Sunday, 27th November 2022

ಕ್ರಿಕೆಟ್‌ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ ಪಾರ್ಥಿವ್ ಪಟೇಲ್

ನವದೆಹಲಿ: ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪಾರ್ಥಿವ್ ಪಟೇಲ್ ಎಲ್ಲ ರೀತಿಯ ಆಟದಿಂದ ನಿವೃತ್ತಿ ಘೋಷಿಸುವ ಮೂಲಕ 18 ವರ್ಷಗಳ ಸುದೀರ್ಘ ಅವಧಿಯ ವೃತ್ತಿ ಜೀವನ ಅಂತ್ಯ ಕಂಡಿದೆ.

35 ವರ್ಷದ ಪಾರ್ಥಿವ್ 25 ಟೆಸ್ಟ್, 38 ಏಕದಿನ ಹಾಗೂ ಎರಡು ಟಿ20 ಪಂದ್ಯಗಳಲ್ಲಿ ಭಾರತ ಪರ ವಾಗಿ ಕಾಣಿಸಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್ ನಲ್ಲಿ ಗುಜರಾತ್ ಪರ 194 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿ, ಹನ್ನೊಂದು ಸಾವಿರ ರನ್‌ ಬಾರಿಸಿದ್ದಾರೆ. ಅದರಲ್ಲಿ 27 ಶತಕಗಳು ಹಾಗೂ 67 ಅರ್ಧಶತಕಗಳು ಸೇರಿವೆ.

2002ರಲ್ಲಿ ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಪಂದ್ಯದಲ್ಲಿ  ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ಅತಿ ಕಿರಿಯ ವಿಕೆಟ್ ಕೀಪರ್(17) ಎಂಬ ಗೌರವಕ್ಕೆ ಪಾತ್ರರಾಗಿ ದ್ದರು. ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಆರಂಭ ಪಡೆದರೂ, 2004ರಲ್ಲಿ ದಿನೇಶ್ ಕಾರ್ತಿಕ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಆಗಮನದಿಂದ ಪಟೇಲ್ ತಮ್ಮ ಸ್ಥಾನ ಕಳೆದುಕೊಂಡರು.

2004ರ ನವೆಂಬರ್ ನಲ್ಲಿ ಅಹಮದಾಬಾದ್ ನಲ್ಲಿ ನಡೆದ ಮೊದಲ ರಣಜಿ ಟ್ರೋಫಿ ಪಂದ್ಯದಲ್ಲಿ ಅವರು ಟೆಸ್ಟ್ ಕ್ರಿಕೆಟ್ ಗೆ ಪಾದಾ ರ್ಪಣೆ ಮಾಡಿದ್ದರು. ಜೋಹಾನ್ಸ್’ಬರ್ಗ್‌’ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್‌ ಪಂದ್ಯದಲ್ಲಿ ಕೊನೆಯ ಬಾರಿ ಭಾರತೀಯ ತಂಡದ ದಿರಿಸು ಧರಿಸಿದ್ದರು.

2016-17ರಲ್ಲಿ ಗುಜರಾತ್‌ ತಂಡಕ್ಕೆ ರಣಜಿ ಕಪ್‌ ಗೆಲ್ಲಿಸಿದ್ದರು. ಹಾಗೂ ಕೆಲ ಕಾಲ ನಾಯಕರಾಗಿದ್ದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪಾರ್ಥಿವ್‌, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡಿದ್ದಾರೆ. ಒಟ್ಟಿನಲ್ಲಿ,  204 ಟಿ20 ಪಂದ್ಯಗಳನ್ನು ರಾಜ್ಯ ಪರ ಹಾಗೂ ಐಪಿಎಲ್‌ ನಲ್ಲಿ ಆಡಿದ್ದು, 4300 ರನ್‌ ಗಳಿಸಿದ್ದಾರೆ. ಅದರಲ್ಲಿ 23 ಅರ್ಧಶತಕಗಳಿವೆ.