Friday, 12th August 2022

ಲೈಂಗಿಕ ದೌರ್ಜನ್ಯ ಪ್ರಕರಣ: ಪಿ.ಸಿ.ಜಾರ್ಜ್ ಬಂಧನ

ತಿರುವನಂತರಪುರ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್ ಅವರನ್ನು ತಿರುವನಂತ ಪುರದಲ್ಲಿ ಬಂಧಿಸಲಾಗಿದೆ.

‘ಕೇರಳ ಸೋಲಾರ್ ಪ್ಯಾನಲ್ ಹಗರಣ’ದ ಆರೋಪಿಗಳಲ್ಲಿ ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಆಧಾರದಲ್ಲಿ ಜಾರ್ಜ್‌ ಅವರನ್ನು ಬಂಧಿಸಲಾಗಿದೆ.

ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ಆರೋಪದ ಮೂಲಕ ಕೇರಳ ಮುಖ್ಯಮಂತ್ರಿ ಮತ್ತು ಸರ್ಕಾರದ ಮಾನಹಾನಿಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಅಪರಾಧ ವಿಭಾಗದ ಪೊಲೀಸರು ಜಾರ್ಜ್ ಅವರನ್ನು ತಿರುವನಂತ ಪುರದ ಗೆಸ್ಟ್ ಹೌಸ್‌ನಲ್ಲಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಪೊಲೀಸರು ಜಾರ್ಜ್‌ ಅವರನ್ನು ಬಂಧಿಸಿದ್ದಾರೆ.