Monday, 6th February 2023

‘ದಿ ವ್ಯಾಕ್ಸಿನ್ ವಾರ್’ ಸಿನೆಮಾ ಶೂಟಿಂಗ್ ವೇಳೆ ಪಲ್ಲವಿ ಜೋಶಿಗೆ ಗಾಯ

ಹೈದರಾಬಾದ್: ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಈಗ ತಮ್ಮ ಮುಂದಿನ ಸಿನಿಮಾ ‘ದಿ ವ್ಯಾಕ್ಸಿನ್ ವಾರ್ ‘ ನಲ್ಲಿ ನಿರತರಾಗಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪಲ್ಲವಿ ಜೋಶಿ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಹೈದರಾಬಾದ್‌ನಲ್ಲಿ ‘ದಿ ವ್ಯಾಕ್ಸಿನ್ ವಾರ್’ ಶೂಟಿಂಗ್‌ ನಡೆಯುತ್ತಿದ್ದು, ಈ ವೇಳೆ ಪಲ್ಲವಿ ಜೋಶಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಾಹನ ನಿಯಂತ್ರಣ ತಪ್ಪಿ ಪಲ್ಲವಿ ಜೋಶಿ ಡಿಕ್ಕಿ ಹೊಡೆದ ಪರಿಣಾಮ ಅವರಿಗೆ ಗಾಯವಾಗಿದೆ. ಗಾಯದ ಹೊರತಾಗಿಯೂ, ಅವರು ತನ್ನ ಶಾಟ್ ಅನ್ನು ಪೂರ್ಣಗೊಳಿಸಿ ನಂತರ, ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ.

error: Content is protected !!