Friday, 13th December 2024

Viral News: ಶಾಕಿಂಗ್‌ ಘಟನೆ! 10 ಸಾವಿರ ಕೊಡಿ ಕಾಪಾಡ್ತೀವಿ; ಅಧಿಕಾರಿ ಮುಳುಗಿ ಸಾಯುತ್ತಿದ್ದರೂ ನೋಡುತ್ತಾ ನಿಂತ ಮುಳುಗುತಜ್ಞರು

Viral News

ಲಕ್ನೋ: ಅಧಿಕಾರಿಯೊಬ್ಬರು ನೀರಿನಲ್ಲಿ ಮುಳುಗುತ್ತಿದ್ದರೂ ರಕ್ಷಣೆಗೆ ಧಾವಿಸದೇ ಸ್ಥಳೀಯ ಮುಳುಗುತಜ್ಞರು(Divers) ಹಣಕ್ಕೆ ಡಿಮ್ಯಾಂಡ್‌ ಮಾಡುತ್ತಾ ನಿಂತಿದ್ದ ಅಮಾನುಷ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಗಂಗಾನದಿಯಲ್ಲಿ ಉತ್ತರಪ್ರದೇಶದ(Uttarpradesh) ಸರ್ಕಾರಿ ಅಧಿಕಾರಿಯೊಬ್ಬರು ಮುಳುಗಿ ಸಾವನ್ನಪ್ಪಿದ್ದು,10,000 ಹಣ ಕೊಡುವವರೆಗೆ ಅವರ ರಕ್ಷಣೆ ಡೈವರ್‌ಗಳು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ(Viral News).

ಏನಿದು ಘಟನೆ?

ಕಾನ್ಪುರ ನಗರದ ನಾನಾಮೌ ಗಂಗಾ ಘಾಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಅಧಿಕಾರಿಯನ್ನು ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಗೌರವ್ ಗೌರವ್ ಎಂದು ಗುರುತಿಸಲಾಗಿದೆ. ಗೌರವ್‌ ಶನಿವಾರ ಮೂವರು ಸಹಚರರೊಂದಿಗೆ ಗಂಗಾ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಅವರು ನೀರಿನಲ್ಲಿ ಮುಳುಗಿದ್ದಾರೆ. ಮುಳುಗುತ್ತಿದ್ದ ಅವರನ್ನು ರಕ್ಷಿಸುವಂತೆ  ಸ್ಥಳೀಯ ಡೈವರ್‌ಗಳಿಗೆ ಮನವಿ ಮಾಡಿದ್ದಾರೆ. ಆದರೆ ಹತ್ತು ಸಾವಿ ಹಣ ನೀಡುವಂತೆ ಡೈವರ್‌ಗಳು ಡಿಮ್ಯಾಂಡ್‌ ಮಾಡಿದ್ದಾರೆ. ಹಣ ವರ್ಗಾವಣೆ ಆಗುವಾಗ ವಿಳಂಬವಾಗಿದೆ. ಅತ್ತ ಅಧಿಕಾರಿ ನೀರಿನಲ್ಲಿ ಮುಳುಗುತ್ತಿದ್ದರೂ ಡೈವರ್‌ಗಳು ರಕ್ಷಣೆಗೆ ಮುಂದಾಗಿಲ್ಲ. ಪರಿಣಾಮವಾಗಿ ಗೌರವ್‌ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಸದ್ಯ ಎನ್‌ಡಿಆರ್‌ಎಫ್ ತಂಡವು ಪ್ರಸ್ತುತ ನದಿಯ ಆಳವಾದ ಗೌರವ್‌ ಮೃತದೇಹಕ್ಕಗಿ ಹುಡುಕಾಟ ನಡೆಸುತ್ತಿದೆ. ಇನ್ನು ಗೌರವ್‌ ಅವರ ಸಹೋದರ ಬಿಹಾರ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ಅವರ ಪತ್ನಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸೆಲ್ಫಿ ಹುಚ್ಚಾಟಕ್ಕೆ ವಿದ್ಯಾರ್ಥಿಗಳು ಬಲಿ

ಸೆಲ್ಫಿ ಹುಚ್ಚಾಟದಿಂದ ಎಂತಹದ್ದೇ ಭಯಾನಕ ಘಟನೆಗಳು ಸಂಭವಿಸುತ್ತಿದ್ದರೂ ಯುವಕರ ಹುಚ್ಚಾಟ ಅಂತೂ ನಿಲ್ಲುವಂತೆ ಕಾಣುತ್ತಿಲ್ಲ.ಇತ್ತೀಚೆಗೆ ನಡೆದ ಮತ್ತೊಂದು ಘಟನೆಯಲ್ಲಿ ಪಾಟ್ನಾದ ಮೂವರು ವಿದ್ಯಾರ್ಥಿಗಳು ವಾರಣಾಸಿಯ ಸಾಮ್ನೆ ಘಾಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಗಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಭಾನುವಾರ ನಸುಕಿನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತರನ್ನು ವೈಭವ್ ಸಿಂಗ್ (21), ರಿಷಿ ಸಿಂಗ್ (21) ಮತ್ತು ಸೋನಾ ಸಿಂಗ್ (19) ಎಂದು ಗುರುತಿಸಲಾಗಿದೆ. ಸ್ನೇಹಿತರ ಜತೆ ವಾರಣಾಸಿಗೆ ಬಂದಿದ್ದ ಅವರು, ಜೆಟ್ಟಿ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸೋನಾ ನದಿಗೆ ಬಿದ್ದಿದ್ದಾರೆ.
ವೈಭವ್ ಮತ್ತು ರಿಷಿ ಅವಳನ್ನು ರಕ್ಷಿಸಲು ಹಾರಿದರು ಆದರೆ ಬಲವಾದ ಪ್ರವಾಹದಿಂದ ಕೊಚ್ಚಿಹೋದರು. ಮೂವರೂ ಪಾಟ್ನಾದವರಾಗಿದ್ದು, ವೈಭವ್ ಮತ್ತು ರಿಷಿ ಅದೇ ದಿನ ಜೈಪುರಕ್ಕೆ ತೆರಳಲು ನಿರ್ಧರಿಸಿದ್ದರು. ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಭಾನುವಾರ ಮುಂಜಾನೆ ಆಗಮಿಸಿದೆ, ಆದರೆ ಗಂಗಾನದಿಯ ವೇಗವಾಗಿ ಹರಿಯುವ ನೀರಿನಿಂದ ಸೋನಾ ಮತ್ತು ರಿಷಿಯ ಹುಡುಕಾಟವು ಬಹಳ ಕಷ್ಟವಾಗಿದೆ.

10ಸಾವಿರ ಕೊಡಿ ಕಾಪಾಡ್ತೀವಿ; ಅಧಿಕಾರಿ ಮುಳುಗಿ ಸಾಯುತ್ತಿದ್ದರೂ ನೋಡುತ್ತಾ ನಿಂತ ಡೈವರ್ಸ್‌