Monday, 14th October 2024

Viral Video: ಸಹೋದರಿಯ ಮದುವೆಯಲ್ಲಿ ʼಜಿಂಗಾತ್ʼ, ʼಲಂಡನ್ ತುಮಕ್ಡಾʼ ಹಾಡಿಗೆ ಡಾನ್ಸ್‌ ಮಾಡಿದ ಸಾಯಿ ಪಲ್ಲವಿ

Viral Video

ಮುಂಬೈ : ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟಿ ಸಾಯಿ ಪಲ್ಲವಿ ತಮ್ಮ ನಗುಮೊಗದಿಂದಲೇ ಅನೇಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚೆಗೆ ನಟಿ ತನ್ನ ಸಹೋದರಿ ಪೂಜಾ ಕಣ್ಣನ್ ಅವರ ಮದುವೆಯಲ್ಲಿ ಹುಚ್ಚೆದ್ದು ಕುಣಿದಿದ್ದಾರೆ. ನಟಿ ಸಾಯಿ ಪಲ್ಲವಿ ಸಹೋದರಿ ಪೂಜಾ ಸೆಪ್ಟೆಂಬರ್ 5 ರಂದು ತಮಿಳುನಾಡಿನಲ್ಲಿ ವಿನೀತ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಈ ವಿವಾಹ ಸಮಾರಂಭದಲ್ಲಿ ನಟಿ ಸಾಯಿ ಪಲ್ಲವಿ ಡ್ಯಾನ್ಸ್‌ ಮಾಡಿದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video)ಆಗಿವೆ.

ಈ ವೈರಲ್ ವಿಡಿಯೊದಲ್ಲಿ ನಟಿ ಸಾಯಿ ಪಲ್ಲವಿ ಮರಾಠಿ ಹಾಡುಗಳಾದ ‘ಜಿಂಗಾತ್’ ಮತ್ತು ‘ಅಪ್ಸರಾ ಆಲಿ’ ಹಾಡುಗಳಿಗೆ ಸಖತ್‌ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈಗಾಗಲೇ ಸಿನಿಮಾಗಳಲ್ಲಿ ಮತ್ತು ಹಲವಾರು ಸಮಾರಂಭಗಳಲ್ಲಿ ತನ್ನ ಅಸಾಧಾರಣ ಡ್ಯಾನ್ಸ್ ಸಾಮರ್ಥ್ಯವನ್ನು ಪ್ರದರ್ಶಿಸಿರುವ ಸಾಯಿ, ಪಲ್ಲವಿ ಇತ್ತೀಚೆಗೆ ತನ್ನ ಸಹೋದರಿ ಪೂಜಾ ಅವರೊಂದಿಗೆ ಮರಾಠಿ ಹಾಡಾದ ‘ಅಪ್ಸರಾ ಆಲಿ’ ಗೆ ಹೆಜ್ಜೆ ಹಾಕಿದ್ದಾರೆ.

ಮತ್ತೊಂದು ವಿಡಿಯೊದಲ್ಲಿ ಸಾಯಿ ಧಡಕ್ ಚಿತ್ರದ ಜನಪ್ರಿಯ ಹಾಡಾದ “ಜಿಂಗಾತ್” ಗೆ ಡ್ಯಾನ್ಸ್ ಮಾಡಿದ್ದಾರೆ. ಸಾಯಿ ಪಲ್ಲವಿ ತನ್ನ ಸಹೋದರಿಯರು ಮತ್ತು ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಹಾಗೇ ನಟಿ ಸಾಯಿ ಪಲ್ಲವಿ ತನ್ನ ಸಹೋದರಿಯ ಸಂಗೀತ ಸಮಾರಂಭಕ್ಕೆ ಉದ್ದನೆಯ ನೀಲಿ ಕುರ್ತಾ ಮತ್ತು ಪ್ಲಾಜೋ ಧರಿಸಿದ್ದರು, ಈ ಡ್ರೆಸ್‍ನಲ್ಲಿ ಅವರು ಬಹಳ ಸುಂದರವಾಗಿ ಕಾಣುತ್ತಿದ್ದರು.

ಕ್ವೀನ್ ಚಿತ್ರದ ಕಂಗನಾ ರನೌತ್ ಅವರ ಸೂಪರ ಹಿಟ್ ಹಾಡಾದ ‘ಲಂಡನ್ ತುಮಕ್ಡಾ’ ಗೆ ಸಾಯಿ ಪಲ್ಲವಿ ಡ್ಯಾನ್ಸ್‌ ಮಾಡಿದ್ದಾರೆ. ಈ ಹಿಂದೆ, ಸಾಯಿ ಪಲ್ಲವಿ ಸೇರಿದಂತೆ ಪೂಜಾ ಕಣ್ಣನ್ ಅವರ ಮದುವೆಯ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿತ್ತು. ಸಾಯಿ ಪಲ್ಲವಿ ತನ್ನ ಸಹೋದರಿ ಮದುವೆಗೆ ಬಿಳಿ ಸೀರೆಯಲ್ಲಿ ಮಿಂಚಿದ್ದರು. ಅದಕ್ಕೆ ಹೊಂದಿಕೆಯಾಗುವ ಬಳೆಗಳು, ಮುತ್ತಿನ ಹಾರ ಮತ್ತು ಬಿಳಿ ಹೂವುಗಳನ್ನು ಧರಿಸಿದ್ದರು.

ಇದನ್ನೂ ಓದಿ:ಮೊದಲ ರಾತ್ರಿ ಗಂಡನನ್ನು ಯಾಮಾರಿಸಲು ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರಂತೆ ಯುವತಿಯರು!

ಸದ್ಯಕ್ಕೆ ಸಾಯಿ ಪಲ್ಲವಿ ಚಂದೂ ಮೊಂಡೆಟಿ ಅವರ ತಾಂಡೇಲ್ ಚಿತ್ರದಲ್ಲಿ ನಾಗ ಚೈತನ್ಯ ಅವರೊಂದಿಗೆ ನಟಿಸಲಿದ್ದಾರೆ. ಈ ಚಿತ್ರವು ಡಿಸೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.