Sunday, 25th September 2022

ಪಾಕಿಸ್ತಾನ ‘ಡೀಪ್‌ಸ್ಟೇಟ್’; ಭಾರತ ಹಾಗಿದೆಯೇ?

ಸ್ವಾರಸ್ಯ

ಕಬ್ಬನ್‌ಪೇಟೆ ದಕ್ಷಿಣಾಮೂರ್ತಿ, ಬೆಂಗಳೂರು
ಕಳೆದ 30 ವರ್ಷಗಳಿಂದ ಪಾಕಿಸ್ತಾಾನವನ್ನು ಹತ್ತಿಿರದಿಂದ ಹೋಡಿರುವ ಖ್ಯಾಾತ ಹಿರಿಯ ಪತ್ರಕರ್ತೆ ತವ್ಲೀನ್ ಸಿಂಗ್ ಅವರ ಒಂದು ಲೇಖನ ಭಾರತ ಮತ್ತು ಪಾಕಿಸ್ತಾಾನ ನಡುವಿನ ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಕಟವಾದ ಲೇಖನ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಇವರ ಪ್ರಕಾರ ಇತ್ತೀಚೆಗೆ ಅಂತಾರಾಷ್ಟ್ರೀಯ ನ್ಯಾಾಯಾಲಯವು ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ತೀರ್ಪು ನೀಡಿದ ದಿನವಿಡೀ ಟಿವಿ ಚರ್ಚೆಗಳನ್ನು ನೋಡುವುದರಲ್ಲಿ ಈ ಪತ್ರಕರ್ತೆ ತಲ್ಲೀನಳಾಗಿದ್ದಾಾಗ ‘ಆಜ್‌ತಕ್’ ಚಾನೆಲ್‌ನ್ನೂ ವೀಕ್ಷಿಸಿದರು. ನ್ಯೂಸ್ ಆ್ಯಂಕರ್ ರೋಹಿತ್ ಸರ್ದಾನಾ ಪಾಕಿಸ್ತಾಾನದ ಪತ್ರಕರ್ತೆಯೊಬ್ಬರಿಗೆ ಮುಂಬೈ ದಾಳಿಯ ಬಗ್ಗೆೆ ಪ್ರಶ್ನೆೆ ಕೇಳಿದರು. ಆ ಪತ್ರಕರ್ತೆ ‘ಈ ಕುಕೃತ್ಯಕ್ಕೆೆ ಅಜ್ಮಲ್ ಕಸಬ್ ಕಾರಣವಾಗಿರಲಿ ಅಥವಾ ಡೀಪ್‌ಸ್ಟೇಟ್ ಕಾರಣವಾಗಿರಲಿ, ಯಾರೇ ಕಾರಣವಾಗಿದ್ದರೂ ನಿಜಕ್ಕೂ ಖಂಡಿಸಲೇಬೇಕಾದ ಕೃತ್ಯವಿದು’ ಎಂದು ಹೇಳಿದರು.

ಈ ಡೀಪ್‌ಸ್ಟೇಟ್ ಎಂದರೇನು? ‘ದೇಶವೊಂದರಲ್ಲಿ ಮೇಲ್ನೋೋಟಕ್ಕೆೆ ಸರಕಾರವೊಂದು ಇದ್ದರೂ, ನೀತಿ ನಿರೂಪಣೆ, ಭದ್ರತೆಯ ಮೇಲಿನ ಹಿಡಿತವೆಲ್ಲ ಬೇರೆ ಯಾರದ್ದೋೋ ಕೈಯಲ್ಲಿರುತ್ತದೆ’ ಎಂದರ್ಥ. ಸರಳವಾಗಿ ಹೇಳಬೇಕೆಂದರೆ ಸರಕಾರದ ಸೂತ್ರದಾರರು ಎನ್ನಬಹುದು. ಪಾಕಿಸ್ತಾಾನದ ವಿಷಯದಲ್ಲಿ ಅಲ್ಲಿನ ಸೇನೆಯನ್ನು ಡೀಪ್‌ಸ್ಟೇಟ್ ಎನ್ನಲಾಗುತ್ತದೆ! ಪಾಕಿಸ್ತಾಾನದಲ್ಲಿ ಸಾರ್ವಜನಿಕರಲ್ಲಿ ಈ ಪದಗುಚ್ಛ ಆಗಾಗ ಉಚ್ಚರಿಸಲ್ಪಡುತ್ತಿಿರುತ್ತದೆ.

ಭಾರತದಲ್ಲಿ ಡೀಪ್‌ಸ್ಟೇಟ್ ಎನ್ನುವಂಥ ಸಂಗತಿಯೇ ಇಲ್ಲ ಎನ್ನುವುದನ್ನು ಅನೇಕರು ಸುಲಭವಾಗಿ ನಂಬುವುದಿಲ್ಲ. ಮಜಾ ವಿಷಯ ಏನೆಂದರೆ ಪಾಕಿಸ್ತಾಾನದಲ್ಲಿನ ಡೀಪ್‌ಸ್ಟೇಟ್ ಅಂದರೆ ಏನು ಎನ್ನುವುದು ಭಾರತದಲ್ಲಿನ ಕೆಲವು ಪರಿಣತರನ್ನು ಬಿಟ್ಟರೆ ನಮ್ಮಲ್ಲಿ ಅನೇಕರಿಗೆ ಗೊತೇ ಇಲ್ಲ. ಏಕೆಂದರೆ ಇಮ್ರಾಾನ್‌ಖಾನ್ ಒಂದು ಮುಖವಾಡವಷ್ಟೆೆ. ಇಮ್ರಾಾನ್‌ಖಾನ್ ಎಷ್ಟು ದುರ್ಬಲ ಪ್ರಧಾನಮಂತ್ರಿಿ ಎಂದರೆ ಅವರನ್ನು ಎಲೆಕ್ಟೆೆಡ್ ಅಲ್ಲ ಸೆಲೆಕ್ಟೆೆಡ್ ಪ್ರಧಾನಮಂತ್ರಿಿ ಎಂದು ಕರೆಯಲಾಗುತ್ತದೆ.

ತವ್ಲೀನ್ ಸಿಂಗ್, 1988ರಲ್ಲಿ ಎನ್‌ಡಿಟಿವಿಗಾಗಿ ಬೆನಜೀರ್ ಭುಟ್ಟೋೋರ ಚುನಾವಣಾ ರ್ಯಾಾಲಿಯನ್ನು ಕವರ್ ಮಾಡಲು ಪಾಕಿಸ್ತಾಾನಕ್ಕೆೆ ಹೋಗಿದ್ದಾಾಗ ‘ಡೀಪ್‌ಸ್ಟೇಟ್’ ಎಂದರೇನು? ಅದರ ತಾಕತ್ತು ಎಂಥದ್ದು? ಎನ್ನುವುದು ಆಕೆಗೂ ತಿಳಿದಿರಲಿಲ್ಲ. ಬೆನಜೀರ್ ಭುಟ್ಟೋೋಗೆ ವಿಪರೀತ ಜನಪ್ರಿಿಯತೆ ಸಿಕ್ಕಿಿತ್ತು.

ಜನ ಬೆಂಬಲ ಎಲ್ಲಾಾ ಆಕೆಯ ಪರವಾಗಿಯೇ ಇತ್ತು. ಆದರೆ, ಇಷ್ಟೇಲ್ಲ ಇದ್ದರೂ ಚುನಾವಣೆಯಲ್ಲಿ ಆಕೆಗೆ ಪೂರ್ಣ ಬಹುಮತ ಸಿಗಲಿಲ್ಲ. ತುಂಬಾ ತಲೆಕೆಡಿಸಿಕೊಂಡ ಮೇಲೆ ಆ ಹಿರಿಯ ಪತ್ರಕರ್ತೆಗೆ ಅರ್ಥವಾಗಿದ್ದು ಪಾಕಿಸ್ತಾಾನದ ನಿಜವಾದ ಚುಕ್ಕಾಾಣಿ ಇರುವುದು ಬೇರೆಯದ್ದೇ ಶಕ್ತಿಿಗಳ ಕೈಯಲ್ಲಿ ಎನ್ನುವುದು. ಪಾಕಿಸ್ತಾಾನವನ್ನು ಮುನ್ನಡೆಸುವುದೂ ಇವರೇ, ಆ ದೇಶದ ವಿದೇಶಾಂಗ ಮತ್ತು ಸುರಕ್ಷಾ ನೀತಿಗಳ ಮೇಲೆ ಹಿಡಿತವಿರುವುದು ಈ ಶಕ್ತಿಿಗಳ ಕೈಯಲ್ಲೇ.

ಇವರಿಂದಾಗಿಯೇ ಲಷ್ಕರ್-ಎ-ತೋಯ್ಬಾಾ ಅಂಥ ಜಿಹಾದಿ ಸಂಘಟನೆಗಳು ಮತ್ತು ಹಫೀಜ್ ಸಯೀದ್‌ನಂಥ ಆತಂಕವಾದಿಗಳ ಸೃಷ್ಟಿಿಯಾಗಿದೆ. ಪಾಕಿಸ್ತಾಾನದ ಡೀಪ್‌ಸ್ಟೇಟ್‌ನ ಅನುಮತಿಯಿಲ್ಲದೇ ಅಜ್ಮಲ್ ಕಸಬ್ ಮತ್ತು ಅವನ ತಂಡಕ್ಕೆೆ ಮುಂಬೈನಲ್ಲಿ ಕಾಲಿಡಲೂ ಸಾಧ್ಯವಿರಲಿಲ್ಲ. ‘26/11 ದಾಳಿಗೆ ಪಾಕಿಸ್ತಾಾನದ ಡೀಪ್‌ಸ್ಟೇಟ್’ ಕಾರಣವೆಂದು ಅಮೆರಿಕದ ಜೈಲಿನಿಂದ ಡೇವಿಡ್ ಹೆಡ್ಲಿಿ ಕೊಟ್ಟಿಿರುವ ಹೇಳಿಕೆಯೇ ಸಾಕು, ಆರೋಪ ರುಜುವಾತಾಗುವುದಕ್ಕೆೆ.

ಏಕೆಂದರೆ ನಮ್ಮ ದೇಶದ ಮೋದಿ ಅಸಲಿ ಪ್ರಧಾನಮಂತ್ರಿಿ ಇವರೇ ಲೀಡರ್‌ಯಾಗಿದ್ದಾಾರೆ. ಆದರೆ, ಇಮ್ರಾಾನ್ ಪಾಕಿಸ್ತಾಾನದ ‘ಡೀಪ್‌ಸ್ಟೇಟ್’ನ ಕೈಗೊಂಬೆಯಷ್ಟೆೆ.

ಪಾಕಿಸ್ತಾಾನದವರು ‘ಆರ್‌ಎಸ್‌ಎಸ್ ಸಂಘಟನೆ ಭಾರತದ ಡೀಪ್‌ಸ್ಟೇಟ್ ಆಗಿ ಬದಲಾಗಿದೆ’ ಎಂದೇ ಭಾವಿಸುತ್ತಾಾರೆ. ಸತ್ಯವಿಷಯವೇನೆಂದರೆ, ಪ್ರಧಾನಮಂತ್ರಿಿ ಮೋದಿ ಈ ಬಾರಿ ಮತ್ತು ಹಿಂದಿನ ಬಾರಿ ಗೆದ್ದದ್ದು ತಮ್ಮ ಸ್ವಂತ ಬಲದ ಮೇಲೆಯೇ. ಮೋದಿ ಇರಲಿಲ್ಲ ಎಂದರೆ ನಿಸ್ಸಂಶಯವಾಗಿಯೂ ಬಿಜೆಪಿಗೆ 300ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಿ ಕೊಡಲು ಸಂಘಕ್ಕೆೆ ಸಾಧ್ಯವಾಗುತ್ತಿಿರಲಿಲ್ಲ.

ಆದಾಗ್ಯೂ ಸಂಘದ ಕೆಲವು ಹಿರಿಯ ನಾಯಕರು ಆಡಳಿತದಲ್ಲಿ (ವಿದೇಶಾಂಗ ಅಥವಾ ಸುರಕ್ಷಾ ನೀತಿಯಂತಹ ಕ್ಷೇತ್ರಗಳನ್ನು ಬಿಟ್ಟು) ಸ್ವಲ್ಪಮಟ್ಟಿಿಗಿನ ಹಸ್ತಕ್ಷೇಪ ಮಾಡುತ್ತಾಾರೆ ಎನ್ನುವುದೇನೋ ನಿಜ.

ಆದುದರಿಂದಲೇ ಪ್ರಧಾನಮಂತ್ರಿಿಯವರ ಯಾವುದೇ ಉಪಕ್ರಮವನ್ನೂ ಊಹಿಸಲೂ ಯಾವುದೇ ಪತ್ರಕರ್ತರಿಗೆ ಸಾಧ್ಯವಿಲ್ಲ. ಊಹಾಪೋಹಗಳ ಸಿಕ್ಕ ಸಣ್ಣ ಸುದ್ದಿಯನ್ನೇ ವಿಸ್ತಾಾರ ಮಾಡುತ್ತ ಹೋಗುತ್ತಾಾರೆ. ಒಟ್ಟಾಾರೆ ಮೋದಿಗೆ ಸರಿ ಸಮಾನರು ಇಲ್ಲ ಎನ್ನುವುದನ್ನು ಅಲ್ಲಗಳೆಯಲಾಗದು ಎಂದು ನನ್ನ ಅನಿಸಿಕೆ. ಅಷ್ಟೇ ಏಕೆ ಕೋಟಿ ಮಂದಿಯ ಒಕ್ಕೊೊರಲಿನ ಮೆಚ್ಚುಗೆ ಮಾತು.