Thursday, 12th December 2024

Viral Video: ಗಿಡದೊಂದಿಗೆ ಡೇಟಿಂಗ್‌! ಖ್ಯಾತ ಯೂಟ್ಯೂಬರ್‌ ಕೊಟ್ಲು ʼನೆಟ್‌ ಲೋಕಕ್ಕೆʼ ಶಾಕ್‌!

ಭಾರತದಲ್ಲಿ ಧಾರ್ಮಿಕ ಕಾರಣಗಳಿಗಾಗಿ ಕೆಲವೊಂದು ಜಾತಿಯ ಮರಗಳೊಂದಿಗೆ ಸಾಂಕೇತಿಕವಾಗಿ ವಿವಾಹವಾಗುವ ಪದ್ಧತಿಗಳು ಆಚರಣೆಯಲ್ಲಿರುವುದು ನಮಗೆಲ್ಲ ತಿಳಿದೇ ಇದೆ. ಮದುವೆ ಸಂದರ್ಭದಲ್ಲಿ ಯಾವುದೇ ರೀತಿಯ ದೋಷಗಳಿದ್ದರೆ ಅವುಗಳ ನಿವಾರಣೆಗಾಗಿ ಬಾಳೆ ಗಿಡದೊಂದಿಗೆ ವಿವಾಹವಾಗುವ ಪದ್ಧತಿ ದಕ್ಷಿಣ ಭಾರತದ ಕೆಲವು ಕಡೆಗಳಲ್ಲಿ ಚಾಲ್ತಿಯಲ್ಲಿದೆ. ಆದರೆ ಗಿಡದೊಂದಿಗೆ ಡೇಟಿಂಗ್‌(Dating)  ಹೋಗುವ ಸುದ್ದಿಯನ್ನು ನೀವು ಯಾವತ್ತಾದ್ರೂ ಕೇಳಿದ್ದೀರಾ? ಇಲ್ಲವೆಂದಾಗಿದ್ದಲ್ಲಿ ಈಗ ನಾವು ನಿಮ್ಗೆ ಹೇಳ್ತೇವೆ ಕೇಳಿ!

ಇಲ್ಲೊಬ್ಬಾಕೆ ಸೋಷಿಯಲ್‌ ಮೀಡಿಯಾ(social media) ಸ್ಟಾರ್‌ ಇವ್ಯಾ ಬ್ಲೂಮ್‌(Ivy Bloom) ಎಂಬಾಕೆ ಗಿಡದೊಂದಿಗೆ ಡೇಟಿಂಗ್‌ ನಡೆಸುತ್ತ ಕೇವಲ ಹೊರಗಡೆ ಸುತ್ತಾಡೋದು, ಜೊತೆಯಲ್ಲಿ ಊಟ ಮಾಡೋದು, ಫುಡ್‌ ಟೇಬಲ್‌ ಹಂಚಿಕೊಳ್ಳೋದು ಮಾತ್ರವಲ್ಲದೇ ಇನ್ನೂ ಹಲವಾರು ವಿಷಯಗಳನ್ನು ತನ್ನ ಈ ವಿಶಿಷ್ಟ ಸಂಗಾತಿಯೊಂದಿಗೆ ನಡೆಸ್ತಿದ್ದಾಳೆ.

ಇದಕ್ಕೆ ಸಂಬಂಧಿಸಿದಂತೆ ಇವ್ಯಾ ಬ್ಲೂಮ್‌ ತನ್ನ ಯೂಟ್ಯೂಬ್‌(YouTube) ಖಾತೆಯಲ್ಲಿ ಕೆಲವೊಂದು ವಿಡಿಯೋಗಳನ್ನು ಅಪ್ಲೋಡ್‌ ಮಾಡಿದ್ದು ಅದರಲ್ಲಿ ಆಕೆ ಗಿಡದೊಂದಿಗೆ ತಾನು ಡೇಟಿಂಗ್‌ ನಡೆಸುತ್ತಿರುವ ಪೂಟೇಜ್‌ ಗಳನ್ನು ಹಂಚಿಕೊಂಡಿದ್ದಾಳೆ. ಮಾತ್ರವಲ್ಲದೇ, ಕಳೆದ ಎರಡು ವಾರಗಳಿಂದ ತಾನು ಗಿಡದ ಜೊತೆ ಡೇಟಿಂಗ್‌ ನಡೆಸುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ.

ಆ ಒಂದು ವಿಡಿಯೋದಲ್ಲಿರುವಂತೆ (Viral Video) ಇವ್ಯಾ ತನ್ನ ಲವರ್‌ ಗಿಡವನ್ನು ಮನೆಗೆ ಸ್ವಾಗತಿಸುತ್ತಿರುವ ದೃಶ್ಯವಿದೆ. ಇನ್ನೊಂದು ವಿಡಿಯೋದಲ್ಲಿ, ತಾನು ಗಿಡದ ಜೊತೆ ಡೇಟಿಂಗ್‌ ಮಾಡುತ್ತಿರುವ ವಿಚಾರವನ್ನು ಆಕೆ ವೀಕ್ಷಕರ ಜೊತೆ ಹಂಚಿಕೊಂಡಿದ್ದಾಳೆ. ಇಲ್ಲಿ ಈಕೆ ಒಬ್ಬ ವ್ಯಕ್ತಿಯ ಬದಲಾಗಿ ಒಂದು ಗಿಡದ ಜೊತೆಗೆ ರೊಮ್ಯಾಂಟಿಕ್‌ ಆಗಿ ಇರುವ ವಿಡಿಯೋಗಳಿವೆ. ಈ ವಿಡಿಯೋ ದೃಶ್ಯಗಳಲ್ಲಿ ಆಕೆ ಆ ಗಿಡವನ್ನು ತಬ್ಬಿಕೊಂಡು ಕಿಸ್‌ ಕೂಡಾ ಕೊಡುತ್ತಿದ್ದಾಳೆ. ಇಷ್ಟು ಮಾತ್ರವಲ್ಲದೇ ತನ್ನ ಈ ವಿಶಿಷ್ಟ ಸಂಗಾತಿಯ ಜೊತೆ ಆಕೆ ಲಾಂಗ್‌ ರೈಡ್‌ ಕೂಡಾ ಹೋಗ್ತಿದ್ದಾಳೆ ಮತ್ತು ಕೆಲವೊಂದು ಫನ್‌ ವಾಟರ್‌ ಗೇಮ್‌ ಗಳನ್ನೂ ಕೂಡ ಆಡುತ್ತಿದ್ದಾಳೆ.

ತನ್ನ ಈ ಹೊಸ ಸಂಗಾತಿಯನ್ನು ಇಂಟರ್ನೆಟ್‌ ಕುಟುಂಬಕ್ಕೆ ಪರಿಚಯ ಮಾಡಿಕೊಟ್ಟಿರುವ ಇವ್ಯಾ, ʼತಾನು ಈ ಗಿಡಕ್ಕೆ ಒಂದು ಎಐ ಸಿಸ್ಟಮನ್ನು ಅಳವಡಿಸಿದ್ದು, ಆಕೆ ಹೇಳಿಕೊಳ್ಳುವಂತೆ ಈ ಎಐ ಆ ಗಿಡದ ಎಲೆಗಳಿಂದ ಕಂಪನವನ್ನು ಸ್ವೀಕರಿಸಿ ಆ ಮೂಲಕ ಗಿಡ “ಪದ”ಗಳ ಮೂಲಕ ತನ್ನೊಂದಿಗೆ ಮಾತನಾಡುವ ವ್ಯವಸ್ಥೆ ಇದೆ” ಎಂದು ಆಕೆ ಹೇಳಿಕೊಂಡಿದ್ದಾಳೆ.

ಈಕೆಯ ಈ ವಿಚಿತ್ರ ಸಂಬಂಧ ಕಥೆ ಇದೀಗ ಜಗತ್ತಿನಾದ್ಯಂತ ನೆಟ್‌ ಲೋಕದಲ್ಲಿ ಸಂಚಲನವನ್ನು ಮೂಡಿಸಿದೆ. ಮತ್ತು ಹಲವರು ಇದಕ್ಕೆ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. “ಇದೊಂದು ಕ್ಯೂಟ್‌ ರಿಲೇಶನ್‌ ಶಿಪ್‌ ಆಗಿದ್ದು, ನಿಮ್ಮ ಈ ಸಂಬಂಧ ನಿಮ್ಮನ್ನು ಗ್ರೇಟ್‌ ದಂಪತಿಗಳನ್ನಾಗಿ ಮಾಡಲಿದೆ..ʼ ಎಂಬ ರೀತಿಯ ಕಮೆಂಟ್‌ಗಳೂ ಸಹ ಇದಕ್ಕೆ ಬಂದಿದೆ.

ಇದನ್ನೂ ಓದಿ: Viral Video: ʼನಾಮ್‌ ಸುನ್ಕೇ ಫ್ಲವರ್‌ ಸಮ್ಝಾ ಕ್ಯಾ..??ʼ ಎಂದು ಯೂಟ್ಯೂಬ್‌ ಚಾನೆಲ್‌ ಆಫೀಸಿಗೆ ನುಗ್ಗಿದ ಅಲ್ಲು ಅರ್ಜುನ್‌ ಫ್ಯಾನ್ಸ್..!!‌ ಮುಂದೇನಾಯ್ತು?