Tuesday, 27th July 2021

ಧರ್ಮಸ್ಥಳ ಯೋಜನೆದಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ವಿತರಣೆ ಕಾರ್ಯ ಶ್ಲಾಘನೀಯ : ಕಡಾಡಿ 

ಮೂಡಲಗಿ :  ಕಳೆದ 10 ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜನಪರ ಕಾರ್ಯಕ್ರಮಗಳ ಹಮ್ಮಿ ಕೊಳ್ಳುತ್ತಾ  ಬಡ ಜನರ ಕಷ್ಟಗಳಿಗೆ ದಾರಿದ್ವೀಪವಾಗಿದೆ. ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಐದು ಆಕ್ಸಿಜನ್‌ಕಾನ್ಸಂಟ್ರೇಟರ್ ನೀಡಿದ್ದು ಧರ್ಮಸ್ಥಳ ಗ್ರಾಮಾಭಿವೃದಿಯೋಜನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು
ಪಟ್ಟಣದ ಆರೋಗ್ಯಕ್ಕೆ ಕೇಂದ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನೀಡಿದ 05 ಆಕ್ಸಿಜನ್ ಕಾನ್ಸಂಟ್ರೇ ಟರ್ ಕೇಂದ್ರಕ್ಕೆ ಹಸ್ತಾಂತರಿಸಿ ಮಾತನಾಡಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೋರೋನಾ ವೈರಸ್ ಸೋಂಕಿತರಿಗೆ  ಜನರ ಜೀವಾಳವಾಗಿ ಧರ್ಮಸ್ಥಳದ ಪೂಜ್ಯರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದಲ್ಲಿ ಆಸ್ಪತ್ರೆಗಳಿಗೆ ಅಗತ್ಯವಿರುವ ಉಪಕರಣಗಳನ್ನು ವಿತರಿಸುತ್ತಿರುವ ಕಾರ್ಯ ಜನಮನನೆ ಪಡೆದಿದ್ದಾರೆ ಎಂದರು.
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಳಗಾವಿ-2 ಜಿಲ್ಲೆಯ ನಿರ್ದೇಶಕ ಕೇಶವ ದೇವಾಂಗ್ ಕ್ಷೇತ್ರದವತಿಯಿಂದ ಆಸ್ಪತ್ರೆಗೆ ಕೊಡುತ್ತಿರುವ ವೇಂಟಿಲೇಟ್‌ರ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಇತರೆ ವೈದ್ಯಕೀಯ ಉಪಕರಣಗಳು, ನಿರ್ಗತಿಕರಿಗೆ ವಿತರಿಸುತ್ತಿರುವ ಆಹಾರದ ಕೀಟ್‌ಗಳು, ಕೋವಿಡ್ ಪರಿಸ್ಥಿತಿಯನ್ನು ಎದುರಿಸುವಲ್ಲಿ ಧರ್ಮಸ್ಥಳದಿಂದ ಪ್ರಸ್ತುತ ಹಮ್ಮಿಕೊಂಡಿ ರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ಡಾ.ಮೋಹನಕುಮಾರ ಭಸ್ಮೆ, ಪಿ.ಎಸ್.ಐ ಎಚ್.ವಾಯ್.ಬಾಲದಂಡಿ, ಜಿಲ್ಲಾ ಜನ ಜಾಗ್ರತಿ ವೇದಿಕೆಯ ಸದಸ್ಯ ಭರಮಣ್ಣಾ ಉಪ್ಪಾರ, ಸಮುದಾಯ ಕೇಂದ್ರದ  ವೈಧ್ಯಾಧಿಕಾರಿ ಭಾರತಿ ಕೋಣಿ, ಯೋಜನೆಯ ಪ್ರಬಂಧಕ ಪರಶುರಾಮ ಹಾಗೂ ಶಿವಾನಂದ ಬೈಲವಾಡ, ಮೇಲ್ವಿಚಾರಕಿ ಮಾನಸಿ ಪಾಟೀಲ ಮತ್ತಿತರು ಇದ್ದರು.
ಯೋಜನೆಯ ತಾಲೂಕಾ ಯೋಜನಾಧಿಕಾರಿ ದೇವರಾಜ ಎಂ ನಿರೂಪಿಸಿ ಸ್ವಾಗತಿಸಿದರು, ಜ್ಞಾನವಿಕಾಸ ಸಮನ್ವಯಾಧಿಕಾರಿ ರುಕ್ಮಿಣಿ ವಂದಿಸಿದರು.

Leave a Reply

Your email address will not be published. Required fields are marked *