Savi Sidhu: ಸ್ಟಾರ್ ನಟರ ಜೊತೆ ಅಭಿನಯಿಸಿದ್ದ ಈ ನಟ ಈಗ ವಾಚ್ ಮ್ಯಾನ್! ಯಾರೀತ?
ಸಿನಿಮಾರಂಗ ಕೆಲವರಿಗೆ ಯಶಸ್ಸು ನೀಡಿದರೆ ಇನ್ನು ಕೆಲವರ ಬದುಕೆ ಬರಿದಾಗುವಂತೆ ಮಾಡಿದ್ದು ಇದೆ. ಕೆಲವರು ಪೋಷಕ ನಟರಾಗಿ ಬಂದು ಈಗ ಸ್ಟಾರ್ ನಟರಾದರೆ ಇನ್ನು ಕೆಲವರು ಅಭಿನಯದ ಮೂಲಕ ಗುರುತಿಸಿಕೊಂಡು ಬಳಿಕ ಮರೆಯಾಗುತ್ತಾರೆ. ಅಂತವರಲ್ಲಿ ಬಾಲಿವುಡ್ ನಟ ಸವಿ ಸಿಧು ಕೂಡ ಒಬ್ಬರು. ಟಕ್ಕರ್, ಬ್ಲ್ಯಾಕ್ ಫ್ರೈಡೆ ಸಿನಿಮಾ ಮೂಲಕ ಖ್ಯಾತಿ ಪಡೆದ ಈ ನಟ ಈಗ ಬಸ್ ಟಿಕೆಟ್ ಗೂ ಹಣ ಇಲ್ಲದೆ ವಾಚ್ ಮ್ಯಾನ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಸದ್ಯ ಇವರ ವಿಚಾರ ಸೋಶಿಯಲ್ ಮಿಡಿ ಯಾದಲ್ಲಿ ವೈರಲ್ ಆಗುತ್ತಿದೆ.



ಒಂದು ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ದೊಡ್ಡ ನಾಯಕ ನಟರ ಜೊತೆ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದ ನಟ ಸವಿ ಸಿಧು ಅವರು ಭರವಸೆಯ ನಟನೆಂದೇ ಪ್ರಸಿದ್ಧರಾಗಿದ್ದರು. ಲಕ್ನೋ ಮೂಲದವರಾದ ಇವರು ಮಾಡೆಲಿಂಗ್ ಮೂಲಕ ಮಿಂಚಲು ಪ್ರಯತ್ನಿಸಿದ್ದರು. ಬಳಿಕ ನಟನ ಕೌಶಲ್ಯ ಕಲಿಯಲು ರಂಗಭೂಮಿಗೆ ಕೂಡ ಸೇರಿದ್ದರು.

1995 ರಲ್ಲಿ ಬಿಡುಗಡೆಯಾದ 'ತಾಕತ್' ಸಿನಿಮಾ ಮೂಲಕ ಸವಿ ಸಿಧು ಬಾಲಿವುಡ್ಗೆ ನಟನೆಗೆ ಪಾದಾರ್ಪಣೆ ಮಾಡಿದರು. ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೆ ಸವಿ ಅವರ ಅಭಿನಯ ಇಷ್ಟ ವಾಗಿ ಅವರು ಪಾಂಚ್ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಟಿಸುವ ಅವಕಾಶ ದೊರಕಿಸಿ ಕೊಟ್ಟರು. ಈ ಸಿನಿಮಾ ಕೂಡ ಬಿಗ್ ಸಕ್ಸಸ್ ತಂದುಕೊಟ್ಟಿತು.

ಬಳಿಕ ಸಿಧು ಅವರು 2007ರಲ್ಲಿ ತೆರೆ ಕಂಡ ಬ್ಲ್ಯಾಕ್ ಫ್ರೈಡೇ ಸಿನಿಮಾದಲ್ಲಿ ಕಮಿಷನರ್ ಎ.ಎಸ್. ಸಮ್ರಾ ಪಾತ್ರದಲ್ಲಿ ಅಭಿನಯಿಸಿದರು. ಬಳಿಕ 2009ರಲ್ಲಿ ತೆರೆಕಂಡ ಗುಲಾಲ್ ಸಿನಿಮಾದಲ್ಲೂ ನಟ ದಿಲೀಪ್ ಅವರ ಅಣ್ಣನ ಪಾತ್ರದಲ್ಲಿ ಅಭಿನಯಿಸಿದರು. ಸಿಧು ಅವರು ಅಕ್ಷಯ್ ಕುಮಾರ್ ಅವ ರೊಂದಿಗೆ 2011ರಲ್ಲಿ ಪಟಿಯಾಲ ಹೌಸ್ , 2013ರಲ್ಲಿ ತೆರೆಕಂಡ ಡಿ-ಡೇ ಮತ್ತು ನೌಟಂಕಿ ಸಾಲ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡರು.

'ಬೇವಕೂಫಿಯಾನ್' ಸಿನಿಮಾದ ನಂತರ ಸವಿ ಸಿಧು ಅವರಿಗೆ ಚಲನಚಿತ್ರೋದ್ಯಮದಲ್ಲಿ ಅವ ಕಾಶಗಳು ಬಹಳ ಕಡಿಮೆಯಾಯಿತು. ಬಳಿಕ ಜೀವನ ನಡೆಸುವುದು ಕೂಡ ಕಷ್ಟವಾಗಿತು. 2019ರಲ್ಲಿ ವಸತಿ ಕಟ್ಟಡವೊಂದರಲ್ಲಿ ಕಾವಲುಗಾರನಾಗಿ ಕೆಲಸ ಮಾಡಲು ಸೇರಿಕೊಂಡರು. ಹಣ ಇಲ್ಲದ ಕಾರಣ ಇವರ ಕುಟುಂಬದವರು ಇವರನ್ನು ದೂರ ಇಟ್ಟರಂತೆ.. ಹೀಗಾಗಿ ಒಬ್ಬಂಟಿ ಯಾಗಿ ಜೀವನ ನಡೆಸುತ್ತಿರುವುದಾಗಿ ಮಾಧ್ಯಮ ಒಂದಕ್ಕೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟರ ಜೊತೆ ಖ್ಯಾತಿ ಪಡೆದ ನಟ ಸವಿ ಸಿಧು ಅವರು ಈಗ ಬಸ್ ಟಿಕೆಟ್ ಗೂ ಸಹ ಹಣವಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರು ಸಾಕಷ್ಟು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು ಸಿನಿಮಾದಲ್ಲಿ ಯಶಸ್ಸು ಸಾಧಿಸುವ ಕನಸು ಮಾತ್ರ ನನಸಾಗಲಿಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ.