Saturday, 23rd November 2024

ಬಾಂಬೆ ಷೇರುಪೇಟೆ: 400 ಅಂಕ ಇಳಿಕೆ

ಮುಂಬೈ: ಮಿಶ್ರ ವಹಿವಾಟಿನ ಪರಿಣಾಮ ಬುಧವಾರ ಬಾಂಬೆ ಷೇರುಪೇಟೆಯಲ್ಲಿ ಆರಂಭಿಕ ಹಂತದಲ್ಲಿಯೇ 400ಕ್ಕೂ ಅಧಿಕ ಇಳಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 418.07 ಅಂಕ ಇಳಿಕೆಯಾಗಿದ್ದು, 52,114 ಅಂಕಗಳಲ್ಲಿ ಹಾಗೂ ಎನ್ ಎಸ್ ಇ ನಿಫ್ಟಿ 131.1 ಅಂಕ ಕುಸಿತಗೊಂಡಿದ್ದು, 15,507.70 ಅಂಕಗಳಲ್ಲಿ ವಹಿವಾಟು ನಡೆಯುತ್ತಿದೆ.

ಸೆನ್ಸೆಕ್ಸ್ ಇಳಿಕೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಎಚ್ ಡಿಎಫ್ ಸಿ ಬ್ಯಾಂಕ್, ಹೌಸಿಂಗ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಪೋರೇಶನ್, ಎಲ್ ಆಯಂಡ್ ಟಿ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ನಷ್ಟ ಕಂಡಿದೆ.

ಮತ್ತೊಂದೆಡೆ ಹೀರೋ ಮೋಟೊ ಕಾರ್ಪ್ ಲಿಮಿಟೆಡ್, ಟಿಸಿಎಸ್, ಬಜಾಜ್ ಆಟೋ ಲಿಮಿಟೆಡ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಇನ್ಫೋಸಿಸ್ ಲಿಮಿಟೆಡ್ ಷೇರುಗಳು ಲಾಭಗಳಿಸಿದೆ.