Sunday, 25th September 2022

ಭಾರತೀಯರ ಮನಗಳಲ್ಲಿ ದೇಶಪ್ರೇಮ ಮನೆ ಮಾಡಿದೆ: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ೭೫ನೇ ಸ್ವಾತಂತ್ರö್ಯ ಅಮೃತ ಮಹೋತ್ಸವ ರಾಷ್ಟçದ ಸ್ವಾಭಿಮಾನದ ಸಂಕೇತವಾದ ರಾಷ್ಟçಧ್ವಜ ದೇಶದ ಪ್ರತಿ ಮನೆ ಮನೆಗಳ ಮೇಲೆ ಅಷ್ಠೇ ಅಲ್ಲ ಭಾರತೀಯರ ಮನಗಳಲ್ಲಿ ದೇಶಾಭಿಮಾನ ಕಿಚ್ಚುಬೆಳೆದಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಾಡಳಿತ ಎರ್ಪಡಿಸಿದ ೭೫ನೇ ಅಮೃತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು ಭಾರತ ಅನೇಕ ಧರ್ಮ ,ಸಂಸ್ಕೃತಿ, ಆಚಾರ ವಿಚಾರ ವೇಷ ಭೂಷಣಗಳಿಂದ ವಿಭಿನ್ನವಾಗಿದೆ ಇಷ್ಟೇಲ್ಲ ವಿಭಿನ್ನತೆ ಇದ್ದರೂ ಕೂಡಾ ನಾವೇಲ್ಲರೂ ಒಂದೇ ಎಂಬ ಭಾವೈಕ್ಯೆತೆಯ ಬೀಡು ಭಾರತೀಯರ ದಾಗಿದೆ.

ಸ್ವಾತಂತ್ರö್ಯ ಹೋರಾಟಕ್ಕಾಗಿ ಅನೇಕ ದೇಶಪ್ರೇಮಿಗಳ ತಮ್ಮ ಮನೆ ಕುಟುಂಬದ ಚಿಂತನೆ ಇಲ್ಲದೆ ದೇಶವನ್ನು ಸ್ವಾತಂತ್ಯ ಗೋಳಿಸಿದ್ದಾರೆ. ದೇಶದ ಸ್ವಾತಂತ್ರö್ಯ ಗೋಳಿಸುವಲ್ಲಿ ಕರ್ನಾಟಕದ ಅದರಲ್ಲಿ ಜಿಲ್ಲೆ .ತಾಲೂಕಿನ ಕೊಡುಗೆ ಸಾಕಷ್ಟಿದೆ.ದೇಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಮ್ಮ ಕೊಡುಗೆ ಎನು ಎಂಬುದನ್ನು ಪ್ರತಿಯೋಬ್ಬರು ತಿಳಿಯಬೇಕು. ಭಾರತ ಸ್ವಾತಂತ್ರö್ಯಕ್ಕಿAತ ಮುಂಚ್ಚೇ ಅಭಿವೃದ್ದಿ ಕುಂಟಿತವಾಗಿತ್ತು ಸ್ವಾತಂತ್ರö್ಯ ನಂತರ ನಮ್ಮನ್ನಾಳಿನ ಅನೇಕ ಸರಕಾರಗಳು ದೇಶದ ಅಭಿವೃದ್ದಿಯಲ್ಲಿ ಸಾಕಷ್ಟು ಶ್ರಮಿಸಿವೆ.

ವಿಜಯಪೂರ ಜಿಲ್ಲೆ ಪಂಚನದಿಗಳ ಬೀಡು ಆದರೆ ಇಲ್ಲಿನ ರೈತರ ಪರಸ್ಥಿತಿ ಹೇಳತೀರದು. ಈ ಭಾಗದ ಜನರು ದೇಶ ,ನಾಡು ಕಟ್ಟವಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಜನರು ನೀರಾವರಿ ಯೋಜನೆಗಾಗಿ ತಮ್ಮ ಭೂಮಿ, ಮನೆ ,ಮಠಗಳನ್ನು ಕಳೆದುಕೊಂಡು ಬೇರೆಯವರಿಗೆ ಆಸರೆಯಾಗಿದ್ದಾರೆ ಅದಕ್ಕಾಗಿಯೇ ಈ ಭಾಗದ ಜನತೆಗೆ ನಾನು ಹೃದಯ ಶ್ರೀಮಂತರು ಎನ್ನಲಾ ಗಿದೆ. ಈ ಭಾಗದಲ್ಲಿ ಇನ್ನು ಹೇಳಿಕೊಳ್ಳುವಷ್ಟು ನೀರಾವರಿ ಆಗಿಲ್ಲ ಮುಂಬರುವ ದಿನಗಳಲ್ಲಿ ಪ್ರಮಾಣಿಕ ಕೆಲಸ ಮಾಡುವೆ.

ಶೈಕ್ಷಣಿಕ ಪ್ರಗತಿಗೆ ಶ್ರೀಸಂಗನಬಸವ ಶಿವಯೋಗಿಗಳು ಮಕ್ಕಳೆ ದೇವರು ಶಾಲೆಯ ಜೀವಂತ ದೇವರ ಗುಡಿ ಎಂಬ ಹಿದೃಷ್ಠಿಯಿಂದ ನಾಡಿನಾದ್ಯೆಂತ ಸಂಚರಿಸಿ ಶಿಕ್ಷಣ ಬೆಳವಣಿಗೆಗೆ ಶ್ರಮಿಸಿದ್ದಾರೆ. ಶೈಕ್ಷಣಿಕ ಅಭಿವೃದ್ದಿಯಿಂದ ಎನ್ನೇಲ್ಲಾ ಬದಲಾವಣೆ ತರಲು ಸಾಧ್ಯೆ ಎಂದು ತಾಲೂಕಿನಲ್ಲಿ ಅನೇಕ ಶಿಕ್ಷಣ ಸಂಸ್ಥೆ ,ಕಟ್ಟಡಗಳು ಮಂಜೂರಾತಿ ತಂದಿದ್ದೇನೆ. ವಿಧ್ಯಾರ್ಥಿಗಳು ನಮ್ಮ ಪೂರ್ವಜರ ಮಾರ್ಗದರ್ಶನದಲ್ಲಿ ನಡೇದು ದೇಶ ಪ್ರಗತಿಯ ಪಥದತ್ತ ಕೊಂಡ್ಯೋಯಬೇಕು ಎಂದರು.

ದೇಶದ ಸ್ವಾತಂತ್ರö್ಯ ಸುಲಭವಾಗಿ ಸಿಕ್ಕಿಲ್ಲ ನಮ್ಮಪೂರ್ವಜರ ಹೋರಾಟದ ಪ್ರತಿಫಲದಿಂದ ಪಡೇದುಕೊಂಡಿದ್ದೇವೆ.ದೇಶ ಸ್ವಾತಂತ್ರö್ಯಗೋಳಿಸುವಲ್ಲಿ ಮಂದಗಾಮಿ, ತೀವೃಗಾಮಿ ಎಂಬ ಎರಡು ಪಂಗಡಗಳ ಶ್ರಮದ ಪ್ರತಿಫಲ,ದೇಶದ ಜ್ವಲಂತ ಸಮಸ್ಯಗಳನ್ನು ಹೋಗಲಾಡಿಸಿ ಬಲಿಷ್ಠ ಭಾರತ ನಿರ್ಮಾಣದ ಕನಸು ಹೋರಾಟಗಾರರದಾಗಿತ್ತು. ಅವರ ಕನಸ್ಸು ನನಸಾಗಿಸು ವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಉಪವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಹೇಳಿದರು.

ಕಾತ್ರಾಳ ಗ್ರಾಮದ ಬಾಲಗಾಂವ ಅಮೃತಾನಂದ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು.

ತಹಶೀಲ್ದಾರ ನಾಗಯ್ಯಾ ಹಿರೇಮಠ, ತಾ.ಪಂ ಅಧಿಕಾರಿ ಸುನೀಲ ಮದ್ದಿನ, ಡಿವೈಎಸ್ಪಿ ಚಂದ್ರಕಾAತ ನಂದರಡ್ಡಿ,ಪುರಸಭೆ ಅಧ್ಯಕ್ಷ ಬನ್ನೇಮ್ಮಾ ಹದರಿ, ಬಿ.ಇ.ಓ ವಸಂತ ರಾಠೋಡ ವೇದಿಕೆಯಲ್ಲಿದ್ದರು. ಸ್ವಾತಂತ್ರೊö್ಯÃತ್ಸವ ಕಾರ್ಯಕ್ರಮದಲ್ಲಿ ತಾಲೂಕಾ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ವಾತಂತ್ರö್ಯ ಹೋರಾಟಗಾರರು, ಜನಪ್ರತಿನಿಧಿಗಳು, ವಿವಿಧ ಶಾಲೆಗಳ ಮುಖ್ಯಗುರುಗಳು ,ಶಿಕ್ಷಕರು, ವಿಧ್ಯಾರ್ಥಿಗಳು ಹಾಜರಿದ್ದರು.

***

ಅರಣ್ಯಾಧಿಕಾರಿ ಡಿ.ಎ ಮುಜಗೊಂಡ ಸ್ವಾತಂತ್ರö್ಯ ಅಮೃತಮಹೋತ್ಸವ ಕಾರ್ಯಕ್ರಮ ನೀರೂಪಣೆ ಅಚ್ಚುಕಟ್ಟಾಗಿ, ಮಾಡಿರುವುದರಿಂದ ಇಡೀ ತಾಲೂಕಾಡಳಿತ ,ಸಾರ್ವಜನಕರು,ಜನಪ್ರತಿನಿಧಿಗಳ ಪ್ರಶಂಸೆಗೆ ಪಾತ್ರರಾಗಿದ್ದರು.