Wednesday, 11th December 2024

ಕೋವಿಡ್ ಸ್ಥಿತಿಗತಿ: ಕೆಲವೇ ಕ್ಷಣಗಳಲ್ಲಿ ಆಪ್‌ ಸರ್ಕಾರದೊಂದಿಗೆ ’ಶಾ’ ತುರ್ತು ಸಭೆ

ನವದೆಹಲಿ: ದೆಹಲಿಯಲ್ಲಿ ಕಳೆದ ಶನಿವಾರ ಒಂದೇ ದಿನ ಒಟ್ಟು 7,340 ಜನರಿಗೆ ಕೋವಿಡ್‌-19 ತಗುಲಿರು ವುದು ದೃಢಪಟ್ಟ ಬೆನ್ನಲ್ಲೇ ಸ್ಥಿತಿಗತಿ ಪರಿಶೀಲಿಸುವ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭಾನುವಾರ ಸರ್ಕಾರದೊಂದಿಗೆ ಸಭೆ ನಡೆಸಲಿದ್ದಾರೆ.

ಸಭೆಯು ಗೃಹ ಸಚಿವರ ಕಚೇರಿಯಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ. ದೆಹಲಿ ಲೆಫ್ಟಿನೆಂಟ್‌ ಗೌವರ್ನರ್‌ ಅನಿಲ್‌ ಬೈಜಾಲ್, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಭಾಗವಹಿಸಲಿದ್ದಾರೆ. ದೆಹಲಿಯ ಏಮ್ಸ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಹಾಜರಾಗುವ ನಿರೀಕ್ಷೆಯಿದೆ.

ರಾಜಧಾನಿಯಲ್ಲಿ ಇದುವರೆಗೆ ಒಟ್ಟು 4,82,170 ಸೋಂಕು ಪ್ರಕರಣಗಳು ವರದಿಯಾಗಿವೆ. ಶನಿವಾರ 96 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 7,519ಕ್ಕೆ ಏರಿಕೆಯಾಗಿದೆ. ಸದ್ಯ 4,30,195 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 44,456 ಪ್ರಕರಣಗಳು ಸಕ್ರಿಯವಾಗಿವೆ.