Tuesday, 26th October 2021

ಪಿಜಿಸಿಇಟಿ ಪರೀಕ್ಷೆ ದಿನಾಂಕ ಮುಂದೂಡಿಕೆ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಕೆಇಎ, ರಾಜ್ಯದ ಪಿಜಿಸಿಇಟಿ ಪರೀಕ್ಷೆಯ ದಿನಾಂಕವನ್ನ ಮುಂದೂಡಿದೆ.

ಈ ಹಿಂದೆ ಅಕ್ಟೋಬರ್ 22-23ರಂದು ನಡೆಯಲಿದ್ದ ಕರ್ನಾಟಕ ಪಿಜಿಸಿಇಟಿ ಈಗ ನವೆಂಬರ್ʼನಲ್ಲಿ ನಡೆಯಲಿದೆ. ಪರಿಷ್ಕೃತ ಪಿಜಿಸಿಇಟಿ ದಿನಾಂಕವನ್ನ ಶೀಘ್ರ ದಲ್ಲೇ ಪ್ರಕಟಿಸಲಾಗುವುದು. ‘ಬಿಎ, ಬಿಕಾಂ, ಬಿಎಸ್ಸಿ, ಬಿಇಯ ಅಂತಿಮ ವರ್ಷ/ ಸೆಮಿಸ್ಟರ್ ಪರೀಕ್ಷೆಗಳು ಇನ್ನೂ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪೂರ್ಣ ಗೊಂಡಿಲ್ಲ.

ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ, ಅಥವಾ ಪಿಜಿಸಿಇಟಿ, ಅಂಗಸಂಸ್ಥೆಗಳಲ್ಲಿ ಅರೆಕಾಲಿಕ ಮತ್ತು ಪೂರ್ಣ ಸಮಯದ ಎಂಬಿಎ, ಎಂಸಿಎ, ಎಂಇ, ಎಂಟೆಕ್ ಮತ್ತು ಆರ್ಚ್ ಕೋರ್ಸ್ʼಗಳಿಗೆ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.

ಅಭ್ಯರ್ಥಿಗಳ ಮಾಹಿತಿಗಾಗಿ ಪರಿಷ್ಕೃತ ವೇಳಾಪಟ್ಟಿಯನ್ನು ಕೆಇಎ ವೆಬ್ ಸೈಟ್ʼನಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದೆ.

Leave a Reply

Your email address will not be published. Required fields are marked *