Saturday, 14th December 2024

Viral Video: ಚಲಿಸುತ್ತಿದ್ದ ರೈಲಿನಲ್ಲಿ ರೀಲ್ಸ್ ಮಾಡಲು ಹೋದ ಹುಡುಗಿಗೆ ಏನಾಯ್ತು ನೋಡಿ!

Viral Video

ಮುಂಬೈ : ಸೋಶಿಯಲ್ ಮೀಡಿಯಾದಲ್ಲಿ ಯುವಕ ಯುವತಿಯರು ಹೆಚ್ಚು ಜನಪ್ರಿಯರಾಗಲು ಅಪಾಯಕಾರಿ ರೀಲ್ಸ್‌ಗಳನ್ನು ಮಾಡುತ್ತಿದ್ದಾರೆ. ಇದರಿಂದ ಕೆಲವರು ಅಪಾಯಕ್ಕೆ ಒಳಗಾಗಿದ್ದರೆ, ಇನ್ನೂ ಕೆಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇಷ್ಟಾದರೂ ಯುವಜನತೆ ಇನ್ನೂ ಈ ರೀಲ್ಸ್ ಮಾಡುವ ಹುಚ್ಚನ್ನು ಬಿಡಲಿಲ್ಲ. ಚಲಿಸುತ್ತಿರುವ ಬಸ್ಸು, ರೈಲು, ಮಾತ್ರವಲ್ಲ ವಾಹನಗಳು ಸಂಚರಿಸುವಾಗ ಹೆದ್ದಾರಿಗಳ ನಡುವೆ ನಿಂತು ಡ್ಯಾನ್ಸ್ ಮಾಡುವುದು, ಎತ್ತರವಾದ ಕಟ್ಟಡಗಳಿಂದ ಜಂಪ್ ಮಾಡುವುದು ಹೀಗೆ ಹಲವಾರು ಸ್ಟಂಟ್‍ಗಳನ್ನು ಮಾಡುತ್ತಿರುತ್ತಾರೆ. ಇಂತಹ ಕೆಲಸ ಮಾಡಿದವರನ್ನು ಪೊಲೀಸರು ಅರೆಸ್ಟ್ ಮಾಡಿ ಬುದ್ಧಿ ಹೇಳಿದರೂ ಕೂಡ ಇನ್ನೂ ಜನರಲ್ಲಿ ಭಯ ಮೂಡಿಲ್ಲ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ಭಯಾನಕ ವಿಡಿಯೊ ಒಂದರಲ್ಲಿ, ರೀಲ್ಸ್ ಮಾಡಲು ಯುವತಿಯೊಬ್ಬಳು ಮಾಡಿದ ಅಪಾಯಕಾರಿ ಸ್ಟಂಟ್ ಅವಳ ಜೀವವನ್ನು ಅಪಾಯಕ್ಕೆ ಸಿಲುಕಿಸಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಯುವತಿ ಚಲಿಸುತ್ತಿರುವ ರೈಲಿನಿಂದ ಅಪಾಯಕಾರಿಯಾಗಿ ಸ್ಟಂಟ್ ಮಾಡುತ್ತಿದ್ದಾಳೆ. ತನ್ನ ಎರಡೂ ಕೈಗಳಿಂದ ರೈಲಿನ ಬಾಗಿಲಿನ ಕಂಬಿಗಳನ್ನು ಹಿಡಿದು ಹೊರಗೆ ನೇತಾಡಿದ್ದಾಳೆ. ತನ್ನ ಫಾಲೋವರ್ಸ್ ಅನ್ನು ಮೆಚ್ಚಿಸುವ ಉತ್ಸಾಹದಲ್ಲಿದ್ದ ಯುವತಿಯ ತಲೆ ಹಳಿಗಳ ಪಕ್ಕದಲ್ಲಿರುವ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆದರೆ ಆಕೆ ರೈಲಿನ ಕಂಬಗಳನ್ನು ಗಟ್ಟಿಯಾಗಿ ಹಿಡಿದುಕೊಂಡ ಕಾರಣ ಆಕೆ ರೈಲಿನಿಂದ ಕೆಳಗೆ ಬೀಳಲಿಲ್ಲ. ಇದರಿಂದ ಅಲ್ಲಿ ಸಂಭವಿಸಬಹುದಾದ ದೊಡ್ಡ ಅಪಘಾತ ತಪ್ಪಿದೆ.

ಆದರೆ ಈ ಆಘಾತಕಾರಿ ಘಟನೆಯ ನಂತರ ಆಕೆಯ ಸ್ಥಿತಿ ಹೇಗಿದೆ ಎಂಬುದು ತಿಳಿದುಬಂದಿಲ್ಲ. ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ರೀಲ್ಸ್ ಮಾಡುವಾಗ ಆಗುವ ಅಪಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತದೆ.

ಇದನ್ನೂ ಓದಿ: ಪಂಚಾಯತ್‌ ಅಧ್ಯಕ್ಷನ ಭ್ರಷ್ಟಾಚಾರ ದಾಖಲೆಗಳನ್ನು ಕೊರಳಿಗೆ ಹಾಕಿಕೊಂಡು ರಸ್ತೆಯಲ್ಲಿ ಉರುಳು ಸೇವೆ!

ಯುವಜನರು ರೀಲ್ಸ್ ಮಾಡುವ ಹುಚ್ಚಿನಲ್ಲಿ , ಅಲ್ಲಿ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಹೆಚ್ಚಾಗಿ ಕಡೆಗಣಿಸುತ್ತಾರೆ, ಇದು ಸಾವು-ನೋವುಗಳಿಗೆ ಕಾರಣವಾಗಬಹುದು. ಈ ಘಟನೆಯು ಸೋಶಿಯಲ್ ಮೀಡಿಯಾ ವೀಕ್ಷಕರಿಗೆ ಉತ್ಸಾಹಕ್ಕಿಂತ ತಮ್ಮ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಮಹತ್ವವನ್ನು ಒತ್ತಿಹೇಳುತ್ತದೆ.