Tuesday, 17th May 2022

ಪರಿಷತ್ ಚುನಾವಣೆ: ಮತ ಚಲಾಯಿಸಿದ ಗಣ್ಯರು

Sirsi_Parishad election

ಶಿರಸಿ: ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ಭರದಿಂದ ಸಾಗಿದ್ದು, ಪ್ರಮುಖ ನಾಯಕರು ತಮ್ಮ ಮತ ಚಲಾ ಯಿಸಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಹಾಗೂ ವಿಧಾನ ಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ ಚಲಾಯಿಸಿದ್ದು, ಕೆನರಾ ಲೋಕಸಭಾ ಸಂಸದ ಅನಂತಕುಮಾರ್ ಹೆಗಡೆ ಮೊದಲು ಬಂದು ಮತದಾನ ಮಾಡಿದ್ರೆ ಅನಂತರ ಸಭಾಧ್ಯಕ್ಷರು ಮತ ಚಲಾಯಿಸಿದರು.

ಸಂಸದರು ಬಂದಾಗ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮತಗಟ್ಟೆ ಬಳಿಯೇ ಇದ್ದು ಭೀಮಣ್ಣ ನಾಯ್ಕ ಸಂಸದರ ಜೊತೆ ಕೈ ಕುಲುಕಿದ್ದು ವಿಶೇಷವಾಗಿ ಕಂಡುಬಂತು. ಮತ ಚಲಾಯಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡೋಕೆ ಸಂಸದರು ನಿರಾಕರಿಸಿ ದರು. ಬಿಜೆಪಿ ಚುನಾವಣೆಯಲ್ಲಿ ಗೆಲ್ಲುತ್ತೆ. ಬಿಜೆಪಿಗೆ ಗೆಲುವು ಕಷ್ಟ ಅನ್ನೋ ಪ್ರಶ್ನೆಗೆ ಹೌದಾ? ಅದ್ರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಂಸದ ಅನಂತ‌ಕುಮಾರ್ ಹೆಗಡೆ ಉತ್ತರಿಸಿ ದರು.

ನಂತರ ಬಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ ಚಲಾಯಿಸಿ, ಮಾಧ್ಯಮ ಗಳ ಜೊತೆ ಮಾತನಾಡಿ, ಮತದಾನ ನಡೆದಿದೆ, ನನ್ನ ಮತ ಚಲಾಯಿಸಿದ್ದೇನೆ. ವಿಧಾನ ಪರಿಷತ್ ಚುನಾವಣೆ ಹೇಗೆ ನಡೆದಿದೆ ಅನ್ನೋದನ್ನ ಎಲ್ಲಾ ನೋಡ್ತಾ ಇದ್ದಾರೆ. ಘನತೆಯನ್ನ ಹೊಂದಿರೋ ವಿಧಾನ ಪರಿಷತ್ ಗೆ ಆಯ್ಕೆಯಾಗಿರೋರು ಉತ್ತಮ ಕೆಲಸ ಮಾಡ್ಲಿ ಅಂತ ಹಾರೈಸುತ್ತೇನೆ. ಈ ಚುನಾವಣೆ ಹೇಗೆ ನಡೆದಿದೆ ಅನ್ನೋದನ್ನ ನಾವು ಆತ್ಮಾವಲೋಕನ ಮಾಡಿಕೊಳ್ಬೇಕು.  ಪ್ರಜಾಪ್ರಭುತ್ವ ವ್ಯವಸ್ಥೆಗೆ ಇನ್ನಷ್ಟು ಶಕ್ತಿ ಕೊಡಬೇಕಿದ್ರೆ ಇದರ ಸಿಂಹವಲೋಕನ ಅಗತ್ಯ ಅಂತ ಚುನಾವಣೆಯಲ್ಲಿ ಹಣದ ಹರಿವಿನ ಬಗ್ಗೆ ಮನಬಿಚ್ಚಿ ಮಾತಾಡಿದರು.

ಯಲ್ಲಾಪುರ ಪಟ್ಟಣ ಪಂಚಾಯಿತದಲ್ಲಿ ಸಚಿವ ಶಿವರಾಮ ಹೆಬ್ಬಾರ್ ತಮ್ಮ‌ಬೆಂಬಲಿಗರೊಂಸಿಗೆ ಮತ ಹಾಕಿದರು.ನಂತರ ಮಾತನಾಡಿದ ಅವರು, ನಾವು ಗೆದ್ದೇ ಗೆಲ್ಲುತ್ತೇವೆ. ನಮ್ಮ ಪಕ್ಷ ಇ ಬಾರಿ ವಿಧಸನ ಪರಿಷತ್ ನಲ್ಲಿ ಬಹುಮತ ಪಡೆಯಲಿದ್ದು, ಮೊದಲ ಬಾರಿಗೆ ನಮ್ಮ ಜಿಲ್ಲೆಯಲ್ಲಿ ಬಿಜೆಪಿ ಮೊದಲ ಪ್ರಾಶಸ್ತ್ಯ ಮತದಲ್ಲೇ ವಿಜಯ ಸಾಧಿಸಲಿದೆ ಎಂದರು.