಯಾಗುತ್ತಿರುವುದು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.