Priyanka Chopra: ಪತಿಯ ಜೊತೆ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ- ಇಲ್ಲಿದೆ ನೋಡಿ
ಹೆಡ್ಸ್ ಆಫ್ ಸ್ಟೇಟ್ಸ್, ವೈಟ್ ಟೈಗರ್, ದಿ ಸ್ಕೈ ಇಸ್ ಪಿಂಕ್, ಬರ್ಫಿ, ಡಾನ್ 2 ಸಿನಿಮಾ ಖ್ಯಾತಿಯ ನಟಿ ಪ್ರಿಯಾಂಕ ಚೋಪ್ರಾ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ಹಾಲಿವುಡ್ ನಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ನಟಿ ಪ್ರಿಯಾಂಕ ಚೋಪ್ರಾ ಅವರು ಇತ್ತೀಚೆಗಷ್ಟೇ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೀಗ ಅವರು ತಮ್ಮ ಬರ್ತಡೇಯನ್ನು ಅವಿಸ್ಮರಣೀಯವಾಗಿಸಲೆಂದೇ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಸ್ ಜೊತೆ ವಿದೇಶಕ್ಕೆ ಪ್ರವಾಸಕ್ಕೆಂದು ತೆರಳಿದ್ದು, ಸದ್ಯ ಅವರ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಿನಿಮಾ ಹಾಗೂ ವಿವಿಧ ಬ್ರ್ಯಾಂಡ್ ಗಳ ಅಂಬಾಸಿಡರ್ ಆಗಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಾಸ್ ಮತ್ತು ಪುತ್ರಿ ಮಾಲ್ತಿ ಮೇರಿ ಜೊತೆಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಫ್ರಾನ್ಸ್‌ನ ಫೇಮಸ್ ಐಲ್ಯಾಂಡ್ ಒಂದಕ್ಕೆ ಫ್ಯಾಮಿಲಿ ಸಮೇತ ಭೇಟಿ ನೀಡಿದ್ದು ಅವರ ಫೋಟೊಗಳು ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.
ವೈರಲ್ ಆದ ಫೋಟೊ ಒಂದರಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ಪರ್ಪಲ್ ಕಲರ್ ಡ್ರೆಸ್‌ನಲ್ಲಿ ಬೀಚ್ ಸೈಡ್‌ನಲ್ಲಿ ಫೋಟೊಗೆ ಪೋಸ್ ನೀಡಿದ್ದಾರೆ. ಫೈರ್ ಕ್ಯಾಂಪ್ ಬಳಿಯೇ ನಟಿ ಪ್ರಿಯಾಂಕ ಅವರು ಹಾಟ್ ಆಗಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದು ಈ ಫೋಟೊ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಾಸ್ ಅವರಿಗೆ ಲಿಪ್ ಕಿಸ್ ನೀಡಿದ್ದಾರೆ. ಅವರಿಬ್ಬರು ಕಿಸ್ ಮಾಡುವ ಸೆಲ್ಫಿ ಫೋಟೊವನ್ನು ಕೂಡ ನಟಿ ಪ್ರಿಯಾಂಕಾ ಚೋಪ್ರಾ ಶೇರ್ ಮಾಡಿಕೊಂಡಿದ್ದಾರೆ. ಫ್ರಾನ್ಸ್ ಪ್ರವಾಸದ ವೇಳೆ ಪತಿ ಯೊಂದಿಗೆ ಕಳೆದ ಅವಿಸ್ಮರಣೀಯ ಕ್ಷಣವೆಂಬಂತೆ ಕ್ಯಾಪ್ಶನ್ ಅನ್ನು ಸಹ ನೀಡಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಅವರು ಇನ್ನೊಂದು ಫೋಟೊದಲ್ಲಿ ಬೀಚ್ ನಲ್ಲಿ ಇರುವ ಜೋಕಾ ಲಿಯ ಮೇಲೆ ನಿಂತು ಫೋಟೊ ತೆಗೆಸಿಕೊಂಡಿದ್ದು ಇವರ ಬೋಲ್ಡ್ ಲುಕ್ ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ. ಎಲ್ಲೋ ಕಲರ್ ಬಿಕಿನಿ ತೊಟ್ಟು ಸನ್ ಗ್ಲಾಸ್ ಧರಿಸಿ ನಟಿ ಪ್ರಿಯಾಂಕ ತಮ್ಮ ಕೂಲ್ ಲುಕ್‌ನಿಂದ ಗಮನ ಸೆಳೆದಿದ್ದಾರೆ. ಇವರ ಪತಿ ಹಾಗೂ ಮಗು ಕೂಡ ಇದೇ ಫೋಟೊದಲ್ಲಿದ್ದು ರಜೆಯನ್ನು ಎಂಜಾಯ್ ಮಾಡುತ್ತಿರುವುದು ಕಾಣಬಹುದು.
ನಟಿ ಪ್ರಿಯಾಂಕ ಚೋಪ್ರಾ ಅವರು ಫ್ರಾನ್ಸಿನ ಐಲ್ಯಾಂಡ್ ನಲ್ಲಿ ಬ್ಲ್ಯಾಕ್ ಆ್ಯಂಡ್ ವಿನ್ಯಾಸದ ಬಿಕಿನಿ ತೊಟ್ಟಿದ್ದು ಸಖತ್ ಹಾಟ್ ಆಗಿ ಕಂಡಿದ್ದಾರೆ. ಇವರ ಸನ್ ಗ್ಲಾಸ್ ಮತ್ತು ನೆಕ್ ಬ್ಯಾಂಡ್ ಕೂಡ ಬಿಕಿನಿಗೆ ಮ್ಯಾಚ್ ಆಗುವಂತೆ ತೊಟ್ಟಿದ್ದಾರೆ. ಹಾಟ್ ಲುಕ್ ನಲ್ಲಿ ನಟಿ ಪ್ರಿಯಾಂಕ ಅತೀ ಹೆಚ್ಚು ಗಮನ ಸೆಳೆದಿದ್ದಾರೆ.
ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಪ್ರಿಯಾಂಕ ಅವರು ರೆಡ್ ಕಲರ್ ಬಿಕಿನಿ ತೊಟ್ಟು ಗ್ಲಾಮರಸ್ ಆಗಿ ಕಂಡಿದ್ದಾರೆ. ಬ್ಲಾಕ್ ಕಲರ್ ಸನ್ ಗ್ಲಾಸ್ ತೊಟ್ಟು ಫೋಟೊಗೆ ಪೋಸ್ ನೀಡಿದ್ದು ಕಾಣಬಹುದು.
ಸದ್ಯ ಪ್ರಿಯಾಂಕ ಅವರು ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಾಯಕನಟನಾಗಿ ಅಭಿ ನಯಿಸುತ್ತಿರುವ ಎಸ್ಎಸ್ಎಂಬಿ 21 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ ಎನ್ನಬಹುದು.