Monday, 16th May 2022

ಧಾರಾಕಾರ ಮಳೆಗೆ ಐಸಿಹಾಸಿಕ ಪಂಚಗವಿಮಠದ ಗೋಡೆ ಕುಸಿತ

ಮೈಸೂರು: ಭಾನುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಸಾಂಸ್ಕೃತಿಕ ನಗರಿಯ ಐಸಿಹಾಸಿಕ ಪ್ರಸಿದ್ಧ ಪಂಚಗವಿಮಠದ ಗೋಡೆ ಕುಸಿತಗೊಂಡಿದೆ.

ಸುಮಾರು 200 ವರ್ಷಗಳಷ್ಟು ಇತಿಹಾಸ ಹೊಂದಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಮಠಗಳಲ್ಲಿ ಪಂಚಗವಿಮಠವು ಒಂದಾಗಿದೆ. ಈ ಮಠದ ಗೋಡೆ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಕುಸಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ, ಈ ಮಠದಲ್ಲಿ ಸುಮಾರು 20 ವಿದ್ಯಾರ್ಥಿ ಗಳು ವಾಸವಿದ್ದಾರೆ. ಸರಿಯಾದ ನಿರ್ವಹಣೆ ಯಿಲ್ಲದೇ ಪಂಚಗವಿಮಠ ಶಿಥಿಲಾವಸ್ಥೆ ತಲುಪಿದೆ. ಮಳೆಯಿಂದ ಗೋಡೆ ಕುಸಿತಗೊಳ್ಳಲು ಸರಿಯಾದ ನಿರ್ವಹಣೆ ಮಾಡದ್ದೇ ಕಾರಣ ಎಂಬುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.