ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಸೀರೆಯಲ್ಲಿ ಶ್ವೇತಧಾರಿಯಾದ ನಟಿ ಶ್ರುತಿ ಪ್ರಕಾಶ್

Star Fashion 2025: ನಟಿ ಹಾಗೂ ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿ ಶ್ರುತಿ ಪ್ರಕಾಶ್‌ ಸೀರೆಯಲ್ಲಿ ಶ್ವೇತಧಾರಿಯಾಗಿದ್ದು, ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್‌ ಹೇಗಿದೆ? ಸ್ಟೈಲಿಂಗ್‌ ಹೇಗೆ ಮಾಡಿದ್ದಾರೆ ಎಂಬುದರ ಕುರಿತಂತೆ ಫ್ಯಾಷನಿಸ್ಟಾಗಳು ತಿಳಿಸಿದ್ದಾರೆ.

ಚಿತ್ರಗಳು: ಶ್ರುತಿ ಪ್ರಕಾಶ್, ನಟಿ, ಚಿತ್ರಕೃಪೆ: ಅಮೆಯಾ ಮುಪುಸ್ಕರ್‌
1/5

ನಟಿ ಹಾಗೂ ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿ ಶ್ರುತಿ ಪ್ರಕಾಶ್‌ ಮಳೆಗಾಲದ ಈ ಸೀಸನ್‌ನಲ್ಲಿ ಶ್ವೇತಧಾರಿಯಾಗಿದ್ದಾರೆ. ಹಾಲಿನಂತಹ ವರ್ಣದ ಬಿಳಿ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

2/5

ಶ್ರುತಿ ಪ್ರಕಾಶ್‌ ಫ್ಯಾಷನ್‌

ಅಂದಹಾಗೆ, ಶ್ರುತಿ ಪ್ರಕಾಶ್‌ ನಟಿಯಾಗಿದ್ದರೂ, ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ! ಒಂದಿಷ್ಟು ವರ್ಷದ ಹಿಂದೆ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದರು. ಅಲ್ಲಿಂದ ಅವರು ನಟಿಯೆಂಬುದನ್ನು ಜನರು ಗುರುತಿಸಲಾರಂಭಿಸಿದರು. ಮೂಲಗಳ ಪ್ರಕಾರ, ಅವರು ಮುಂಬಯಿಯಲ್ಲಿ ನೆಲೆಸಿದ್ದರೂ, ಸೋಷಿಯಲ್‌ ಮೀಡಿಯಾ ಅಪ್‌ಡೇಟ್ಸ್ ಮೂಲಕ ಇಂದಿಗೂ ಸಕ್ರಿಯರಾಗಿದ್ದಾರೆ.

3/5

ಮಾನ್ಸೂನ್‌ನಲ್ಲಿ ಶ್ವೇತ ವರ್ಣದ ಸೀರೆ

ಅಂದಹಾಗೆ, ಮಾನ್ಸೂನ್‌ನಲ್ಲಿ ಶ್ವೇತವರ್ಣದ ಉಡುಪು ಹಾಗೂ ಸೀರೆ ಟ್ರೆಂಡಿಯಾಗುವುದು ತೀರಾ ಕಡಿಮೆ. ಇದಕ್ಕೆ ಸವಾಲೆಂಬಂತೆ ಇತ್ತೀಚೆಗೆ ನಟಿಮಣಿಯರು ಶ್ವೇತ ವರ್ಣದ ಸೀರೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಇದೀಗ ನಟಿ ಶ್ರುತಿ ಪ್ರಕಾಶ್‌ ಕೂಡ ಸಾದಾ ಶ್ವೇತ ವರ್ಣದ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಮಳೆಯ ತುಂತುರು ಹನಿಯಲ್ಲಿ, ಬಿಳಿ ಸೀರೆಯಲ್ಲಿನ ಫ್ಯಾಷನ್‌ ಫೋಟೋ ಶೂಟ್‌ ಅವರನ್ನು ಮತ್ತಷ್ಟು ಅಂದವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

4/5

ವೈಟ್‌ ಸೀರೆಯಲ್ಲಿ ಅತ್ಯಾಕರ್ಷಕ ಲುಕ್‌

ಇನ್ನು, ವೈಟ್‌ ಸೀರೆಯು ಶ್ರುತಿಯವರನ್ನು ಮತ್ತಷ್ಟು ಅಂದವಾಗಿಸಿದೆ. ಇದಕ್ಕೆ ವೈಟ್‌ & ಬ್ಲ್ಯಾಕ್‌ ಆಕ್ಸೆಸರೀಸ್‌ ಮ್ಯಾಚ್‌ ಮಾಡಿರುವುದು ಸೀರೆಯ ಚೆಂದದ ಲುಕ್‌ಗೆ ಸಾಥ್‌ ನೀಡಿದಂತಾಗಿದೆ. ಇದು ವಿಶೇಷವಾಗಿ ವೈಟ್‌ ಸೀರೆ ಪ್ರಿಯರನ್ನು ಸೆಳೆದಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ನಟಿ ಹಾಗೂ ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿ ಶ್ರುತಿ ಪ್ರಕಾಶ್‌ ಸೀರೆಯಲ್ಲಿ ಶ್ವೇತಧಾರಿಯಾಗಿದ್ದು, ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author