Friday, 24th September 2021

ನಾಗರೀಕರಲ್ಲೂ ದೇಶಪ್ರೇಮವಿದ್ದು, ದೇಶದ ರಕ್ಷಣೆಗಾಗಿ ಮುಂದೆ ಬರಬೇಕು

ಮಧುಗಿರಿ : ಪ್ರತಿಯೊಬ್ಬ ನಾಗರೀಕರಲ್ಲೂ ದೇಶಪ್ರೇಮವಿದ್ದು, ದೇಶದ ರಕ್ಷಣೆಗಾಗಿ ಮುಂದೆ ಬರಬೇಕು ಎಂದು ಉಪವಿಭಾಗಾಧಿಕಾರಿ ಸೋಮಪ್ಪಕಡಕೋಳ ತಿಳಿಸಿದರು.

ಪಟ್ಟಣದ ಮಹಾತ್ಮಗಾಂಧಿ ವೃತ್ತದ ಬಳಿ ರಕ್ತದಾನಿ ಶಿಕ್ಷಕರ ಸ್ನೇಹಬಳಗ, ಸರಕಾರಿ ನೌಕರರ ಸಂಘÀ ರೋಟರಿ ಸಂಸ್ಥೆ, ಗುಡ್ ನೈಬರ್ಸ್ ಇಂಡಿಯಾ ಮತ್ತು ನಾಗರೀಕ ಹಿತರಕ್ಷಣಾ ವೇದಿಕೆಯ ಸಂಯುಕ್ತಾಶ್ರಯದಲ್ಲಿ 22 ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆÀ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಧರನ್ನು ನಿವೃತ್ತ ರೆಂದು ಕರೆಯಬೇಡಿ. ದೇಶದ ರಕ್ಷಣೆಗಾಗಿ ದೃಢಸಂಕಲ್ಪದಿ0ದ ಸೇನೆಗೆ ಸೇರಿದ ದಿನದಿಂದ ಜೀವನದ ಅಂತ್ಯದ ವರೆಗೂ ಯೋಧರಾಗಿ ಇರುತ್ತಾರೆ ಎಂದರು.

ನಾನು 17 ವರ್ಷ ಭಾರತ ಸೇನೆಯಲ್ಲಿ ಕೆಲಸ ಮಾಡಿದ್ದೇನೆ, 2 ವರ್ಷ ಹೊರತುಪಡಿಸಿ ಮಿಕ್ಕ ಎಲ್ಲಾ ಸೇವೆಯೂ ಗಡಿಭಾಗದಲ್ಲಿ ದೇಶಸೇವೆ ಮಾಡುವ ಸೌಭಾಗ್ಯ ನನಗೆ ದೊರೆಯಿತು. ಸೈನಿಕ ವೃತ್ತಿಯ ಕೆಲವು ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ ಕಾರಣ ದೇಶದ ಹಿತದೃಷ್ಟಿ ನಾನು ದೇಶ ಸೇವೆ ಮಾಡುವಾಗ ನನಗೆ ಯಾವುದೇ ತೊಂದರೆಯಾಗದೆ ತಾಯ್ನಾಡಿಗೆ ಮರಳಿದ್ದೇನೆ ಎಂದು ಸೇನೆಯಲ್ಲಿನ ಅನುಭವವನ್ನು ಹಂಚಿಕೊಂಡರು.

ವೃತ್ತ ನಿರೀಕ್ಷಕ ಎಂ.ಎಸ್.ಸರ್ದಾರ್ ಮಾತನಾಡಿ, ಸೈನಿಕರು ಹಸಿವು ಚಳಿ ಮಳೆ ಗಾಳಿ ಎನ್ನದೆ ಗಡಿಭಾಗದಲ್ಲಿ ಕಷ್ಟಕಾರ್ಪಣ್ಯಗಳ ನಡುವೆಯೂ ಹಿಮಪಾತ ವಾಗಿದ್ದರೂ ಕೂಡ ದೇಶದ ರಕ್ಷಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಕ್ಕಳಿಗೆ ದೇಶ ಪ್ರೇಮದ ಬಗ್ಗೆ ಪೋಷಕರು ತಿಳಿಸಿ ಕೊಡಬೇಕು ಎಂದರು.

ವೀರ ಮರಣ ಹೊಂದಿದ ಸೈನಿಕರು ಹಾಗೂ ಚಿತ್ರ ನಟಿ ಜಯಂತಿ ಮೃತಪಟ್ಟ ಹಿನ್ನಲೆಯಲ್ಲಿ ೧ ನಿಮಿಷ ಮೌನಾಚರಣೆ ಮಾಡಲಾಯಿತು. ವೀರಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಿವೃತ್ತ ಯೋಧರನ್ನು ರೋಟರಿ ಸಂಸ್ಥೆ ಅಧ್ಯಕ್ಷ ಜಿ.ಜಯರಾಮಯ್ಯ ಮತ್ತು ಪಧಾದಿಕಾರಿಗಳು ಸನ್ಮಾನಿಸಿದರು

ಪುರಸಭಾ ಸದಸ್ಯರಾದ ಎಂ.ಎಲ್. ಗಂಗರಾಜು, ಕೆ.ನಾರಾಯಣ್, ಎಂಜಿಎಂ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ. ಎಸ್. ಶಂಕರನಾರಾಯಣ್, ರಕ್ತದಾನಿ ಶಿಕ್ಷಕರ ಸ್ನೇಹ ಬಳಗದ ಎಚ್.ಆರ್.ಶಶಿಕುಮಾರ್ ರೋಟರಿ ಕಾರ್ಯದರ್ಶಿ ಎಂ.ಇ.ಕರಿಯಣ್ಣ, ಉಪಾಧ್ಯಕ್ಷ ವೆಂಕಟೇಶ್, ಮಾಜಿ ಅಧ್ಯಕ್ಷ ಶಿವಲಿಂಗಪ್ಪ, ಮಂಜುಳಾ ನಾಗಭೂಷಣ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಗುಡ್ ನೇಬರ್ ಸಂಸ್ಥೆಯ ಲೋಕೇಶ್, ಮೌಂಟ್ ವ್ಯೂ ಶಾಲೆಯ ಜಗದೀಶ್, ಮುಜಾಮಿಲ್ ಪಾಷಾ, ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜು, ಸಿದ್ಧಾಪುರ ರಂಗಶಾಮಣ್ಣ, ಎಂ.ವಿ.ರುದ್ರಾರಾದ್ಯ, ಯತೀಶ್ ಬಾಬು, ಅನಂತಕೃಷ್ಣ ರಾಜು, ಜಿ ನಾರಾಯಣರಾಜು ಇದ್ದರು.

Leave a Reply

Your email address will not be published. Required fields are marked *