Wednesday, 11th December 2024

ದಿ.ಜಯಲಲಿತಾ ದತ್ತು ಪುತ್ರ ಬಿಡುಗಡೆಗೆ ದಿನಾಂಕ ನಿಗದಿ

ಬೆಂಗಳೂರು: ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ.ಶಶಿಕಲಾ ಸೋದರಳಿಯ, ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಅವರ ದತ್ತು ಪುತ್ರ, ರೂ.10 ಕೋಟಿ ದಂಡ ಕಟ್ಟದೆ 1 ವರ್ಷ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಸುಧಾಕರನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಅ.16 ರಂದು ತಲೈವಿಯ ದತ್ತು ಪುತ್ರ ಸುಧಕಾರನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಸುಧಾಕರನ್ ಬಿಡುಗಡೆ ಬಗ್ಗೆ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ದಿನಾಂಕ ನಿಗದಿ ಮಾಡಿದ್ದಾರೆ. ಶಶಿಕಲಾ ಬಿಡುಗಡೆ ಬಳಿಕ ಸುಧಾಕರನ್ ಭೇಟಿಗೆ ಯಾರು ಬಂದಿರಲಿಲ್ಲ ಎಂದು ತಿಳಿದು ಬಂದಿದೆ.

ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಸುಧಾಕರನ್‌ಗೆ ನಾಲ್ಕು ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು. 2017 ರಲ್ಲಿ ಶಶಿಕಲಾ, ಇಳವರಸಿ, ಸುಧಾಕರನ್‌ಗೆ 10 ಕೋಟಿ ದಂಡ ವಿಧಿಸಲಾಗಿತ್ತು.

ಶಶಿಕಲಾ ಮತ್ತು ಇಳವರಸಿ ಇಬ್ಬರಿಗೂ 10 ಕೋಟಿಯಂತೆ ದಂಡ ಕಟ್ಟಿ ಬಿಡುಗಡೆ ಹೊಂದಿದ್ದರು. ಸುಧಾಕರನ್ ದಂಡ ಕಟ್ಟದ ಹಿನ್ನಲೆ 1 ವರ್ಷ ಹೆಚ್ಚು ಜೈಲುವಾಸ ಮುಂದುವರಿಸಲಾಗಿತ್ತು. ಇದೀಗ ಹೆಚ್ಚುವರಿ ಜೈಲು ಶಿಕ್ಷೆ ಮುಕ್ತಾಯಗೊಂಡಿದ್ದು, ಇಂದು ಸೆರೆವಾಸದಿಂದ ಮುಕ್ತಗೊಳ್ಳಲಿದ್ದಾರೆ.

ಅಪರಾಧಿಗಳನ್ನು ಬಿಡುಗಡೆ ಮಾಡುವಾಗ ಅವರು ತೆಗೆದುಕೊಂಡ ರಜೆಗಳ ಸಂಖ್ಯೆಯನ್ನು (ಪೆರೋಲ್) ನಾವು ಪರಿಗಣಿಸುತ್ತೇವೆ. ಅವರು ಒಂದು ಸಲವೂ ಪೆರೋಲ್ ಮೇಲೆ ಹೊರ ಹೋಗಿಲ್ಲ. ಹೀಗಾಗಿ ಅವರ ಶಿಕ್ಷೆಯನ್ನು 89 ದಿನಗಳವರೆಗೆ ಕಡಿಮೆ ಮಾಡಲಾಗಿದೆ. ಈ ಕಾರಣದಿಂದಾಗಿ, ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಸುಧಾಕರನ್ ಅವರನ್ನು ಶನಿವಾರ ಬಿಡುಗಡೆ ಮಾಡಲಾಗುತ್ತಿದೆ ಎಂದು ಜೈಲಿನ ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.