Tuesday, 31st January 2023

ಜೆಡಿಎಸ್ ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರ ಖಾಯಂ, ಒಪಿಎಸ್ ಜಾರಿ ಖಚಿತ : ಹೆಚ್.ಡಿ.ಕುಮಾರಸ್ವಾಮಿ

ಚಿಕಬಳ್ಳಾಪುರ: ಮುಂಬರುವ ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತೆ ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ನೀಡಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ನೆರವಾದರೆ ಖಂಡಿತವಾಗಿ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವೆ. ಸರಕಾರಿ ನೌಕರರ ಬೇಡಿಕೆಯಾದ ಎನ್‌ಇಪಿ ಬೇಡ ಒಪಿಎಸ್ ಬೇಕು ಎನ್ನುವ ಬೇಡಿಕೆ ಸಹ ಈಡೇರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಗೌರಿಬಿದನೂರು ತಾಲೂಕಿಗೆ ಪಂಚರತ್ನ ರಥಯಾತ್ರೆ ಆಗಮಿಸುವ ಮುನ್ನ ಸುದ್ದಿಗಾರ ರೊಂದಿಗ ಮಾತನಾಡಿ ಈ ವಿಚಾರ ತಿಳಿಸಿದರು.

ನದಿ ಮತ್ತು ನೆಲ ಜಲದ ವಿಚಾರದಲ್ಲಿ ಹೈಕಮಾಂಡ್‌ಗೆ ತಲೆಭಾಗಿ ರಾಜ್ಯದ ಹಿತಾಸಕ್ತಿ ಬಲಿಗೊಡುವುದು ಸರಿಯಲ್ಲ. ಎಲ್ಲಾ ಸಮಯವೂ ಹೀಗೆ ಇರಲ್ಲ.ರಾಜ್ಯದ ಬಿಜೆಪಿ ಸಂಸದರು ಬಿಜೆಪಿ ಅಧ್ಯಕ್ಷ ನಡ್ಡಾ, ಅಮಿತ್ ಷಾ, ಮೋದಿ ಮುಂದೆ ಧೈರ್ಯವಾಗಿ ಮಾತನಾಡಲು ಸೋತಿದ್ದಾರೆ.ಮಹಾರಾಷ್ಟç ವಿಚಾರದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಮುಂದೆ ಇಟ್ಟುಕೊಂಡು ಹೀಗೆ ಗಡಿಕ್ಯಾತೆ ಶುರುವಾಗಿದೆ. ಇದನ್ನು ನಿಲ್ಲಿಸಿ ಎಂದು ಹೇಳುವ ಕರ್ನಾಟಕದಲ್ಲಿಯೂ ನಮ್ಮದೇ ಸರಕಾರವಿದೆ ಎಂದು ಹೇಳುವ ಧೈರ್ಯ ಯಾರಿಗಿದೆ.ನಮ್ಮ ಮುಖ್ಯಮಂತ್ರಿ ಇದನ್ನು ಅರಿತು ತೀರ್ಮಾನ ಕೈಗೊಳ್ಳಬೇಕು. ಸರ್ವಪಕ್ಷ ಸಭೆಯಿಂದ ಏನೂ ಪ್ರಯೋಜನವಿಲ್ಲ. ಗೋಡಂಬಿಕೊಟ್ಟು ಕಳಿಸಲು ಸಭೆ ಬೇಕಿಲ್ಲ.ವಿರೋಧ ಪಕ್ಷಗಳಿಂದ ಈ ಸಮಸ್ಯೆಗೆ ಪರಿಹಾರವಾಗಲ್ಲ ಎಂದರು.

ಬೆಳಗಾವಿ ನಮ್ಮದು
ಬೆಳಗಾವಿಯನ್ನು ಲಪಟಾಯಿಸುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ.ಒಂದು ದೇಶ ಎನ್ನುವ ಬಿಜೆಪಿಗೆ ಬೆಳಗಾವಿ ಎಲ್ಲಿದ್ದ ರೇನು? ಬೆಳಗಾವಿ ಕರ್ನಾಟಕದಲ್ಲಿ ಇದೆ. ಇರಲು ಬಿಡಿ. ಬೆಳಗಾವಿಯನ್ನು ಹೊಡೆದುಕೊಳ್ಳುವ ದುಷ್ಟತನ ಏಕೆ? ಇಂದು ಸಂವಿಧಾನ ರಚನಾ ದಿನ. ದೇಶವನ್ನು ಒಂದು ತತ್ವದಡಿ ಒಂದು ಮಾಡಿರುವ ಸಂವಿಧಾನದ ಜಪ ಮಾಡುತ್ತಲೇ ಬಿಜೆಪಿ ಗಡಿ ವಿಷಯದಲ್ಲಿ ಒಡೆದಾಳುತ್ತಿದೆ.ನೆಲ ಜಲದ ಭಾಷೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದ ಜತೆ ಗಡಿ ಗಲಾಟೆ ಇಲ್ಲ.ಈ ರಾಜ್ಯಗಳು ಸೌಹಾರ್ದವಾಗಿ ಬಾಳುತ್ತವೆ.

ಮಹಾರಾಷ್ಟ್ರ ಮಾತ್ರ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ.ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದಾಕ್ಷಣ ಬೆಳಗಾವಿ ಗಡಿ ಭಾಗ ನಮ್ಮದು ಅಂತಿದ್ದಾರೆ.ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ.ನಾವೆಲ್ಲಾ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಸಂವಿ ಧಾನ ರಚನಾ ದಿನ ಇಂದು. ಇಂದು ಸಂವಿಧಾನಕ್ಕೆ ಅಪಚಾರ ಮಾಡುವಂತೆ ಗಡಿ ಕ್ಯಾತೆ ತೆಗೆದಿದ್ದಾರೆ.ಬಿಜೆಪಿ ಸಂವಿಧಾನಕ್ಕೆ ಅಪಚಾರ ಮಾಡಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ.ಬೆಳಗಾವಿ ಜಿಲ್ಲೆಯನ್ನು ಉತ್ತಮವಾಗಿ ಅಭಿವೃದ್ಧಿ ಮಾಡಿದ್ದೇವೆ.ಕಳೆದ ೧೦ ವರ್ಷದಲ್ಲಿ ೨೭ ಸಕ್ಕರೆ ಕಾರ್ಖಾನೆ ಆಗಿದೆ.ವಾಣಿಜ್ಯ ನಗರವಾಗಿದೆ, ಆದಾಯ ಬರ್ತಿದೆ. ಇದನ್ನ ಬಿಜೆಪಿ ಲೂಟಿ ಮಾಡಲು ಹೊರಟಿದೆ.ಬೆಳಗಾವಿಯನ್ನು ಹೊಡೆದುಕೊಂಡು ಹೋಗಲು ಬಿಜೆಪಿ ಹೊರಟಿದೆ. ಇದು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿ ದರು.

ಕೇಂದ್ರದಿAದ ಜಲ ಅನ್ಯಾಯ

ಪಿನಾಕಿನಿ ಜಲ ಕಂಟಕ ಸೃಷ್ಟಿಸಲು ಕೇಂದ್ರ ಸರಕಾರ ಹುನ್ನಾರ ೫೧ ನದಿ, ಉಪನದಿಗಳು ಈ ರಾಜ್ಯದಲ್ಲಿ ಹರಿಯುತ್ತಿವೆ.ಆದ್ರೆ ಪರಿಶುದ್ಧ ನೀರು ಕೊಡಲು ಸಾಧ್ಯವಾಗಿಲ್ಲ. ಪಿನಾಕಿನಿ ನದಿ ನೀರು ಹಂಚಿಕೆಗೆ ಸಮಿತಿ ಮಾಡಲು ಮುಂದಾಗಿದೆ.ಪಿನಾಕಿನಿ ನೀರನ್ನ ನೆರೆಯ ರಾಜ್ಯಗಳಿಗೆ ಹಂಚಿಕೆ ಮಾಡಲು ಹುನ್ನಾರ ನಡೆಸಿದೆ.ಆದರೆ ಕರ್ನಾಟಕವನ್ನು ಕೇಂದ್ರ ಕಡೆಗಣಿಸಿದೆ.ಇದು ನಮಗೆ ರಾಷ್ಟ್ರೀಯ ಪಕ್ಷಗಳು ಕೊಡ್ತಿರೋ ಕೊಡುಗೆ.ಪಿನಾಕಿನಿ ನದಿ ವಿಷಯದಲ್ಲಿ ವಿವಾದ ಸೃಷಿ ಮಾಡಲು ಕೇಂದ್ರ ಟ್ರಿಬ್ಯೂನಲ್ ರಚನೆ ಮಾಡಲು ಷಡ್ಯಂತ್ರ ಹೂಡಿದೆ.ಟ್ರಿಬ್ಯೂನಲ್ ರಚಿಸಿ ರಾಜ್ಯಕ್ಕೆ ಅನ್ಯಾಯ ಮಾಡಲು ಹೊರಟಿದೆ ಎಂದು ದೂರಿದರು.

ಶಾಂತಿಗಾಗಿ ಬೆಂಬಲಿಸಿ
ಗೌರಿಬಿದನೂರಿನಲ್ಲಿ ನನ್ನ ಅಣ್ಣ ತಮ್ಮಂದಿರು ಅಂಗಡಿ ತೆರೆದಿದ್ದೀರಿ.ಒಂದರಲ್ಲಿ ಹಿಂದೂ, ಮತ್ತೊಂದು ಕಡೆ ಮುಸ್ಲಿಮರಿದ್ದೀರಿ. ಆದ್ರೆ ಅಂಗಡಿಗಳ ಮುಚ್ಚಿಸೋ ಕುತಂತ್ರ ನಡೆಯುತ್ತಿದೆ.ಹೌದು, ರಾಮ ಮಂದಿರ ಕಟ್ಟಬೇಕು.ಆದ್ರೆ ರಾಮಮಂದಿರ ಕಟ್ಟುವ ಸಂದೇಶ ಏನು?ರಾಮಂದಿರ ಕಟ್ಟುವುದು ಒಂದಾಗಿ ಬಾಳುವುದು ಅಂತ. ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ರಾಜ್ಯ. ನೀವು ಹೋದ್ರೆ ಜನ ಸೇರ್ತಾರೆ, ಓಟ್ ಬೀಳಲ್ಲ ಅಂತ.ಅದನ್ನ ನೀವು ಸರಿಪಡಿಸಿ.ಒಂದು ಬಾರಿ ನಮ್ಮ ಪಕ್ಷಕ್ಕೆ ಮತ ನೀಡಿ.ಐದು ವರ್ಷ ಅಧಿಕಾರ ನೀಡಿ.ಒಂದು ಬಾರಿ ಸ್ವತಂತ್ರ ಸರ್ಕಾರ ಬರಲು ಅವಕಾಶ ನೀಡಿ.ಈ ಬಾರಿ ನರಸಿಂಹ ಮೂರ್ತಿ ಇದ್ದಾರೆ ಅವರಿಗೆ ಅವಕಾಶ ನೀಡಿ.ಕೇವಲ ೨೮ ದಿನದ ಪ್ರಚಾರದಲ್ಲಿ ೬೦ ಸಾವಿರ ಮತ ನೀಡಿದ್ದೀರಿ.ಈ ಬಾರಿ ಅವರಿಗೆ ಆಶಿರ್ವಾದ ಮಾಡಿ.

ಗೌರಿಬಿದನೂರಿನ ರಾಜಕಾರಣಕ್ಕೆ ಬದಲಾವಣೆ ತನ್ನಿ.ಸ್ತ್ರೀ ಶಕ್ತಿ ಸಾಲ ಮನ್ನ ಮಾಡಿ ಅಂತ ಮನವಿ ಮಾಡ್ತಿದ್ದಾರೆ.ಸ್ತ್ರೀ ಶಕ್ತಿ ಸಾಲ ಯಾವ ಮಹಾ.ಇವತ್ತು ಎಂತೆAತ ಶ್ರೀಮಂತರು ನೂರಾರು ಕೋಟಿ ಸಾಲ ತೆಗೆದುಕೊಂಡಿದ್ದಾರೆ.ಆರಾಮಾಗಿ ಓಡಾಡ್ತಿದ್ದಾರೆ.ಇನ್ನು ಸ್ತ್ರೀ ಶಕ್ತಿ ಸಂಘದ ಸಾಲ ಯಾವ ಮಹಾ.ನಾನು ಅಧಿಕಾರಕ್ಕೆ ಬಂದ ೨೪ ಗಂಟೆಯಲ್ಲಿ ಸಾಲ ಮನ್ನ ಮಾಡ್ತೀನಿ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಶಾಸಕ ಜೆ,ಕೆ.ಕೃಷ್ಣಾರೆಡ್ಡಿ, ಅಭ್ಯರ್ಥಿ ನರಸಿಂಹ ಮೂರ್ತಿ ಮತ್ತಿತರರು ಇದ್ದರು.

error: Content is protected !!