Friday, 13th December 2024

ನಾನಾಜಿ ದೇಶ‌ಮುಖ್‌ ಜನ್ಮ ದಿನಾಚರಣೆ: ಸ್ಮರಿಸಿದ ಎಂ.ವೆಂಕಯ್ಯ ನಾಯ್ಡು

ನವದೆಹಲಿ: ಸಾಮಾಜಿಕ ಹೋರಾಟಗಾರ ನಾನಾಜಿ ದೇಶ‌ಮುಖ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಗೌರವ ಸಲ್ಲಿಸಿದ್ದಾರೆ. ನಾನಾಜಿ ದೇಶ‌ಮುಖ್‌ ಅವರು 1916ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದರು.

ನಾನಾಜಿ ಅವರು ತಮ್ಮ ಜೀವನವನ್ನು ದೇಶದ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಶೋಷಿತರ ಬಗ್ಗೆ ಅವರಿಗಿದ್ದ ಸಹಾನುಭೂತಿ ಮತ್ತು ಗ್ರಾಮೀಣಾಭಿವೃದ್ಧಿಯ ಬಗೆಗಿನ ಉತ್ಸಾಹ ಜನರಲ್ಲಿ ಸದಾ ಪ್ರೇರಣೆಯಾಗಿ ಉಳಿದಿರುತ್ತದೆ ಎಂದು ನಾಯ್ಡು ಅವರು ವರ್ಣಿಸಿದ್ದಾರೆ’ ಎಂದು ಉಪರಾಷ್ಟ್ರಪತಿ ಸಚಿವಾಲಯ ಟ್ವೀಟ್‌ ಮಾಡಿದೆ.