‘ಡ್ರಗ್ಸ್ ಪ್ರಕರಣವನ್ನ ಸರ್ಕಾರ ತುಂಬಾನೇ ಗಂಭೀರವಾಗಿ ತೆಗೆದುಕೊಂಡಿದೆ.
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್‌ವೈ ಪ್ರತಿಕ್ರಿಯೆ ನೀಡಿದ್ದು, ಸಿಸಿಬಿ ತನಿಖೆ ಯಾಗ್ತಿದೆ. ಕೆಲವರ ಬಣ್ಣ ಬಯಲಾಗಿದೆ ಸಧ್ಯದಲ್ಲೇ ಎಲ್ಲರ ಬಣ್ಣ ಬಯಲಾಗುತ್ತೆ ಎಂದಿದ್ದಾರೆ.
‘ಡ್ರಗ್ಸ್ ಪ್ರಕರಣವನ್ನ ಸರ್ಕಾರ ತುಂಬಾನೇ ಗಂಭೀರವಾಗಿ ತೆಗೆದುಕೊಂಡಿದೆ. ಹಿಂದಿನ ಸರ್ಕಾರದಂತೆ ನಾವು ನಿರ್ಲಕ್ಷ್ಯ ಮಾಡುವು ದಿಲ್ಲ. ಎಂತಹ ಒತ್ತಡಕ್ಕೂ ನಮ್ಮ ಸರ್ಕಾರ ಮಣಿಯುವುದಿಲ್ಲ. ನ್ಯಾಯಯುತವಾಗಿ ತನಿಖೆ ನಡೆಸುತ್ತೇವೆ. ಸಿಸಿಬಿ ತನಿಖೆಯಿಂದ ಕೆಲವರ ಬಣ್ಣ ಬಯಲಾಗಿದೆ. ಸಧ್ಯದಲ್ಲಿಯೇ ಎಲ್ಲರ ಬಣ್ಣ ಬಯಲಾಗುತ್ತೆ. ಡ್ರಗ್ ಪ್ರಕರಣದ ತನಿಖೆ ಮುಂದುವರಿದಿದೆ.
ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆೆ ಸಮಗ್ರವಾಗಿ ತನಿಖೆ ಮಾಡಿಸುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.