Friday, 13th December 2024

ಸರ್ಪಗಳಲ್ಲಿ ವಿಷವಿದ್ದರೂ ಮನುಷ್ಯರಷ್ಟು ಅಪಾಯಕಾರಿಗಳಲ್ಲ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 58

ವಿಶ್ವವಾಣಿ ಕ್ಲಬ್‌ಹೌಸ್‌ನ ಅತಿಥಿ ಸ್ನೇಕ್ ಶ್ಯಾಮ್ ಅಭಿಮತ

ಕೃಷ್ಣ ಜೋಯಿಸ್ ಭಾಗಿ

ಬೆಂಗಳೂರು: ಹಾವು ಎಂಬ ಪದ ಕೇಳಿದರೆ ಸಾಕು ಮನದಲ್ಲಿ ಭಯ, ಕನಸಿನಲ್ಲಿ ಬಂದರೂ ಹೌಹಾರುತ್ತೇವೆ. ಸ್ವಲ್ಪ ದಿನ ಜ್ವರ ಬಂದರೂ ಅತಿಶಯೋಕ್ತಿ ಎನಿಸುವುದಿಲ್ಲ.

ಇನ್ನೂ ಹಾವು ನೇರವಾಗಿ ನಮ್ಮ ಮುಂದೆ ಬಂದರಂತೂ ಕತೆ ಮುಗಿದೇ ಹೋಯಿತು. ಹಾವು ನಮಗೆ ತೊಂದರೆ ಕೊಡಲ್ಲ, ಅವುಗಳಿಗೆ ಕಾಟ ಕೊಟ್ಟರೆ ಕಚ್ಚದೆ ಬಿಡಲ್ಲ. ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಹಾಗೂ ಕೃಷ್ಣ ಜೋಯಿಸ್ ಅವರು ’ವಿಶ್ವವಾಣಿ’ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಹಾವಿನ ರೋಚಕ ಸಂಗತಿಗಳನ್ನು ಕೇಳುಗರ ಮುಂದಿಟ್ಟರು.

ನಾಗಾರಾಧನೆಯ ಹಿಂದೆ ಅತೀವ ಭಯ, ಭಕ್ತಿ, ನಂಬಿಕೆ ಅಡಗಿದೆ. ಸರ್ಪಗಳಲ್ಲಿ ವಿಷವಿದ್ದರೂ ಮನುಷ್ಯರಷ್ಟು ಅಪಾಯಕಾರಿಗಳಲ್ಲ. ಹಾವುಗಳನ್ನು ಕೊಲ್ಲಬಾರದು. ಬಹುತೇಕ ಮಂದಿ ಭಾವಿಸಿರುವಂತೆ, ಪ್ರಪಂಚದಲ್ಲಿ ಕಾಣಸಿಗುವಂತಹ ಎಲ್ಲ ಹಾವುಗಳು ವಿಷಕಾರಿಯಲ್ಲ. ಹಾಗೆ ನೋಡಿದರೆ, ವಿಷಕಾರಿ ಹಾವುಗಳಿಗಿಂತ, ವಿಷ ರಹಿತ ಹಾವುಗಳ ಪ್ರಭೇದಗಳ ಸಂಖ್ಯೆಯೇ ಹೆಚ್ಚು. ನಾಲ್ಕು ವಿಷಕಾರಿ ಹಾವುಗಳು ಯಾವುದು ಅಂದರೆ ರಸೆಲ್ ವೈಪರ್‌ಕಿಂಗ್, ಕೋಬ್ರಾ, ಕೇರೆ ಹಾವು ಮತ್ತು
ನಾಗರ ಹಾವು ಎಂಬ ಸಂಗತಿಗಳನ್ನು ತಿಳಿಸಿದರು.

ಹಾವು ಅಂಜುಬುರಕ ಪ್ರಾಣಿ. ಹಾವಿಲ್ಲೂ ನ್ಯೂರೋ ಟಾಕ್ಸಿನ್ ಹಾಗೂ ಹಿಮೋ ಟಾಕ್ಸಿನ್ ಎಂಬ ವಿಷಕಾರಿ ಜಾತಿ ಇವೆ. ನಾಗರಹಾವಿನಲ್ಲಿ ನ್ಯುರೋ ಟಾಕ್ಸಿನ್, ಮಂಡಲ ಹಾವಿನಲ್ಲಿ ಹಿಮೋಟಾಕ್ಸಿನ್ ವಿಷ ಇರುತ್ತದೆ. ಮಂಡಲ ಕಚ್ಚಿದರೆ ಊತ, ಗ್ಯಾಂಗ್ರಿನ್ ಆಗುತ್ತದೆ. ನಾಗರ ಹಾವು ಕಚ್ಚಿದರೆ ಕಣ್ಣು ಮಂಜು, ಮೈಯ ನಡುಕ ಶುರುವಾಗುತ್ತದೆ ಎಂದರು.

ಹಾವು ಹಾಲು ಕುಡಿಯಲ್ಲ. ಅದು ಮಾಂಸಹಾರಿ ಪ್ರಾಣಿ. ಪುಟ್ಟ ಪುಟ್ಟ ಪ್ರಾಣಿಗಳನ್ನು ತಿಂದು ಜೀವನ ಸಾಗುತ್ತದೆ. ಏನೂ ಸಿಗಲಿಲ್ಲ ಎಂದರೆ ಸಣ್ಣ ಹಾವುಗಳನ್ನೇ ತಿನ್ನುತ್ತದೆ. ಷಷ್ಠಿ ಹಬ್ಬದ ಬಂದಾಗ ಹುತ್ತಕ್ಕೆ ಹಾಲು, ತುಪ್ಪ ಹಾಕುತ್ತಾರೆ, ಇದು ತಪ್ಪು. ಪೂರ್ವಜರು ಹುತ್ತಕ್ಕೆ ಮಾತ್ರ ಪೂಜೆ ಮಾಡುತ್ತಿದ್ದರು. ಪೂಜೆ ಮಾಡುವು ದರಿಂದ ಹಾವಿನ ಸಂತತಿ ಹೆಚ್ಚಳ ಮಾಡು ವುದು ಎಂದರ್ಥ ಎಂದು ಅವರು ಹೇಳಿದರು.

ಹುತ್ತ ನ್ಯಾಚುರಲ್ ಎಸಿ ರೂಮ: ಗೆದ್ದಲು ಮಣ್ಣಿನಿಂದ ನಿರ್ಮಿತವಾಗಿರುವುದು ಹುತ್ತ. ಗೆದ್ದಲು ಹುಳು ಗೂಡು ಮಾಡುತ್ತವೆ. ಹಾವು ಶೀತ ರಕ್ತ ಪ್ರಾಣಿ. 17-18 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಜೀವಿಸುತ್ತದೆ. ಹುತ್ತದಲ್ಲಿ ಯಾವಾಗಲೂ ಹಾವು ವಾಸವಿರಲ್ಲ ಎಂದು ವಿವರಿಸಿದರು.

ಹಾವುಗಳ ಸಂತಾನೋತ್ಪತ್ತಿ ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಹೆಚ್ಚು. ಮೊಟ್ಟೆ ಇಟ್ಟು 45-5೦ ದಿನಗಳ ನಂತರ ಮರಿಗಳು ಹೊರಬರುತ್ತವೆ. ಮರಿ ಹಾಕುವ ಹಾವುಗಳು ಮಂಡಲ, ಹಸಿರು ಹಾವು, ಸ್ಯಾಂಡ್ ಮೋವಾ. ಎಲ್ಲ ಜಾತಿಯ ಹಾವುಗಳಲ್ಲಿ ಗಂಡು ಹಾವು ಇದೆ. ಭಾರತದಲ್ಲಿ ಬ್ಲೈಂಡ್ ಸ್ನೇಕ್ ಎಂಬ ಜಾತಿಯಲ್ಲಿ ಗಂಡು ಹಾವು ಇರಲ್ಲ. ಇದು ಹೆಣ್ಣಾವು ಆಗಿದ್ದು ಇದು ಸಂತಾನೋತ್ಪತ್ತಿ ತಾನೇ ಮಾಡಿ ಕೊಳ್ಳುತ್ತದೆ. ಭಾರತದಲ್ಲಿರುವ 285 ಪ್ರಭೇದಗಳಲ್ಲಿ ಹೆಚೆಂದರೆ ೫೦ ಪ್ರಭೇದಗಳಷ್ಟು ಹಾವುಗಳು ವಿಷಕಾರಿಯಾಗಿರಬಹುದು ಎಂದು ಹೇಳಿದರು.

ಹಾವು ಸಂರಕ್ಷಕರನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ ಕರೋನಾ ಹಿನ್ನೆಲೆಯಲ್ಲಿ ಜನ ಮನೆಯಲ್ಲಿರುವುದರಿಂದ ಎಲ್ಲ ಹಾವುಗಳು ಹೊರಗಡೆ
ಬರುತ್ತಿವೆ. ಲಾಕ್ ಡೌನ್ ಸಂದರ್ಭದಲ್ಲಿ ಮನೆಗಳ ಬಳಿ ಹೋಗಿ ಹಾವುಗಳನ್ನು ಹಿಡಿಯಲಾಗಿದೆ. ಆದ್ದರಿಂದಾಗಿ ಹಾವಿನ ಸಂರಕ್ಷಕರನ್ನು ಕರೋನಾ ವಾರಿ ಯರ್ಸ್
ಎಂದು ಪರಿಗಣಿಸಿ. ನಮಗೂ ಜೀವ, ಜೀವನ ಇದೆ. ನಮ್ಮಕಷ್ಟಯಾರಕಣ್ಣಿಗೂ ಕಾಣಲ್ಲ. ಸರಕಾರ ಸಹಾಯ ಮಾಡಬೇಕು ಎಂದು ಸ್ನೇಕ್ ಶ್ಯಾಮ್ ಅವರು ಮನವಿ ಮಾಡಿದರು.

ಶ್ರಾವಣ ಶುಕ್ಲ ಪಂಚಮಿ ದಿನ ಹೇಗೆ ಬಂತು ಗೊತ್ತಾ!
ಪುರಾಣದಲ್ಲಿ ಪರೀಕ್ಷಿತ ಮಹಾರಾಜ ವಿಹಾರಕ್ಕೆಕಾಡಿಗೆ ಹೋಗ ತ್ತಾರೆ. ಕಾಡಿನಲ್ಲಿ ಋಷಿ ಮುನಿಗಳು ತಪಸ್ಸು ಮಾಡುತ್ತಿರುತ್ತಾರೆ. ಮಹರಾಜನಿಗೆ ದಾಹ ಆದಾಗ ತಪಸ್ಸಿನಲ್ಲಿರುವವರನ್ನು ನೀರು ಕೊಡಿ ಅಂದನು. ಆದರೂ ಋಷಿಗಳು ತಪಸ್ಸು ಮಾಡುತ್ತಿದ್ದರು. ಋಷಿಗಳು ಇದ್ದ ಜಾಗದ ಪಕ್ಕದಲ್ಲಿ ಸತ್ತು ಬಿದ್ದಿರುವ ಹಾವನ್ನು ಅವರ ಮೇಲೆ ಹಾಕುತ್ತಾನೆ.

ಋಷಿ ಮುನಿಗಳ ಮಗ ಶೃಂಗ ಇದನ್ನು ನೋಡಿ ಯಾರು ಈ ಕೆಲಸ ಮಾಡಿದ್ದಾರೋ ಒಂದು ವಾರದಲ್ಲಿ ಅವ ರನ್ನು ಹಾವು ಕಚ್ಚಿ ಸಾಯಿಸಲಿ ಎಂದು ಶಾಪ ಹಾಕು ತ್ತಾನೆ. ಆಗ ಮಹಾರಾಜನಿಗೆ ಇದು ಗೊತ್ತಾಗುತ್ತದೆ.ಆಸ್ಥಾನದ ಸುತ್ತಲೂ ಭದ್ರತೆ ಮಾಡಿಕೊಳ್ಳುತ್ತಾನೆ. ಆಸ್ಥಾನದಲ್ಲಿ ತಕ್ಷಕ ಎಂಬುವನು ಕೀಟದ ರೂಪದಲ್ಲಿ ಬಂದು ವಿಷ ಹಣ್ಣಿನಲ್ಲಿ ಬಿಡುತ್ತಾನೆ. ವಿಷಕಾರಿ ಹಣ್ಣು ಸೇವಿಸಿ ರಾಜ ಸಾಯುತ್ತಾನೆ.

ಮಹಾ ರಾಜನ ಮಗ ಜನಮೇಜೇಯ ಎಂಬುವವನು ತಂದೆಯ ಸತ್ತ ಪ್ರಸಂಗ ತಿಳಿದುಕೊಂಡ. ಅವನು ಸರ್ಪನಾಶಕ್ಕೆ ಸರ್ಪಯಾಗ ಮಾಡಿದನು. ಆಗ ಋಷಿ ಮುನಿಯೊಬ್ಬ ಈ ಯಾಗ ಶ್ರಾವಣ ಶುಕ್ಲ ಪಂಚಮಿ ದಿನ ನಿಲ್ಲಿಸುತ್ತಾನೆ ಎಂದು ಕೃಷ್ಣ ಜೋಯಿಸ್ ತಿಳಿಸಿದರು.

ಮದುವೆ, ಮಕ್ಕಳು ಆಗದಿರುವುದಕ್ಕೆ ಕಾರಣ ಸರ್ಪದೋಷ
ಸಮಾಜದಲ್ಲಿನ ದುರ್ಜನರಿಗೆ ಸರ್ವಾಂಗವೂ ವಿಷ. ಮನುಷ್ಯನೇ ವಿಷಕಾರಿ. ಹಾವನ್ನು ಸಾಯಿಸುವುದಲ್ಲ. ಸಂರಕ್ಷಣೆ ಮಾಡಬೇಕು. ಹಾವು ಹುಡುಕಿಕೊಂಡು ಹೋಗಿ ಕಚ್ಚುವುದಿಲ್ಲ. ಅದಕ್ಕೆ ತೊಂದರೆಯಾದಾಗ ಅದು ನಮ್ಮನ್ನು ಕಚ್ಚುತ್ತದೆ. 12 ವರ್ಷ ದ್ವೇಷ ಹಾವುಗಳು ಸಾಧಿಸುವುದಿಲ್ಲ. ಅಷ್ಟನಾಗಕುಲ, ಸರ್ಪದೋಷ
ಪೂಜೆ ಮಾಡುವುದು ಅನೇಕ ದೋಷಗಳಿಗೆ ಪರಿಹಾರ ಇದೆ.

ಮದುವೆ, ಮಕ್ಕಳು ಆಗದಿರುವುದು ಸರ್ಪದೋಷ. ಯಾವುದೋ ಜನ್ಮದಲ್ಲಿ ಸರ್ಪ ಹನನ ಮಾಡಿದರೆ ಆ ದೋಷ ವಂಶಪಾರಂಪರ್ಯವಾಗಿ ಮುಂದುವರಿದು ಅಂತಹ ಕುಟುಂಬದ ಏಳಿಗೆಕುಂಠಿತವಾಗುತ್ತದೆ ಎಂದು ಉರಗ ಸಂರಕ್ಷಕ ಕೃಷ್ಣ ಜೋಯಿಸ್ ತಿಳಿಸಿದರು.

ಹಾವು ಕಚ್ಚಿದರೆ ಏನು ಮಾಡಬೇಕು?
ಹಾವುಕಚ್ಚಿದರೆ ಪ್ರಥಮ ಚಿಕಿತ್ಸೆ ಏನೆಂದರೆ ಆ ವ್ಯಕ್ತಿಗೆ ಮೊದಲು ಧೈರ್ಯ ಹೇಳಬೇಕು. ಕಚ್ಚಿರುವ ಜಾಗ ವನ್ನು ಸಾಬೂನಿನಿಂದ ತೊಳೆಯಬೇಕು. ಬಾಯಿಯ
ಮೂಲಕ ವಿಷ ತೆಗೆಯಬಾರದು. ಕಚ್ಚಿರುವ ಭಾಗ ಅಲುಗಾಡಿಸದೆ ಆಸ್ಪತ್ರೆಗೆ ಸೇರಿಸಬೇಕು. ಗೋಲ್ಡನ್ ಅವರನ್‌ನಲ್ಲಿ ಆಸ್ಪತ್ರೆಗೆ ಸೇರಿಸುವುದು ಸೂಕ್ತ. ವೈದ್ಯರು ಆಂಟಿಸ್ನೇಕ್ ವೆನಮ್ ಎಂಬ ಔಷಧ ಬೇಗ ಕೊಡುವುದಿಲ್ಲ. ರಕ್ತ ಪರೀಕ್ಷೆ ನಂತರ ಈ ಔಷಧಕೊಡುತ್ತಾರೆ. ಬ್ಲೇಡ್‌ನಲ್ಲಿ ಹಾವುಕಚ್ಚಿದ ಭಾಗವನ್ನು ಕಟ್ ಮಾಡುವುದು ಬೇಡ ಎಂದು ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ತಿಳಿಸಿದರು.

ಸ್ನೇಕ್ ಶ್ಯಾಮ್ ಅವರನ್ನು ಸಂಪರ್ಕಿಸುವುದು ಹೇಗೆ?
ಕರೆ ಬಂದ ತಕ್ಷಣ ಸ್ವಂತ ಖರ್ಚಿನಲ್ಲಿ ತೆರಳಿ ಮನೆಗಳಲ್ಲಿ ವಿತು ಕೊಂಡಿರುವ ಹಾವುಗಳನ್ನು ಸೆರೆಹಿಡಿಯುವುದು ಸುಲಭದ ಕೆಲಸವಲ್ಲ. ಆದರೂ ನಿಷ್ಠೆಯಿಂದಲೇ ಕಾರ್ಯ ನಿರ್ವಹಿಸುತ್ತಿzರೆ ಸ್ನೇಕ್ ಶ್ಯಾಮ್ ಅವರು. ಹೆಚ್ಚಿನ ಮಾಹಿತಿಗೆ 9980557797 ಸಂಪರ್ಕಿಸಬಹುದು.

ಹಾವುಗಳ ಸಂರಕ್ಷಣೆ ಹೊಣೆ ನಮ್ಮದು

ಮನೆಯಲ್ಲಿ ಬೆಳ್ಳಿನಾಗಪ್ಪ ಇಟ್ಟು ಪೂಜೆ ಮಾಡಿ. ಹುತ್ತಕ್ಕೆ ಹಾಲು ಹಾಕಬೇಡಿ. ಹಾಲು ವೃದ್ಧಾಶ್ರಮಕ್ಕೆ ಕೊಡಿ ಯಾವ ಹಾವಲ್ಲೂ ಮಣಿ ಇರಲ್ಲ. ಪುಂಗಿ ಊದಿದರೆ ಹಾವು ಬರುತ್ತೆ ಅಂತಾರೆ. ಇದು ಸುಳ್ಳು. ಅದಕ್ಕೆ ಕಿವಿ ಕೇಳಲ್ಲ. ಹಾವಿನ ಬಗ್ಗೆ ತಪ್ಪು ನಂಬಿಕೆ ಇದೆ. ಹಾವು ಕಾಣಿಸಿದಾಗ ಸಂರಕ್ಷಕರಿಗೆ ಕರೆ ಮಾಡಬೇಕು. ಕೇರೆ ಹಾವು 300ಕ್ಕೂ ಹೆಚ್ಚು ಇಲಿಗಳನ್ನು ತಿನ್ನುತ್ತದೆ.ಕೇರೆ ಹಾವು ರೈತ ಮಿತ್ರ. ಕುರುಡು ಹಾವು ಚಿಕ್ಕದು, ಹೆಬ್ಬಾವು ದೊಡ್ಡದು. ಹಾವಿನ ವಿಷ ನರಮಂಡಲಕ್ಕೆ ಹೋದರೆ ಮಾತ್ರ ಅಪಾಯ. ಹಾವು ಉಸಿರು ಬಿಟ್ಟರೆ ದೇಹಕ್ಕೆ ಏನೂ ತೊಂದರೆ ಇಲ್ಲ.

***

ನಮಗೆ ಹಾವಿನ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಹಾವಿನ ಬಗ್ಗೆ ತಪ್ಪು ಗ್ರಹಿಕೆ, ಮೂಢನಂಬಿಕೆ ಗ್ರಹಿಸಿದ್ದೇವೆ. ಶ್ರಾವಣಮಾಸದ ವೇಳೆ ನಾಗ ಪಂಚಮಿ ಹಬ್ಬದಂದು ಪೂಜೆ ಮಾಡುವ ಉದಾತ್ತ ಆಚರಣೆ ಮಾಡುವ ಸಂಸ್ಕೃತಿ ನಮ್ಮದು. ಆದರೆ ಹಾವು ಎಂದರೆ ಭಯ ಪಡುವವರು ಹೆಚ್ಚು. ಹಾವುಗಳು ಸ್ನೇಕ್ ಶಾಮ್ ಅವರನ್ನು ಕಂಡರೆ ಹೆದರುತ್ತವೆ. ಮನುಷ್ಯನಷ್ಟು ವಿಷಕಾರಿ ಪ್ರಾಣಿಯಲ್ಲ ಹಾವು ಎಂದು ಸ್ನೇಕ್ ಶಾಮ್ ಹೇಳಿದ್ದಾರೆ.

-ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು