Star Saree Fashion 2025: ನಟಿ ಮೌನ ಗುಡ್ಡೆಮನೆಯ ಡಿಫರೆಂಟ್ ಸೀರೆ ಸ್ಟೈಲಿಂಗ್
Actress Mauna Guddemane: ನಟಿ ಮೌನ ಗುಡ್ಡೆಮನೆ ಸೀರೆ ಲವ್ವರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಾರಿ ಅವರು ಡಿಫರೆಂಟ್ ಡ್ರೇಪಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಸೀರೆ ಸ್ಟೈಲಿಂಗ್ ಬಗ್ಗೆ ಫ್ಯಾಷನ್ ವಿಮರ್ಶಕರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.
ನಟಿ ಮೌನ ಗುಡ್ಡೆಮನೆ ಡಿಫರೆಂಟ್ ಲುಕ್ ನೀಡುವ ಸೀರೆ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೌನ ಸೀರೆ ಲವ್ವರ್
ಹೌದು, ರಾಮಾಚಾರಿ ಸೀರಿಯಲ್‌ನಲ್ಲಿ ನಟಿಸುತ್ತಿರುವ ನಟಿ ಮೌನಗುಡ್ಡೆ ಮನೆ, ಸದಾ ಒಂದಲ್ಲ ಒಂದು ಸೀರೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಹಲವಾರು ಬಾರಿಯಂತೂ ಸೀರೆ ಅಂಗಡಿಗಳಲ್ಲಿ, ರಾಮಾಚಾರಿ ಸೀರಿಯಲ್ ನಟಿಯ ಸೀರೆ ಕೊಡಿ ಎಂದು ಕೇಳಿರುವುದು ಉಂಟಂತೆ! ಆ ಮಟ್ಟಿಗೆ ಅವರು ಉಡುವ ಸೀರೆಗಳು ಪಾಪುಲರ್ ಆಗಿವೆಯಂತೆ! ಹಾಗೆನ್ನುತ್ತಾರೆ ಸ್ಟೈಲಿಂಗ್ ವಿಮರ್ಶಕರು.
ಮೌನ ಗುಡ್ಡೆಮನೆಯ ಪ್ರಯೋಗಾತ್ಮಕ ಸೀರೆ
ಅಂದಹಾಗೆ, ಮೌನ ಗುಡ್ಡೆಮನೆ ಹೆಚ್ಚಾಗಿ ಸೀರೆಗಳಲ್ಲೆ ಕಾಣಿಸಿಕೊಳ್ಳುವುದರಿಂದ ಅವರಿಗೆ ಮಹಿಳಾ ಅಭಿಮಾನಿಗಳು ಹೆಚ್ಚಂತೆ. ಈಗಾಗಲೇ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿರುವ ಅವರು, ಟ್ರಾವೆಲ್ ಫ್ರೀಕ್ ಕೂಡ.
ಹೇಗಿದೆ ಮೌನ ಸೀರೆಯ ಸ್ಟೈಲಿಂಗ್?
ಶ್ರೀ ಸಾಯಿ ಮೈಸೂರ್ ಸಿಲ್ಕ್ ಬ್ರ್ಯಾಂಡ್‌ನ ಮೈಸೂರು ಸಿಲ್ಕ್ ಸೀರೆಯಲ್ಲಿ ಗ್ರ್ಯಾಂಡ್ ಆಗಿ ಕಾಣಿಸಿಕೊಂಡಿರುವ ನಟಿ ಮೌನರ ಈ ಲುಕ್‌ಗೆ ಕಾರಣ ಸೆಲೆಬ್ರೆಟಿ ಸ್ಟೈಲಿಸ್ಟ್ ಸವಿತಾ ರೆಡ್ಡಿ. ಟ್ರೆಡಿಷನಲ್ ಚೆಕ್ಸ್ ಪ್ಯಾಟರ್ನ್‌ನ ಡಬ್ಬಲ್ ಕಲರ್‌ನ ಸೀರೆಯ ಸೆರಗನ್ನು ಒಟ್ಟಾರೆ ಸೇರಿಸಿ ಒಂದು ಭುಜದ ಮೇಲೆ ಪಿನ್ ಮಾಡಲಾಗಿದೆ. ಇದು, ಹಳೆಯ ರಾಣಿ-ಮಹಾರಾಣಿಯರಂತೆ ಬಿಂಬಿಸಿದೆ ಎನ್ನುತ್ತಾರೆ ವಿಮರ್ಶಕರು.
ಮೂಗಿಗೆ ಸೆಪ್ಟಮ್ ರಿಂಗ್
ಇನ್ನು, ಮೌನರ ಈ ಲುಕ್‌ಗೆ ಮಂಜು ಅವರ ಗ್ರ್ಯಾಂಡ್ ಮೇಕಪ್ ಹಾಗೂ ಮಂಜುಳಾ ಅವರು ವಿನ್ಯಾಸ ಮಾಡಿರುವ ಹೇರ್‌ಸ್ಟೈಲ್ ಸಾಥ್ ನೀಡಿದೆ. ಮೂಗಿಗೆ ಧರಿಸಿದ ಸೆಪ್ಟಮ್ ನೋಸ್ ರಿಂಗ್ ಅವರನ್ನು ಥೇಟ್ ರಾಣಿಯಂತೆ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.